| Category: | ಕನ್ನಡ |
| Sub Category: | ಕಾದಂಬರಿ |
| Author: | ರವೀಂದ್ರ ಕೊಟಕಿ | Ravindra Kotaki |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 500 |
| ISBN | 9789348 355065 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
Love is a profound emotion that resonates deep within your heart. It often begins with a feeling that ignites from within, and this feeling must be experienced before you can truly fall in love.
ಪ್ರೀತಿ ಇಬ್ಬರು ಪರಸ್ಪರ ಅಕರ್ಷಿತರಾದಾಗ ಅದು ಕೇವಲ ಬಾಹ್ಯ ನೋಟಕ್ಕೆ ಸೀಮಿತವಾಗಿರುತ್ತದೆ. ಅದು ಭಾವನಾತ್ಮಕವಾದಾಗ ಎರಡು ಹೃದಯಗಳನ್ನು ಒಟ್ಟುಗೂಡಿಸುತ್ತದೆ. ಪ್ರೀತಿಯು ಅದರ ಶುದ್ಧ ರೂಪವನ್ನು ಪ್ರವೇಶಿಸಿದಾಗ ಅದು ಕೇವಲ ಭಾವನೆಯಾಗಿ ಉಳಿಯುವುದಿಲ್ಲ ಅದು ಅಸ್ತಿತ್ವದ ಭಾಗವಾಗುತ್ತದೆ. ಇಬ್ಬರು ಪರಸ್ಪರರ ಅರ್ಥಮಾಡಿಕೊಂಡು ಒಟ್ಟಿಗೆ ಚಲಿಸಿದಾಗ ಇಬ್ಬರೂ ತಮ್ಮ ಕನಸು ಮತ್ತು ಗುರಿಯನ್ನು ಹಂಚಿಕೊಳ್ಳುವುದರ ಜೊತೆಗೆ ಜೀವನದ ಉದ್ದೇಶ ಮತ್ತು ಆಕಾಂಕ್ಷೆಗಳಲ್ಲಿಯೂ ಸಹ ಒಡಿನಾಡಿಗಳಾಗುತ್ತಾರೆ.
ನೀವು ಯಾರನ್ನಾದರೂ ನಿಮ್ಮ ಹೃದಯದಿಂದ ಪ್ರೀತಿಸಿದಾಗ ನೀವು ಅವರನ್ನು ಮಾತ್ರವಲ್ಲ, ನಿಮ್ಮನ್ನು ಸಹ ಅವರೊಂದಿಗೆ ನಿಮ್ಮಲ್ಲಿ ಭಾವನಾತ್ಮಕವಾಗಿ ನೆಲೆಗೊಳಿಸುತ್ತೀರಿ. ಯಾರಾದರೂ "ನೀನು ನನ್ನವಳು ನನ್ನವನು)" ಎಂದು ಹೇಳಿದಾಗ ಅದು ಹಕ್ಕು ಅಥವಾ ಅಧಿಕಾರದ ಧ್ವನಿಯಾಗಿರುವುದಿಲ್ಲ.
"ನಾನು ನಿನ್ನನ್ನು ನನ್ನ ಹೃದಯದಲ್ಲಿ ಇರಿಸಿದ್ದೇನೆ ಮತ್ತು ಈಗ ನಿನ್ನಿಂದ ನನ್ನ ಜೀವನ ಪರಿಪೂರ್ಣವಾಗಿದೆ" ಎಂದು ಹೇಳುವ ಆತ್ಯಭರಿತ ಮಾತು ಅದಾಗಿರುತ್ತದೆ. ಒಂದು ಗಂಡು ನಿಜವಾಗಿಯೂ ಹೆಣ್ಣನ್ನು ಪ್ರೀತಿಸಿದಾಗ ಅವನು ಅವಳ ಭಾವನೆಗಳು, ಆಸೆಗಳು ಮತ್ತು ಕನಸುಗಳನ್ನು ಗೌರವಿಸಲು ಮೊದಲುಗೊಳಿಸುತ್ತಾನೆ.
ಆ ಪ್ರೀತಿ ಅವಳಿಗೆ ತನ್ನನ್ನು ತಾನು ಅವನ ಅತ್ಯುತ್ತಮ ಸ್ನೇಹಿತೆ, ಸಂಗಡತಿ, ಸಂಗಾತಿಯಾಗಲು ಪ್ರೇರೇಪಿಸುತ್ತದೆ. ಈ ರೂಪಾಂತರವು ಒಳಗಿನಿಂದಲೇ ಘಟಿಸುತ್ತದೆ ಮತ್ತದು ಸುಸ್ಥಿರವಾಗಿರುತ್ತದೆ. ಪ್ರೀತಿ ಇಬ್ಬರ ಬದುಕಿನ ಪಯಣವಾಗುವುದು ಒತ್ತಡ ಅಥವಾ ಭಯದಿಂದಲ್ಲ, ಗೌರವ ಮತ್ತು ಭಾಂದವ್ಯದಿಂದ ಮಾತ್ರ! ನಿಜವಾದ ಪ್ರೀತಿ ನಿಯಂತ್ರಣವನ್ನು ಬಯಸುವುದಿಲ್ಲ ಅದು ಸ್ವತಂತ್ರವಾಗಿ ಅರಳುತ್ತದೆ ಮತ್ತು ನಿರ್ಭೀತಿಯಿಂದ ಮುನ್ನಡೆಯುತ್ತದೆ.
ರವೀಂದ್ರ ಕೊಟಕಿ | Ravindra Kotaki |
0 average based on 0 reviews.