| Category: | ಕನ್ನಡ |
| Sub Category: | ಕವನಗಳು |
| Author: | ಡಾ. ಲಕ್ಷಣ ವಿ.ಎ | Dr. Lakshmana V A |
| Publisher: | pustaka mane |
| Language: | Kannada |
| Number of pages : | |
| Publication Year: | 2026 |
| Weight | 100 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಕವಿತೆ ಯುದ್ಧವನ್ನು ನಿಲ್ಲಿಸಲಾರದು. ಹಸಿವನ್ನು ಒಂದೇ ದಿನದಲ್ಲಿ ನೀಗಿಸಲಾರದು. ನಿರುದ್ಯೋಗ, ವಲಸೆ, ಅನ್ಯಾಯ, ಏಕಾಂ3 -ಇವುಗಳನ್ನೂ ತಕ್ಷಣ ಪರಿಹರಿಸಲಾರದು. ಆದರೆ ಕವಿತೆ ಒಂದು ಮಹತ್ವದ ಕೆಲಸ ಮಾಡಬಲ್ಲದು ಮನುಷ್ಯ ಸಂಪೂರ್ಣ ಕಣ್ಣಾಗಿಬಿಡುವುದನ್ನು ತಡೆಯಬಲ್ಲದು. ಜಗತ್ತಿನ ದೊಡ್ಡ ಸಂಕಟಗಳ ನಡುವೆಅತ್ಯಂತ ಅಪಾಯಕಾರಿಯಾದದ್ದು ಮನುಷ್ಯನ ಸಂವೇದನೆ ಸಾಯುವುದು. ಪ್ರತಿದಿನದ ಸುದ್ದಿಗಳಲ್ಲಿ ಯುದ್ಧ ಮರಣ, ಹನಿವು ವಲಸೆ, ಆತ್ಮಹತ್ಯೆ, ದೇಹ - ಇವೆಲ್ಲವನ್ನು ನೋಡುತ್ತಾ ನೋಡುತ್ತಾ ಒಂದು ಹಂತದ ನಂತರ ಮನುಷ್ಯನಿಗೆ ಯಾತನೆಗಳು ಸಹಜ ಅಭ್ಯಾಸವಾಗಿಬಿಡುತ್ತವೆ. ಒಂದು ಕವಿತೆಯ ಅಗತ್ಯ ಬದುಕಿನ ರ ಸಂಘರ್ಪದ ಜೊತೆಗೇ ಆರಂಭವಾಗುತ್ತದೆ. ಕವಿತೆ ಒಂದು ಗಾಯದ ಮೇಲೆ ನೇರವಾಗಿ ಔಷಧಿ ಹಾಕುವುದಿಲ್ಲ, ಮೊದಲು ಆ ಗಾಯ ಇನ್ನೂ ನೋವು ಕೊಡುತ್ತಿದೆ ಎಂಬುದನ್ನು ನಮಗೆ ನೆನಪಿಸುತ್ತದೆ. ಯುದ್ಧ ಪೀಡಿತ ಸ್ಥಳದಲ್ಲಿ ಮಗುವಿನ ಚಿತ್ರವನ್ನು ದಿನ ಪತ್ರಿಕೆಯಲ್ಲಿ ನೋಡಿ ಮತ್ತೆ ನಾವು నమ్మ దీనిక4 deriబయడు; ఆదర్ అదేశ్ రుచి రణుగళూళగిన భయ మక్తు యకారీయ ಒಂದು ಎಳೆ ನಮ್ಮ ಎದೆಯೊಳಗೆ ಉಳಿಸಿಬಿಡುತ್ತದೆ. ಒಬ್ಬಕಾರ್ಮಿಕನ ಆಯಾಸ, ಒಂಟಿ ವೃದ್ಧೆಯ ಮೌನ, ನಗರದ ಮಧ್ಯೆ ಕುಸಿದು ಹೋಗುತ್ತಿರುವ ಯುವಕನ ಒಳಜಗತ್ತು ಅವನು ಅನುಭವಿಸುತ್ತಿರುವ ಏಕಾಂತಕ್ಕೆ ಒಂದು ಭಾಷೆ ಇದೆ. ಅದು ಕಾವ್ಯದ ಭಾಷೆ ರು ಜಗತ್ತಿನಲ್ಲಿ ಇನ್ನೂ ಯಾರೋ ನಿನ್ನಂತೆಯೇ ನೋವನ್ನು ಅನುಭವಿಸುತ್ತಿದ್ದಾರೆ ಎಂಬ ಅಭಯವಷ್ಟೇ ಸಾಕು ಮನುಷ್ಯ ಬದುಕಿ ಉಳಿಯಲು, ಇಂತಹ ಯುದ್ಧಗಳ ಕಾಲದಲ್ಲೂ ಹಾಡುಗಳು ಹುಟ್ಟುತ್ತವೆ ನಿಜವೆಂದರೆ ಯುದ್ಧ ವಲಸೆಯ ಕಾಲದಲ್ಲಿ ಜನಪದಗಳು ಮರಳಿ ಮರು ಹುಟ್ಟು ಪಡೆಯುತ್ತವೆ. ಕಾರಾಗೃಹಗಳಲ್ಲೂ ಕಪತಿಗಳು ಬರೆಯಲ್ಪಡುತ್ತವೆ. ಏಕೆಂದರೆ ಕವಿತೆ ಸಮಸ್ಯೆಗಳನ್ನು ಪರಿಹರಿಸುವ ಯಂತ್ರವಲ್ಲ, ಆದರೆ ಮನುಷ್ಯನೊಳಗಿನ ಮಾನವೀಯತೆ ಸಾಯದಂತೆ ಕಾಪಾಡುವ ಉಸಿರು, ಹೀಗಾಗಿ ಜಗತ್ತಿನ ಸಂಕಟಗಳಿಗೆ ಕವಿತೆ ಔಷದಿ ಎಂದರೆ ಅದು ನೋವನ್ನು ಅಳಿಸುತ್ತದೆ ಎನ್ನುವ ಕಾರಣಕ್ಕಲ್ಲ. ಈ ನೋವುಗಳ ಮಧ್ಯೆಯೂ ಮನುಷ್ಯನನ್ನು ಮನುಷ್ಯನಾಗಿಯೇ ಉಳಿಸುವುದಕ್ಕೆ
- ಡಾ. ಲಕ್ಷ್ಮಣ ವಿ.ಎ
ಡಾ. ಲಕ್ಷಣ ವಿ.ಎ | Dr. Lakshmana V A |
0 average based on 0 reviews.