
ಮಹಿಳೆಯ ಮನಸ್ಸು ಮತ್ತು ಆ ಮನಸ್ಸನ್ನು ರೂಪಿಸುವ ಸಾಮಾಜಿಕ ಬೆಲೆ ಎರಡನ್ನೂ ಒಂದರೊಡನೊಂದು ಬೆಸೆದು ಬರೆದ ಹೊತ್ತಗೆ ಇದಾಗಿದೆ. ತಮ್ಮ ವೃತ್ತಿಯಲ್ಲಿ ಇದಿರಾದ ಹಲವಾರು ಸವಾಲುಳ್ಳ ಸಮಸ್ಯೆಗಳ ಸಿಕ್ಕುಗಳನ್ನು ಸಾವಧಾನದಿಂದ ಜಡಿಸುತ್ತಲೇ, ಇದೇಕೆ ಹೀಗೆ? ಎಂದು ಚಿಂತಿಸಿದ ಸೂಕ್ಷ್ಮ ಮನಸ್ಸಿನ ಫಲವೂ ಇದಾಗಿದೆ. ಈ ಕೃತಿಯುದ್ದಕ್ಕೂ ಮಹಿಳೆಯನ್ನು ನಿರ್ಬಂಧಿಸಿದ ಸಾಮಾಜಿಕ ರಚನೆಯಿಂದಾಗಿ ಅವಳ ಮನಷ್ಟೂ ಕೂಡಾ ಹೇಗೆ ನಿರ್ಬಂಧಕ್ಕೆ ಒಳಗಾಗಿದೆ ಮತ್ತು ಆಕೆಯೇ ಹೇಗೆ ಅದರಿಂದ ಹೊರಬರುವ ದಾರಿಯಿದ್ದರೂ ಸಂಕೋಲೆಯೊಳಗೇ ಅಡಗಿ ಕುಳಿತುಕೊಳ್ಳುತ್ತಾಳೆ ಎಂಬುದನ್ನು ಅನಾವರಣ ಮಾಡಲಾಗಿದೆ. -ಡಾ. ಸಬಿತಾ ಬನ್ನಾಡಿ
Category: | ವೀರಲೋಕ ಪುಸ್ತಕಗಳು |
Sub Category: | |
Author: | ನಡಹಳ್ಳಿ ವಸಂತ್ | Nadahalli Vasanth |
Publisher: | ವೀರಲೋಕ |
Language: | Kannada |
Number of pages : | 148 |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ನಡಹಳ್ಳಿಯವರು ಅಂಗರಾಜಕಾರಣ ಹಾಗೂ ಸಾಂಸ್ಕೃತಿಕ ರಾಜಕಾರಣದ ವರಸೆಗಳನ್ನು ಅರಿತವರು. ಹೆಣ್ಣು ಗಂಡಿನ ನಡುವಿನ ಅಧಿಕಾರ ಹಾಗೂ ಅಧೀನತೆಯ ಸಂಬಂಧಗಳ ಚಾರಿತ್ರಿಕ ವಿನ್ಯಾಸವನ್ನು ಗುರುತಿಸುವ ಅಧ್ಯಯನಪೂರ್ಣತೆ ಅವರಲ್ಲಿದೆ. ಇಂದು ಮನೋಚಿಕಿತ್ಸಕರಿಗೆ ಬೇಕಾಗುವ ಅಂತರಶಿಸ್ತೀಯ ಜ್ಞಾನದ ನೆಲೆಗಳು ಅವರಲ್ಲವೆ. ಆದ್ದರಿಂದಲೇ ಅವರು ಪೂರ್ವಗ್ರಹಗಳನ್ನು ಕಳಚುವಂತೆ ಬರೆಯಬಲ್ಲರು, ಅವರಲ್ಲೊಂದು ಹೆಣ್ಣು ನೋಟವಿದೆ. ಅದರೆ ಅದು ಪಾರ್ಶಿಕವಾದದ್ದಲ್ಲ. ಅವಳ ಮೌನವನ್ನು, ಅವಳ ದ್ವಂದ್ವಗಳನ್ನು ಸಹಾನುಭೂತಿಯಿಂದ ಹಾಗೂ ನಿಖರವಾಗಿ ಅರಿಯಬಲ್ಲ ಒಳನೋಟದಿಂದ ಕಟ್ಟಿಕೊಂಡ ನೋಟವದು. ತನ್ನ ಸುತ್ತ ತಾನೇ ಕಟ್ಟಿಕೊಂಡ ಕೋಟೆಗಳನ್ನು ದಾಣ ಹೊರಬರಲು ಅವಳನ್ನು ಹೋರಾಡುವಂತೆ ಮಾಡುವ ಬರಹವಿದು, ಈ ಬರಹವು ನೊಂದ ಹೆಣ್ಣು ಜೀವಗಳಿಗೆ ಇದು ನಮ್ಮದೇ ಸುಲ್ಲು ಎಂದು ಅನಿಸುವಷ್ಟು ಅಧಿಕೃತವಾಗಿದೆ. ಸಮಸ್ಯೆಗಳನ್ನು ಚರ್ಚಿಸಿ ಚರ್ಚಿಸಿ ಸೋತ ವಾದಗಳಿಗೆ ಪರಿಹಾರದ ಬೆಳಕನ್ನು ಒಳಗಿನಿಂದ ಹುಣ್ಣಸಿಕೊಳ್ಳುವ ದಾರಿಯೊಂದನ್ನು ಇವು ತೆರೆಯುತ್ತಿರುವುದರಿಂದ ಅನನ್ಯವಾಗಿವೆ.
ಡಾ. ಗೀತಾ ವಸಂತ
ನಡಹಳ್ಳಿ ವಸಂತ್ | Nadahalli Vasanth |
0 average based on 0 reviews.