
Category: | ಕನ್ನಡ |
Sub Category: | ಕಾದಂಬರಿ |
Author: | ಫೌಝಿಯ ಸಲೀಂ | Fouzia Saleem |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 00919606474289-38 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕಾದ೦ಬರಿಗಳ ವಿಶೇಷತೆ ಎಂದರೆ ಕಥೆ ರಾಮತ್ತು ಅವುಗಳು ಓದಿಸಿಕೊಂಡು ಹೋಗುವ ವೇಗ. ಎಲ್ಲಿಯೂ ಏಕತಾನತೆ ಎನಿಸದೆ, ಕಥೆ ಆಸಕ್ತಿದಾಯಕವಾಗಿ ಓದಿಸಿಕೊಂಡು ಹೋಗುವುದರ ಜೊತೆಗೆ ಉತ್ತಮ ಕಥಾ ಹಂದರ, ಆ ನಾಯಕ, ನಾಯಕಿ ನಮ್ಮವರು ಎನ್ನುವಷ್ಟು ಆಪ್ತ ಭಾವ ಮೂಡಿಸಿದರೆ ಕಥೆ ಗೆದ್ದಂತೆ. "ಹರ್ಷ ರಾಗ" ಹೆಸರು ಮೂಡಿಸುವ ಪ್ರೇಮ ಕಥೆ ಇರಬಹುದು ಎನ್ನುವುದು ಸುಳ್ಳಲ್ಲ. ಇಲ್ಲಿ ಅಗಾಧ ಪ್ರೀತಿ ಇದೆ. ಕೌಟುಂಬಿಕ ಕಥೆಯಿದೆ. ಹಗೆಯಿದೆ, ಮತ್ಸರವಿದೆ, ತಾಳ್ಮೆ ಸಹನೆ ಮುಂತಾದ ಭಾವನೆಗಳು ಹೇರಳವಾಗಿ ಸಿಗುತ್ತಾ ಹೋಗುತ್ತದೆ. ಕಥೆಯನ್ನು ಸರಳವಾಗಿ ಇಷ್ಟೇ ಎಂದು ಊಹಿಸಬಹುದು ಎಂದುಕೊಂಡರೆ ಸಣ್ಣದಾದ ತಿರುವು ಪಡೆದು ಮುಂದೆ ಸಾಗುತ್ತದೆ. ಸಾಮಾಜಿಕ ಕಥೆಗಳನ್ನು ಇಷ್ಟಪಡುವವರಿಗೆ ಸರಳವಾಗಿ ರಂಜಿಸುತ್ತದೆ. ಗೆಳೆತನದ ಎರಡೂ ಮಜಲುಗಳು ಅಂದರೆ ಅದಮ್ಮ ಪ್ರೀತಿ ಮತ್ತು ಅತ್ಮೀಯತೆ ಮತ್ತು ಅದನ್ನೇ ಬಳಸಿಕೊಳ್ಳುವ, ದುರುಪಯೋಗ ಪಡಿಸಿಕೊಳ್ಳುವ ಮತ್ತೊಂದು ಮಜಲು, ಹೇಗಿರಬಾರದು ಮತ್ತು ಹೇಗಿರಬೇಕು ಎನ್ನುವುದಕ್ಕೆ ಸಾಕ್ಷಿ ನೀಡಿದಂತಿದೆ. ನೀವು ಕಾದಂಬರಿ ಪ್ರಿಯರಾದರೆ, ನವಿರು ಭಾವನೆಗಳು ಮುದ ನೀಡುತ್ತವೆ ಎಂದು. ಯೋಚಿಸುವವರಾದರೆ ಖಂಡಿತ ಈ ಪುಸ್ತಕ ನಿಮ್ಮನ್ನು ನಿರಾಶೆಗೊಳಿಸದು. ಹದ ಬೆರೆತ ಕಥೆ ನಿಮ್ಮಓದಿನ ಸಮಯವನ್ನು ಜಗ್ಗಾಡದೆ, ಒಂದೇ ಗುಕ್ಕಿಗೆ ಓದಿ ಮುಗಿಸುವಂತೆ ಮಾಡುತ್ತದೆ. ಇನ್ನೇಕೆ ತಡ, ಈ ಓದು ನಿಮ್ಮನ್ನು ಹರ್ಷಿಸಲಿ. ಲೇಖಕಿಯ ಈ ಕೃತಿ ನಿಮ್ಮನ್ನು ಮುದಗೊಳಿಸಲಿ.
ಶ್ವೇತಾ ಭಿಡೆ ಲೇಖಕರು
ಫೌಝಿಯ ಸಲೀಂ | Fouzia Saleem |
0 average based on 0 reviews.