| Category: | ವೀರಲೋಕ ಪುಸ್ತಕಗಳು |
| Sub Category: | ಕಾದಂಬರಿ |
| Author: | ಡಾ. ಟಿ. ಗೋವಿಂದರಾಜು | Dr T Govindaraju |
| Publisher: | ವೀರಲೋಕ | Veeraloka |
| Language: | Kannada |
| Number of pages : | |
| Publication Year: | 2025 |
| Weight | 400 |
| ISBN | 9789348 355867 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
'ಕೃಷ್ಣಯ್ಯನ ಕೊಳಲು' ಟಿ. ಗೋವಿಂದರಾಜು ಅವರ ಮೊದಲನೆಯ ಕಾದಂಬರಿ. ಅವರು ಇಲ್ಲಿ ಪುರಾಣದ ಕೃಷ್ಣನ ಕಥೆಯನ್ನು ನಮ್ಮ ಕಾಲದ ದೈನಂದಿನ ರಾಜಕೀಯದಿಂದ ಬಳಲುವ ಜನರ ಕಥೆಯಾಗಿಸಿ ಹೇಳುವ ಪ್ರಯೋಗವನ್ನು ಮಾಡಿದ್ದಾರೆ. ಕೊಳಲನ್ನು ಹಿಡಿವ ಕೃಷ್ಣ, ಚಕ್ರಧಾರಿಯಾಗುವ ಕೃಷ್ಣರ ಕಥೆಯ ಪದರದ ಹಿಂದೆ ಒಬ್ಬಂಟಿಯಾಗುವ, ಆಸಹಾಯಕನಂತೆಯೂ ತೋರುವ ಜನನಾಯಕನ ಕಥೆಯೂ ಆಡಗಿದೆ. ಕೃಷ್ಣಯ್ಯನ ಪಾತ್ರದ ನೆನಪುಗಳ ಸುರುಳಿ ಬಿಚ್ಚಿದಂತೆ ಅವನ ಒಳಗಿನ ಆಪ್ತ ಲೋಕವೂ ಭಾಗವತ, ಮಹಾಭಾರತದ ಕಥಾ ಹೂರಣವಾಗಿ ಬರುತ್ತವೆ. ದ್ವಾರಕೆಯಲ್ಲಿರುವ ಉಳ್ಳವರ ಮಕ್ಕಳ ವರ್ತನೆ, ಸಮಕಾಲೀನ ಸಿರಿವಂತ ಯುವಜನತೆಯ ವರ್ತನೆಯ ಚಿತ್ರಣವಾಗಿ ಕಾಣುತ್ತದೆ. ಜನರ ಅಸಹಾಯಕತೆ, ಧರ್ಮದ ಅಮಲನ್ನು ರಾಜಕೀಯಕ್ಕೆ ಬಳಸುವ ರೀತಿ ಇವು ಅಂದಿನ ಮತ್ತು ಇಂದಿನ ಕಾಲದ ವಾಸ್ತವಗಳೂ ಆಗುತ್ತವೆ. ಕೃಷ್ಣಯ್ಯ ಮಾತ್ರವಲ್ಲದೆ ಯುಧಿಷ್ಠಿರನಂಥ ಇತರ ಪೌರಾಣಿಕ ಪಾತ್ರಗಳೂ ಕಾಲದ ದಿಕ್ಕುತೋಚದ, ನಿರ್ಣಯಕ್ಕೆ ಬರಲಾರದ ನಿಷ್ಪಲವಾಗಿ ಕೊರಗುವ ಪಾತ್ರಗಳಾಗಿ ಎಷ್ಟೋ ಸಲ ಕಾಣುತ್ತವೆ. ಕೊಳಲು ಕೃಷ್ಣಯ್ಯನ ಆಪ್ತಲೋಕದ ಚಿತ್ರಣಕ್ಕೆ ಒದಗಿಬಂದರೆ ದ್ವಾರಕೆಯ ರಾಜಕೀಯ ನಮ್ಮ ಕಾಲದ ಘರ್ಷಣೆಗಳಿಗೆ ಕನ್ನಡಿಯಾಗುತ್ತದೆ. ಈ ಕಥನದ ಓದುಗರು ಗೋವಿಂದ ರಾಜು ಅವರ ಉದ್ದೇಶವನ್ನೂ ದಾಟಿ ಸಮಕಾಲೀನ ಬದುಕನ್ನು ಕುರಿತು ತಮ್ಮ ನಿರ್ದಿಷ್ಟ ನಿಲುವಿನಿಂದ ವಾಗ್ವಾದಕ್ಕೆ ಇಳಿಯುವಂತೆ ಮಾಡುವುದರಲ್ಲಿ ಸಫಲವಾಗಿದೆ.
ಓ.ಎಲ್.ನಾಗಭೂಷಣ ಸ್ವಾಮಿ
ಡಾ. ಟಿ. ಗೋವಿಂದರಾಜು | Dr T Govindaraju |
0 average based on 0 reviews.