Delivery between 2-8 Days
No returns accepted. Please refer our full policy
Your payments are 100% secure
ಅಜ್ಜಿಗೆ ಏಳು ಜನ ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಕಳಾಗಿದ್ದರೂ ಏನು ಪ್ರಯೋಜನವಿಲ್ಲವೆಂದು ಅವಳೆ ಗೊಣಗುತ್ತಿದ್ದಳು. ಆಷಾಢಕ್ಕೆ ಬಂದ ಮಕ್ಕಳ ನೋಡಿ ಖುಷಿಯಿಂದ ಅವರಿಗೆ ಏನು ಬೇಕೋ ಅದನೆಲ್ಲ ಮಾಡುವುದರಲ್ಲಿಯೇ ಏನೋ ಖುಷಿ ಅವಳಿಗೆ. ಅಷ್ಟೆಲ್ಲ ಕಜ್ಜಾಯ ಮಾಡಿದ್ದರೂ ಒಂದನ್ನು ತಿನ್ನುವುದಕ್ಕೂ ಆಗದೆ ಮಕ್ಕಳ ಆಗುಹೋಗುಗಳ ಬಗ್ಗೆ ರಾತ್ರಿಯಿಡಿ ಮಾತನಾಡುತ್ತಾ, ಒಬ್ಬೊಬ್ಬರಾಗಿ ನಂಗೆ ಸೀರೆ ಬೇಕು, ಕಾಸಿನ ಸರ ಮಾಡು, ಕಿವಿಗೆ ಬೆಂಡೋಲೆ ಕೊಡ್ಡು, ನೋಡಮ್ಮ ನನ್ನ ಕಾಲಿಗೆ ಚೈನು ಇಲ್ಲ, ಕೈಗೆ ಬಳೆಗಳು ಇಲ್ಲ. ಮೂಗಿಗೆ ಮೂಗ್ಗಟ್ಟು ಇಲ್ಲ ಎಂದೆಲ್ಲ ಹೇಳಲು ಶುರುಮಾಡಿದ ಮೇಲೆ ಅಜ್ಜಿಗೆ ನಿದ್ದೆಯೇ ಬರುತ್ತಿರಲಿಲ್ಲ! ಕುರಿಕಂಬಳಿಯ ಹೊದ್ದುಕೊಂಡು ಅತ್ತಿಂದಿತ್ತ ಒದ್ದಾಡಿ ರಾತ್ರಿಯೆಲ್ಲ ಕಣ್ಣೀರಿನಿಂದಲೇ ಕೈತೊಳೆದು ಬೆಳೆ ಅಟ್ಟಿ ಬಾಕ್ಲ ತೊಳೆದು ರಂಗೋಲೆಯಿಟ್ಟು, ಕೊಟ್ಟಿಗೆಯ ಸಗಣಿ ಬಾಚಿ ಹಸುಗಳಿಂದ ಹಾಲು ಕರೆಯಲು ಶುರುಮಾಡುವಾಗಲೇ ಯಾರೋ ಬಂದಂತೆ ಭಾಸವಾಯಿತು ನೋಡಿದರೆ ಅಳಿಯರು ಪಟ್ಟಿಯಂಚಿನ ಪಂಜೆ ಉಟ್ಟುಕೊಂಡು ಹೆಗಲ ಮೇಲೆ ಮೈಸೂರಿನ ಮಿರಿಮಿರಿಯ ಟವಲ್ ಹಾಕಿಕೊಂಡು, ತಮ್ಮ ತಮ್ಮ ಹೆಂಡತಿಯರ ಬಳಿ ಹೋಗಲು ನಿರತರಾದರು.
-'ಮೊಟ್ಟೆಕೋಳಿಯೇ ಬೇಕೆಂದ ಅಳಿಯರು!' ಪ್ರಬಂಧದಿಂದ
Suryakeerthi |
0 average based on 0 reviews.