Delivery between 2-8 Days
No returns accepted. Please refer our full policy
Your payments are 100% secure
ಅವಳಿಗೆ ಏನು ಅಲ್ಲದ ನಾನು
ನನಗೆ ಎಲ್ಲವೂ ಆದ ಅವಳು ಒತ್ತಡಗಳ
ಮರೆತು ಹಗುರಾಗಲು ಪ್ರತಿ
ಮುಸ್ಸಂಜೆ ಮಾತಿಗೆ ಕೂರುತ್ತೇವೆ..
ಅವಳು ಹೊರಡಬೇಕೆಂದುಕೊಳ್ಳುತ್ತಾಳೆ
ನಾನು ಇರಬೇಕೆಂದುಕೊಳ್ಳುತ್ತೇನೆ
ನಾವಿಬ್ಬರೂ ಹೆಗಲ ತಾಗಿಸಿ
ಈ ಹಾದಿಯ ಸಾಗಬೇಕೆಂದುಕೊಳ್ಳುತ್ತೇವೆ..
ಆದರೆ ನಾವಿನ್ನೂ ಇಲ್ಲೆ ವಿದಾಯದ ಮುನ್ನ
ಅಪ್ಪುಗೆಗಾಗಿ ಪರಿತಪಿಸುತ್ತಲೇ
ನಾಳೆ ಮತ್ತೆ ಭೇಟಿಯಾಗುವ ಕನಸ
ಕನವರಿಸುತ್ತ ತೇಲಾಡುತ್ತಿದ್ದೇವೆ.
ಉತ್ತಮ್ ದಾನಿಹಳ್ಳಿ |
0 average based on 0 reviews.