
Category: | ಕನ್ನಡ |
Sub Category: | ಸಿನಿಮಾ |
Author: | Gopalakrishna Pai |
Publisher: | Ankita Pustaka |
Language: | Kannada |
Number of pages : | 1 |
Publication Year: | |
Weight | |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಿನಿಮಾ ತಯಾರಿಕೆಯಲ್ಲಿ ನಿರ್ದೇಶಕನ ಸಾರಥ್ಯವಿದ್ದರೂ ಒಂದು ಸಮಷ್ಟಿ ಕ್ರಿಯೆಯಲ್ಲಿ ನಡೆಯುವ ಚಟುವಟಿಕೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯ. ತನ್ನ ಮನಸ್ಸಿನ ಪಾತಳಿಯಲ್ಲಿ ಹುಟ್ಟಿದ ಕಲ್ಪನೆಯನ್ನು ಸಾಕಾರಗೊಳಿಸಲು ಆ ನಿರ್ದೇಶಕ ಹಲವಾರು ಜನರ ಬೌದ್ಧಿಕ ವಿಸ್ತಾರವನ್ನು ಬಳಸಿಕೊಂಡು ಅಂತ್ಯರೂಪ ಕೊಡುತ್ತಾನೆ. ಹಾಗೆ ಪಾಲುಗೊಳ್ಳುವ ಮಂದಿ ತಮ್ಮ ಪ್ರತಿಭೆಯನ್ನು ಉಪಯೋಗಿಸುತ್ತಲೇ ತಮ್ಮ ಮುಖಂಡನಾದ ನಿರ್ದೇಶಕನ ಬಗ್ಗೆ ತಮ್ಮದೇ ಆದ ನಿಲುವು ಹೊಂದಿರುತ್ತಾರೆ. ನಿರ್ದೇಶಕನ ಕುರಿತು ಅವನ ಸಮಕಾಲೀನರಾದ ಇತರ ನಿರ್ದೇಶಕರು, ನಟ-ನಟಿಯರು ಕೂಡಾ ತಮ್ಮದೇ ಅಭಿಪ್ರಾಯಗಳನ್ನು ಇಟ್ಟುಕೊಂಡಿರುತ್ತಾರೆ. ಕೆಲವು ಬಾರಿ ಆ ಅಭಿಪ್ರಾಯಗಳು ವಿಮರ್ಶಾತ್ಮಕವಾಗಿ ಇರುತ್ತವಲ್ಲದೆ ಅವನ್ನು ಆರೋಗ್ಯಕರವಾಗಿ ಸ್ವೀಕರಿಸಿದರೆ ಸದರಿ ನಿರ್ದೇಶಕನ ಬೆಳವಣಿಗೆಗೂ ದಿಕ್ಕೂಚಿಯಾಗಬಲ್ಲುದು. ಸದ್ಯ ಕನ್ನಡ ಚಿತ್ರರಂಗದಲ್ಲಿ ಅಂಥ ಪರಂಪರೆಯೊಂದು ಇನ್ನೂ ಬಂದಿಲ್ಲವೆನ್ನಬಹುದು. ಅದರಿಂದಾಗಿ ಅನೇಕ ನಿರ್ದೇಶಕರು ಜನಮಾನಸದಿಂದ ಮರೆಯಾಗುವ ಸಾಧ್ಯತೆಗಳೇ ಹೆಚ್ಚು.
ಈ ಕೃತಿಯಲ್ಲಿ ಪಿ. ಶೇಷಾದ್ರಿ ಅವರ ಒಡನಾಟಕ್ಕೆ ಬಂದ ಅನೇಕರ ವೈಯಕ್ತಿಕ ಉಲ್ಲೇಖಗಳೂ, ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಕ್ರಿಯೆಗಳೂ ಇವೆ. ಇಲ್ಲಿಯತನಕ 12 ಸಿನಿಮಾಗಳನ್ನು ಮಾಡಿ ಎಂಟು ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ, ಚಿತ್ರೋತ್ಸವಗಳಲ್ಲಿ ಅನೇಕ ಬಾರಿ ನಾಮನಿರ್ದೇಶನಗೊಂಡಿರುವ ಶೇಷಾದ್ರಿಯವರ ಸಾಧನೆಗಳ ಬಗ್ಗೆ ಇಂಥದ್ದೊಂದು ಕೃತಿಯ ಅನಿವಾರ್ಯತೆ ಮುಂದಿನ ತಲೆಮಾರಿಗೆ ಅಗತ್ಯವಿದೆ.
Gopalakrishna Pai |
0 average based on 0 reviews.