ಕನ್ನಡದ ಮಹತ್ವದ ಹಿರಿಯ ಲೇಖಕಿಯರಲ್ಲೊಬ್ಬರಾದ ವಸುಮತಿ ಉಡುಪರವರ ಕಥಾಜಗತ್ತು ವಿಶಿಷ್ಟವಾದದ್ದು. ಸಂದುಹೋಗುತ್ತಿರುವ ಒಂದು ಕಾಲಘಟ್ಟದ ತಲೆಮಾರಿನ ಚಿತ್ರಣವನ್ನು ಕಟ್ಟಿಕೊಡುವ ವಸುಮತಿ ಉಡುಪರವರು ಅಪ್ಪಟ ಕಥೆಗಾರ್ತಿ, ನೇರವಾಗಿ, ಸಹಜ ಹದದಲ್ಲಿ ಕಂಡಿರಿಸಿರುವ ಇವರ ಪಾತ್ರಗಳು ಹೆಣ್ಣುಮನದ ನಾನಾಭಾವಗಳ ರಂಗಶಾಲೆ, ಪಾತ್ರಗಳ ದಿಟ್ಟತನ, ನೇರವಂತಿಕೆ, ಬದುಕನೆದುರಿಸುವ ಛಲ, ತಾಕಲಾಟಗಳ ನಡುವೆಯೂ ಗುರಿಯನ್ನು ಕಂಡುಕೊಳ್ಳುವ ಆಶಾವಾದ ಇಲ್ಲಿ ಅಸಾಧಾರಣ ರೀತಿಯಲ್ಲಿ ಅಭಿವ್ಯಕ್ತಗೊಂಡಿದೆ. ಬದುಕಿನ ಹತ್ತು ಹಲವಾರು ಹಳವಂಡಗಳಲ್ಲಿ, ಬಾಳಿನ ಕುಲುಮೆಯಲ್ಲಿ ಬೆಂದು ನೊಂದರೂ ತಮ್ಮದೇ ರೀತಿಯಲ್ಲಿ ಪ್ರತಿರೋಧಿಸುತ್ತಾ, ಜೀವನದ ಕಟು ಸತ್ಯವನ್ನು ಅರಿಯುತ್ತಾ ಮಾನವೀಯ ಮೂರ್ತಿಗಳಾಗಿ ನಿಲ್ಲುವ ಇಲ್ಲಿನ ಹಲವಾರು ಪಾತ್ರಗಳ ಕಥೆ ಹೃದಯಸ್ಪರ್ಶಿಯಾಗಿ ಚಿತ್ರಿತಗೊಂಡಿದೆ.
Category: | ಕನ್ನಡ |
Sub Category: | ಕಥಾ ಸಂಕಲನ |
Author: | Vasumathi Udupa |
Publisher: | Ankita Pustaka |
Language: | Kannada |
Number of pages : | |
Publication Year: | 2025 |
Weight | 1/8 demi |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
Vasumathi Udupa |
0 average based on 0 reviews.