
Category: | ಕನ್ನಡ |
Sub Category: | ಪುರಾಣ -ಧಾರ್ಮಿಕ - ತತ್ವಶಾಸ್ತ್ರ |
Author: | ಎಂ.ನರಸಿಂಹಮೂರ್ತಿ | M Narasimhamurthy |
Publisher: | ಮಾಧ್ಯಮ ಕ್ರಿಯೇಷನ್ಸ್ | Maadhyama Creations |
Language: | Kannada |
Number of pages : | 80 |
Publication Year: | 2025 |
Weight | 300 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಚಿತ್ರಕಲೆಯಲ್ಲಿ ಎಂ.ನರಸಿಂಹಮೂರ್ತಿ ಅವರು ಒಂದು ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಕಡಿಮೆ ರೇಖೆಗಳಲ್ಲಿ ಅವರು ಚಿತ್ರಿಸುವ ಚಿತ್ರಗಳು ಪ್ರಭಾವಿಯಾಗಿವೆ. ಈಗ 'ಕುಂಭಮೇಳ' ಎಂಬ ಶೀರ್ಷಿಕೆಯ ಈ ಪುಸ್ತಕ, ಅವರು ಬರವಣಿಗೆಯನ್ನು ರೇಖಾಚಿತ್ರಗಳನ್ನು ಸೇರಿಸಿ ಹೊರತಂದಿರುವ ಸುಂದರ ಪುಸ್ತಕ. ಇಲ್ಲಿ ಚಿತ್ರಗಳೂ ವಾಕ್ಯಗಳೂ ಒಂದಕ್ಕೊಂದು ಪೂರಕವಾಗಿರುವುದರಿಂದ ಅಕ್ಷರ ಬರವಣಿಗೆ ಕಡಿಮೆಯಿದ್ದು ಬೇಗನೆ ಇಡಿ ಪುಸ್ತಕವನ್ನು ಓದಿ ಖುಷಿಪಡಬಹುದು. ಅಯೋಧ್ಯೆಯ ರಾಮಜನ್ಮಭೂಮಿ ಹೋರಾಟದ ಸಂಬಂಧ ಮೂರು ಬಾರಿ ಅಯೋಧ್ಯೆಗೆ ಹೋಗಿ ಹೋರಾಟದಲ್ಲಿ ಭಾಗವಹಿಸಿರುವ ನರಸಿಂಹಮೂರ್ತಿ ಪ್ರಯಾಗರಾಜದ ಮಹಾಕುಂಭಮೇಳಕ್ಕೂ ಹೋಗಿ ಬಂದಿದ್ದಾರೆ. ಕುಂಭಮೇಳದಲ್ಲಿ ಕಂಡ ಅಭೂತಪೂರ್ವ ದೃಶ್ಯಗಳನ್ನು ತಮ್ಮ ರೇಖೆಗಳಲ್ಲಿ ಸೆರೆಹಿಡಿದಿದ್ದಾರೆ. ಜೊತೆಗೆ ಆ ಕುರಿತು ಕಿರುಶಬ್ದ ಚಿತ್ರಗಳನ್ನು ರಚಿಸಿದ್ದಾರೆ. ಅವೆರಡನ್ನೂ ಸೇರಿಸಿ 'ಕುಂಭಮೇಳ' ಎಂಬ ಹೆಸರಿನಲ್ಲಿ ಒಂದು ಆಕರ್ಷಕ ಪುಸ್ತಕವಾಗಿ ಹೊರತಂದಿದ್ದಾರೆ. ಸುಮಾರು 55 ವರ್ಷಗಳ ಕಾಲ ಎಲ್ಲ ಅಡ್ಡಿ ಆತಂಕಗಳನ್ನು ಕಷ್ಟಕೋಟಲೆಗಳನ್ನು ಎದುರಿಸಿ ಸ್ಥಿತಪ್ರಜ್ಞನಂತೆ ಜೀವನವನ್ನು ಸಾಗಿಸಿಕೊಂಡು, ತನಗೆ ಇಷ್ಟವಾಗುವ ಕೆಲಸಗಳನ್ನು ಮಾಡಿಕೊಂಡು ಬಂದಿರುವ ಎಂ. ನರಸಿಂಹಮೂರ್ತಿ ಒಬ್ಬ ಶಾಂತ ಸ್ವಭಾವದ ಸಾತ್ವಿಕ ಕಲಾರಾಧಕ, ಸಾಹಿತ್ಯ ಪರಿಚಾರಕ, ಧೈಯಜೀವಿ.
– ಬಾಬು ಕೃಷ್ಣಮೂರ್ತಿ
ಎಂ.ನರಸಿಂಹಮೂರ್ತಿ | M Narasimhamurthy |
0 average based on 0 reviews.