
Category: | ಕನ್ನಡ |
Sub Category: | ಅಂಕಣ ಬರಹಗಳು |
Author: | ನಾಗೇಶ್ ಜೆ. ನಾಯಕ | Nagesha J Nayaka |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 970-01-985506-19 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸ್ವತಃ ಕವಿಯೂ ಆಗಿರುವ ನಾಗೇಶ್ ನಾಯಕ ಅವರು ಕನ್ನಡದ ಐವತ್ತು ಕವಿ ಕವಯತ್ರಿಯರ ತಲಾ ಒಂದೊಂದು ಕವನವನ್ನು ವಿಶ್ಲೇಷಿಸಿ ಉದಯಕಾಲ ದಿನಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಮೊದಲನೆಯದಾಗಿ ಒಬ್ಬ ಕವಿ ತನ್ನ ಸಮಕಾಲೀನ ಕವಿಗಳ ಕವಿತೆಯನ್ನು ಓದುವುದು, ಓದಿ ಬರೆಯುವುದು ಶ್ಲಾಘನಾರ್ಹ ಸಂಗತಿ. ಅದಕ್ಕಾಗಿ ಅವರನ್ನು ನಾನು ಮನಃಪೂರ್ವಕ ಅಭಿನಂದಿಸುತ್ತೇನೆ.
ಕನ್ನಡ ಕಾವ್ಯ ಇತ್ತೀಚಿನ ವರ್ಷಗಳಲ್ಲಿ ಹೊಸತನದೆಡೆ ಮುಖ ಮಾಡಿದೆ. ಹೊಸ ಉತ್ಸಾಹದಿಂದ ಕವಿಗಳು ಬರೆಯುತ್ತಿದ್ದಾರೆ. ನವನವೀನ ಪ್ರಯೋಗಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಸಮಕಾಲೀನ ಕವಿಯೊಬ್ಬರು ತಮ್ಮ ಕವನಗಳ ಬಗ್ಗೆ ನಾಲ್ಕು ಪ್ರೋತ್ಸಾಹದಾಯಕ ಮಾತುಗಳನ್ನು ಬರೆದರೆ ಬರೆಯುವ ಉತ್ಸಾಹ ಹೆಚ್ಚುವುದಂತೂ ನಿಜ. ಕವಿಯನ್ನೂ ಕವಿಯ ಬರವಣಿಗೆಯನ್ನೂ ಒಟ್ಟೋಟ್ಟಿಗೇ ಪರಿಚಯಿಸುವ ಲೇಖನಗಳು ಓದುವುದಕ್ಕೆ ಸಂತೋಷ ನೀಡುವುದಷ್ಟೇ ಅಲ್ಲದೇ ಮಾಹಿತಿಪೂರ್ಣವಾಗಿಯೂ ಇವೆ. ಕಾವ್ಯಾಸಕ್ತರು ಜತೆಗಿಟ್ಟು ಕೊಳ್ಳಬೇಕಾದ ಸಂಕಲನವಿದು ಎಂಬ ಭರವಸೆ ಕೊಡುತ್ತಾ ಅವರ ಕಾವ್ಯಯಾನ ಮತ್ತು ವಿಮರ್ಶೆಯ ಪಯಣ ಎರಡೂ ಜತೆಜತೆಗೆ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸುತ್ತೇನೆ. ಕವಿತೆಗಳು ಪರಸ್ಪರ ದ್ವೀಪಗಳಂತಾಗಿರುವ ನಮ್ಮ ಮನಸುಗಳನ್ನು ಬೆಸೆಯುವ ಕಿರುನಾವೆಗಳಾಗಲಿ ನಾಗೇಶರಂತೆಯೇ ನಮ್ಮೆಲ್ಲರದ್ದೂ ಕೂಡ. ఎంబ ಬಯಕೆ
--ದೀಪಾ ಹಿರೇಗುತ್ತಿ
ನಾಗೇಶ್ ಜೆ. ನಾಯಕ | Nagesha J Nayaka |
0 average based on 0 reviews.