| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಶ್ರೀಧರ್ ಗಸ್ತಿ | shridhar Gasthi |
| Publisher: | Amulya pustaka |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸುತ್ತಲಿನ ಪರಿಸರವನ್ನು ಸೂಕ್ಷ್ಮವಾಗಿ ಗಮನಿಸುತ್ತಲೇ ಶ್ರೀಧರ ಗಸ್ತಿಯವರು ಸೂಕ್ಷ್ಮ ಕಥೆಗಳನ್ನು ಹೆಣೆಯುತ್ತಾರೆ. ಹೀಗಾಗಿ ಅವರ ಕಥೆಗಳಲ್ಲಿ ಶೋಷಿತರ ಧ್ವನಿ ಕೇಳಿಸುತ್ತದೆ; ಉಳ್ಳವರ ಅಹಂಕಾರದ ಲೇಂಕಾರವು ಕಾಣಿಸುತ್ತದೆ. ಸಮ ಮತ್ತು ಸುಂದರ ಸಮಾಜದ ಆಶಯವನ್ನು ಹೊಂದಿರುವ ಅವರ ಕಥೆಗಳು ಎಲ್ಲ ಬಡಜನರು, ಅಸಹಾಯಕರು, ಶೋಷಣೆಗೆ ಒಳಪಟ್ಟವರು - ಹೀಗೆ ನಾನಾ ನಮೂನೆಯ ನಿರ್ಲಕ್ಷಿತ ಜನರ ಒಳತೋಟಿಯ ಅಂತರ್ ಧ್ವನಿಯಾಗಿವೆ.
ಗ್ರಾಮೀಣ ಪ್ರದೇಶದಿಂದ ಬಂದಿರುವ ಶ್ರೀಧರ ಗಸ್ತಿಯವರಿಗೆ ಗ್ರಾಮಗಳಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಪರಿಚಯವಿದೆ. ಅಲ್ಲಿ ನಡೆಯುವ ಸಂಚು, ಒಳಸಂಚು, ದಗಲಬಾಜಿತನ, ವಂಚನೆ ಇವುಗಳ ಜೊತೆಗೆ ಸುಳಿಗಾಳಿಯಂತೆ ಸುಳಿಯುವ ಮಾನವೀಯ ಗುಣಗಳು, ಜಾತಿ, ಮತ ಧರ್ಮಗಳನ್ನು ಮೀರಿ ಮನುಷ್ಯತ್ವವನ್ನು ಪ್ರತಿಪಾದಿಸುವ ಒಳ್ಳೆಯತನ ಈ ಎಲ್ಲ ಅಂಶಗಳು ಗಸ್ತಿಯವರ ಕಥೆಗಳ ಕಚ್ಚಾ ವಸ್ತುಗಳಾಗಿವೆ. ಓದುಗರೆದರು ಗ್ರಾಮೀಣ ಪರಿಸರವನ್ನು ಜೀವಂತವಾಗಿ ಅನಾವರಣಗೊಳಿಸಿರುವುದು ಶ್ರೀಧರ ಗಸ್ತಿಯವರ ಕಥೆಗಳ ವೈಶಿಷ್ಟವಾಗಿದೆ.
ಅವರ ಕಥೆಗಳಲ್ಲಿ ಒಮ್ಮಿಂದೊಮ್ಮೆಲೇ ಬರುವ ತಿರುವುಗಳು ಓದುಗನಲ್ಲಿ ಕುತೂಹಲ ಮೂಡಿಸುತ್ತವೆ. ಕಥೆಯ ಕೊನೆಗೆ ಕಥೆಗಾರ ಶೋಷಣೆಗೆ ಒಳಪಟ್ಟವರ ಪರವಾಗಿ ನಿಂತು ಅವರಿಗೆ ಧ್ವನಿ ಕೊಡುತ್ತಾನೆ. ಕೆಲವು ಕಥೆಗಳಲ್ಲಿ ಶ್ರೀಧರ ಗಸ್ತಿಯವರೇ ಪಾತ್ರವಾಗಿದ್ದನ್ನು ಕಥೆಗಳ ಅಂತರ್ಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗೊತ್ತಾಗುತ್ತದೆ. ಅವರ ಒಂದೊಂದು ಕಥೆಯು ಕಾದಂಬರಿಯಾಗಬಲ್ಲಷ್ಟು ವಿಶಾಲತೆಯನ್ನು ಪಡೆದಿವೆ. ಹತ್ತು ಪುಟಗಳ ಅವರ ಕಥೆ ನೂರು ಪುಟಗಳ ಕ್ಯಾನ್ವಾಸ್ ಹೊಂದಿರುವುದನ್ನು ಕಥೆ ಓದಿದಾಗ ಗೋಚರಿಸುತ್ತದೆ. ಅವರ ಕಥೆಗಳಲ್ಲಿ ನಡೆಯುವ ಘಟನೆಗಳು ವಿಸ್ಮಯಗಳನ್ನುಂಟು ಮಾಡುತ್ತವೆ.
ಡಾ. ಸರಜೂ ಕಾಟ್ಕರ್
ಶ್ರೀಧರ್ ಗಸ್ತಿ | shridhar Gasthi |
0 average based on 0 reviews.