
Category: | ಕನ್ನಡ |
Sub Category: | ಕವನಗಳು |
Author: | ಡಾ. ಪ್ರದೀಪಕುಮಾರ ಹೆಬ್ರಿ | Dr Pradeepakumara Hebri |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 978-81-986606-0-2 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಡಾ ಪ್ರದೀಪ ಕುಮಾರ ಹೆಬ್ರಿಯವರು ಕನ್ನಡಮ್ಮನ ಹೆಮ್ಮೆಯ ಪುತ್ರ ಇಪ್ಪತ್ತ ಮೂರು ಮಹಾಕಾವ್ಯಗಳನ್ನು ಹಾಗೂ ಐನೂರಕ್ಕೂ ಮಿಕ್ಕಿ ವೈವಿಧ್ಯಮಯ ಸಾಹಿತ್ಯಕೃತಿಗಳನ್ನು ರಚಿಸಿದ ಇವರ ಕನ್ನಡ ಪ್ರೌಢಿಮೆ ಮತ್ತು ಕನ್ನಡದ ಸೇವೆಗೆ ಬೇರೆ ಹೋಲಿಕೆ ಇಲ್ಲ. ನಡೆದು ನುಡಿದ ಇವರ ಈ ಮಾತು ನಮಗೆ ಮಾಣಿಕ್ಯದ ದೀಪ. ನಡೆನುಡಿಯೊಂಳೊಂದಾದ ಭಕ್ತಿ ಒಪ್ಪುವುದು ಶಿವನಿಗೆ ಎಂಬಂತೆ ನಡೆನುಡಿಯೊಂದಾದ ಮಾತುಗಳು ಪ್ರಭಾವಶಾಲಿಯಾಗುತ್ತವೆ ಮಾತ್ರವಲ್ಲ ಶಾಶ್ವತವಾಗಿ ಉಳಿಯುತ್ತವೆ ಎನ್ನುವುದಕ್ಕೆ ಸಾಕ್ಷಯಾಗಿರುವ ಕೃತಿ ಈ ಮಾಂಡವ್ಯದೀಪ".
"ಮಣಿಮಂತ್ರತಂತ್ರ ಸಿದ್ದಿಗಳ ಸಾಕ್ಷ್ಯಗಳೇಕೆ ಮನಗಾಣಿಸಲು ನಿನಗೆ ದೈವದದ್ಭುತವ?1 ಮನುಜರೊಳಗಾಗಾಗ ತೋರ್ವ ಮಹನೀಯಗುಣ! ವನುವಾದ ಬೊಮ್ಮನದು – ಮಂಕುತಿಮ್ಮ||
ಎಂಬ ಕಗ್ಗದ ನುಡಿಗೆ ಪ್ರತ್ಯಕ್ಷ ಸಾಕ್ಷಿಯಾಗಿ ದೈವದದ್ಭುತದ ಮಹನೀಯ ಗುಣಗಳ ಪ್ರತಿರೂಪವಾಗಿರುವ ಡಾ ಪ್ರದೀಪ ಕುಮಾರ್ ಹೆಬ್ರಿಯವರು ಈ ನಾಡು ಕಂಡ ಒರ್ವ ಶ್ರೇಷ್ಠ "ಅವಧೂತ ಕವಿ" ಇವರ ಕೃತಿಗೆ ಮುನ್ನುಡಿ ಬರೆಯಲು ದೊರತಿರುವುದು ನಾನು ಅತಿಯಾಗಿ ಪ್ರೀತಿಸುವ ಡಿವಿಜಿ ಯವರ ಅನುಗ್ರಹದ ಫಲವೆಂದು ಭಾವಿಸುತ್ತೇನೆ. "ಮಾಂಡವ್ಯದೀಪ" ದಲ್ಲಿರುವ ಪ್ರತಿ ಮುಕ್ತಕವನ್ನು ಆಸಕ್ತಿಯಿಂದ ಮಸ್ತಕಕ್ಕಿಟ್ಟು ಗಂಭೀರವಾಗಿ ಅವಲೋಕಸಿದರೆ ಬದುಕಿನ ಮೌಲ್ಯವನ್ನು ತಿಳಿಸುವ ಬಾಳಿನಾಗಸದ ನಕ್ಷತ್ರಗಳಾಗಿ ಹೊಳೆಯುತ್ತವೆ.ನಾನಂತೂ ಓದಿ ಖುಷಿಪಟ್ಟಿದ್ದೇನೆ ಮಾತ್ರವಲ್ಲ ಹೆಬ್ರಿಯವರ ಜ್ಞಾನದಾಳ, ವಿಸ್ತಾರ ಹಾಗೂ ವೈವಿಧ್ಯತೆಗೆ ಬೆರಗಾಗಿದ್ದೇನೆ.ಈ ಅನನ್ಯವಾದ ಅನುಭವ ಸಹೃದಯರಾದ ತಮಗೂ ಕೂಡ ಆಗುತ್ತದೆ ಎನ್ನುವ ಭರವಸೆ ನನಗಿದೆ.
(ಮುನ್ನುಡಿಯಿಂದ)
- ಪ್ರಭಾಕರ ಶೆಟ್ಟಿ ಕೊಂಡಳ್ಳಿ |
"ವನಸುಮ", ಕುಂದಾಪುರ, ಉಡುಪಿ ಜಿಲ್ಲೆ
ಡಾ. ಪ್ರದೀಪಕುಮಾರ ಹೆಬ್ರಿ | Dr Pradeepakumara Hebri |
0 average based on 0 reviews.