Delivery between 2-8 Days
No returns accepted. Please refer our full policy
Your payments are 100% secure
ಎಂದೆಂದಿಗೂ ತನ್ನ ಆಕರ್ಷಣೆಯನ್ನು ಬಿಟ್ಟುಕೊಡದ ನಕ್ಷತ್ರಲೋಕವು ಕೌತುಕಗಳ ಆಗರ. ಅದನ್ನು ತಿಳಿಯುವ ಉತ್ಸುಕತೆ ಪ್ರತಿಯೊಬ್ಬರಲ್ಲೂ ಪುಟಿಯುತ್ತದೆ. ಸುಲಭವಾಗಿ ತಿಳಿಯುವ ಹಗಲು ಬೆಳಕಿನ ಆಟದಿಂದ ಅದು ನಮ್ಮನ್ನು ಭೌತವಿಜ್ಞಾನದ ಆಳಕ್ಕೆ ಸೆಳೆದೊಯ್ಯುತ್ತದೆ. ಹೊಸ ಉಪಕರಣಗಳು, ಕಂಪ್ಯೂಟರ್ಗಳು ಒದಗಿಸುವ ಸಂಕೀರ್ಣ ಫಲಿತಾಂಶಗಳು ಸಾಮಾನ್ಯರನ್ನು ತಲುಪುವುದೇ ಕಷ್ಟವಾಗಿದೆ. ಆರಂಭಿಕ ಮೂಲ ತತ್ವಗಳಿಂದ ಅತಿ ಕ್ಲಿಷ್ಟ ಸಿದ್ಧಾಂತಗಳನ್ನು ಪರಿಚಯಿಸುವ ಪ್ರಯತ್ನವಾಗಿ ತಯಾರಾಗಿರುವ ಈ ಸಂಪುಟ ಆಕರ ಗ್ರಂಥವಾಗಿ ಹೊರಬರುತ್ತಿದೆ. ಪ್ರೊಫೆಸರ್ ಸಿ. ವಿ. ವಿಶ್ವೇಶ್ವರ ಮತ್ತು ಪ್ರೊಫೆಸರ್ ಜಯಂತ್ ನಾರ್ಳೀಕರ್ ಅವರಂತಹ ಶ್ರೇಷ್ಠ ವಿಜ್ಞಾನಿಗಳು ಮತ್ತು ನಮ್ಮ ನಡುವೆಯೇ ಇರುವ ಸಂಶೋಧನಾ ನಿರತ ವಿಜ್ಞಾನಿಗಳೇ ಲೇಖನಗಳನ್ನು ರಚಿಸಿಕೊಟ್ಟಿರುವುದರಿಂದ ಅವರುಗಳ ನಿಖರವಾದ ಶೈಲಿಯ ಪರಿಚಯ ಕನ್ನಡಿಗರಿಗೆ ದೊರಕುತ್ತಿದೆ. ನಮ್ಮ ಭೂಮಿ, ಚಂದ್ರ ಸೌರಮಂಡಲಗಳನ್ನು ದಾಟಿ ನಕ್ಷತ್ರಗಳನ್ನು, ಮುಂದೆ ನಮ್ಮ ಗ್ಯಾಲಕ್ಸಿ ಆಕಾಶಗಂಗೆಯನ್ನು, ತನ್ಮೂಲಕ ಇತರ ಗ್ಯಾಲಕ್ಸಿಗಳ ಬೃಹತ್ ವಿಸ್ತಾರವನ್ನು ಪರಿಚಯಿಸುತ್ತದೆ. ವಿಶ್ವ ಎಂಬುದರ ಅಗಾಧ ಕಲ್ಪನೆಯನ್ನು ಮತ್ತು ಅದಕ್ಕೆ ಪೂರಕವಾಗಿ ಸಿದ್ಧಾಂತಗಳನ್ನೂ ಪ್ರಾಯೋಗಿಕವಾಗಿ ನಾವೆದುರಿಸುವ ತಿಳಿಸಿಕೊಡುವ ಸವಾಲುಗಳೂ ಸಂಭ್ರಮದಲ್ಲಿ ಮುಖ್ಯವಾಗುತ್ತವೆ. ಹಾಗಾಗಿಯೇ, ಮತ್ತೆ ಮತ್ತೆ ಹತ್ತಲೇಬೇಕಾದ ಪ್ರಯತ್ನಗಳಿಗೆ ಅತಿ ಅಗತ್ಯವಾದ ಹಂತ ಹಂತದ ಮೆಟ್ಟಿಲು ಈ ಸಂಪುಟ.
Anantharamu T R, Shylaja B S |
ಅನಂತರಾಮು ಟಿ ಆರ್ |
0 average based on 0 reviews.