Delivery between 2-8 Days
No returns accepted. Please refer our full policy
Your payments are 100% secure
ನಮ್ಮ ಯೋಚನಾ ಲಹರಿ, ಜ್ಞಾನ ಸಂಪತ್ತು, ಸಜ್ಜನರ ಸಹವಾಸ, ಇವೆಲ್ಲವೂ ನಮ್ಮನ್ನು ಮಾನಸಿಕವಾಗಿ ಬೆಳೆಸುತ್ತವೆ.
ಆತ್ಮೀಯತೆ, ಸುರಕ್ಷತೆ, ಅನುಕಂಪ, ಪ್ರೀತಿ ವಾತ್ಸಲ್ಯ, ಇಂಥ ಮಾನವ ಸಂವೇದನೆಗಳ ಕೊಂಡಿಗಳೇ ಭಾವನಾತ್ಮಕ ಸಂಬಂಧ ಬೆಳಸಲು ಸಹಕಾರಿಯಾಗುತ್ತವೆ.
ಬೌದ್ಧಿಕವಾಗಿ ಬೆಳೆಯಬೇಕಾದರೆ ಸಮತೋಲನ… ಅಂದ್ರೆ ಸಾಂದರ್ಭಿಕ ಸಮತೋಲನ, “ನುಡಿದಂತೆ ನಡೆ” ಇಂಥ ನುಡಿಗಳನ್ನು ನಾವು ಯಥಾವತ್ತಾಗಿ ಪಾಲಿಸಬೇಕಾಗುತ್ತೆ.
ಇನ್ನು ಆಧ್ಯಾತ್ಮ. ಪರಮೋಚ್ಛ ಸ್ಥಾಯಿಯಲ್ಲಿ ನಮ್ಮ ತನು, ಮನ, ಆತ್ಮ, ಅಹಂ, ಭಕ್ತಿ, ಬದ್ಧತೆ, ಮೌಲ್ಯಗಳು, ಧ್ಯಾನ, ಇವೆಲ್ಲದರ ಅರಿವು ನಮ್ಮಲ್ಲಿ ಉಂಟಾಗಿ ನಮಗೆ ಬೇಕೆನ್ನಿಸಿದ ದಿಕ್ಕಿನಲ್ಲಿ ಸಕಾರಾತ್ಮಕವಾಗಿ ಬದಲಿಸುವ ಶಕ್ತಿ ದೊರೆಯುತ್ತದೆ. ಇದನ್ನೆಲ್ಲ ಆಧ್ಯಾತ್ಮಿಕವಾಗಿ ಕಲಿಯಬೇಕು, ಬೆಳೆಯಬೇಕು.
ಆದರೆ ನಾನು ಪೂರ್ಣವಾಗಿ ಈ ವಿಚಾರಗಳ ಬಗ್ಗೆಯೇ ಹೇಳುತ್ತಿಲ್ಲ. ಹೇಳುವಷ್ಟು ದೊಡ್ಡವನೂ ನಾನಲ್ಲ. ನಾನೊಬ್ಬ ಸಹೃದಯ ಮಾನವನಾಗಿ… ಅಂದ್ರೆ ಎಲ್ಲರಲ್ಲಿಯೂ ಜೀವಿಸುವಂತಹ, ಹೊಂದಿಕೊಳ್ಳುವಂತಹ, ಒಬ್ಬ ವಿನಯಶೀಲ ಮಾನವ, ಆನಂದವನ್ನು ಗಳಿಸುವುದರಲ್ಲಿಯೂ, ಪಡೆಯುವುದರಲ್ಲಿಯೂ, ಕೊಡುವುದರಲ್ಲಿಯೂ, ಹೇಗೆ ನಮ್ಮ ಈ ಕೌಶಲ್ಯವನ್ನು ವೃದ್ಧಿ ಪಡಿಸಿಕೊಳ್ಳಬೇಕು ಎಂಬ ಕಲೆಯನ್ನು ರವಷ್ಟಾದರೂ… ಅಂದ್ರೆ ರವೆಯ ಒಂದು ತುಣಕನ್ನ
G S Lakshmiprasad |
ಜಿ.ಎಸ್. ಲಕ್ಷ್ಮೀಪ್ರಸಾದ್ |
0 average based on 0 reviews.