
Category: | ಕನ್ನಡ |
Sub Category: | ಕಾದಂಬರಿ |
Author: | ಶಶಿಧರ ವಿಶ್ವಾಮಿತ್ರ | Shashidhara Vishwamitra |
Publisher: | ಕದಂಬ ಪ್ರಕಾಶನ | Kadamba Prakashana |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಕಾದಂಬರಿ ನೆನಪುಗಳ ಒಂದು ಮಹಾಪ್ರವಾಹ. ಸಣ್ಣೀರನ ಕೊಪ್ಪಲಿನಂಥ ಒಂದು ಸಣ್ಣ ಹಳ್ಳಿಯಲ್ಲಿರುವ ಗುಂಡಪ್ಪ ಮೇಷ್ಟರು ಎಂಬ ಒಂದು ಪಾತ್ರ ತನ್ನ ತೀವ್ರ ಸಂವೇದನೆಯಿಂದ ಈ ಭೂಮಿಯ ಸ್ಥಿತಿ ಹೇಗಿದೆ. ಇದರ ವಿನಾಶಕ್ಕೆ ಮನುಷ್ಯನೆಷ್ಟು ಕಾರಣ ಎಂದೆಲ್ಲ ಧ್ಯಾನಿಸುವ ಕಥಾನಕ ಇಲ್ಲಿದೆ. ನೆಮ್ಮದಿಯನ್ನು ಅರಸಬೇಕಾದ ಮನುಷ್ಯ ಪರಮಸುಖ, ಅಂತಸ್ತು, ದುರಾಶೆ, ರಾಜಕೀಯ ಮೊದಲಾದವುಗಳನ್ನು ಬೆಂಬತ್ತಿ ತನ್ನ ನೆಲೆಯನ್ನು ತಾನೇ ಕಳೆದುಕೊಳ್ಳುವ ವಿಪರ್ಯಾಸ ಇಲ್ಲಿನ ಪುಟಪುಟಗಳಲ್ಲೂ ಪ್ರತಿಧ್ವನಿಸಿದೆ.
ಒಂದು ಪಾತ್ರದ ನೆನಪು ಮನುಷ್ಯನ ಭೂತಕಾಲ- ತನ್ನದಷ್ಟೇ ಅಲ್ಲ, ಇಡೀ ಭೂಮಂಡಲದ ಸ್ಮೃತಿಗಳನ್ನು ಕೂಡ ಎಷ್ಟು ನಿಚ್ಚಳವಾಗಿ ಪಡಿಮೂಡಿಸಬಹುದು ಎಂಬುದಕ್ಕೆ ಈ ಕಾದಂಬರಿಯ ವಿಶಿಷ್ಟ ನಿರೂಪಣೆ ಕನ್ನಡಿ ಹಿಡಿಯುವಂತಿದೆ. ಶಶಿಧರ ವಿಶ್ವಾಮಿತ್ರರ ನಿರೂಪಣಾ ವಿಧಾನ ಬಹುಮಟ್ಟಿಗೆ ಕುವೆಂಪು ಅವರ "ಕಾನೂರು ಹೆಗ್ಗಡಿತಿ' ಕಾದಂಬರಿಯನ್ನು ಹೋಲುವಂಥದು. ಆದರೆ ಭೌಗೋಳಿಕ, ನೈಸರ್ಗಿಕ ವಿವರಗಳನ್ನೂ ಒಂದು ಬಗೆಯ ಸ್ವಗತದ ರೀತಿಯಲ್ಲಿ ಸ್ಪರ್ಶಿಸುವ ವಿಧಾನ ಈ ಕಾದಂಬರಿಗಷ್ಟೇ ವಿಶಿಷ್ಟವಾದುದು. ಹಾಗೆ ನೋಡಿದರೆ ಇದು ಕಥಾಪಾತ್ರಗಳುಳ್ಳ ಒಂದು ವಿಶ್ವಕೋಶವೇ ಹೌದು. ಮನಸ್ಸನ್ನು ಮುಟ್ಟುವಂತೆ ನಮ್ಮ ಬೌದ್ಧಿಕತೆಯನ್ನೂ ಪ್ರಚೋದಿಸುವ ಇಂಥ ಕಾದಂಬರಿ ಕನ್ನಡದಲ್ಲಂತೂ ತೀರ ಅಪರೂಪ.
-ಎಸ್. ದಿವಾಕರ್
ಶಶಿಧರ ವಿಶ್ವಾಮಿತ್ರ | Shashidhara Vishwamitra |
0 average based on 0 reviews.