Category: | ಕನ್ನಡ |
Sub Category: | ವ್ಯಕ್ತಿತ್ವ ವಿಕಸನ |
Author: | ಪ್ರಜ್ವಲಾ ಶೆಣೈ ಕಾರ್ಕಳ | Prajwala shenoy karkala |
Publisher: | pustaka mane |
Language: | Kannada |
Number of pages : | |
Publication Year: | 2024 |
Weight | 1/8 demi |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
"ರಾವಣನ ದಶಶಿರವದೇಂ? ನರನು ಶತಶಿರನು| ಸಾವಿರಾತ್ಮಗಳನೊಂದರೊಳಣಗಿಸಿಹನು|| ಹಾವಾಗಿ ಹುಲಿಯಾಗಿ ಕಪ್ಪೆ ಹುಲ್ಲೆಯುವಾಗಿ ಭೂವೋಮಕಶಯನು ಮಂಕುತಿಮ್ಮ". ಅಂದರೆ ರಾವಣನಿಗೆ ಹತ್ತು ತಲೆಗಳಿರಬಹುದು. ಆದರೆ ನಮ್ಮ ಮನುಷ್ಯನಿಗೆ ನೂರು ತಲೆಗಳು ಸಾವಿರಾರು ಮುಖಗಳನ್ನು ತನ್ನ ಒಂದೇ ಮುಖದಲ್ಲಿ ಅಡಗಿಸಿಕೊಂಡು ಸಂದರ್ಭ ಬಂದಾಗ ತನ್ನ ಒಂದೊಂದು ವಿಶೇಷ ಮುಖವನ್ನು ಪ್ರದರ್ಶಿಸುತ್ತಾನೆ. ಅದಕ್ಕಾಗಿ ಡಿವಿಜಿ ಸಕಲ ಪ್ರಾಣಿಗಳ ಗುಣಗಳನ್ನು ಹೊಂದಿರುವ ಮನುಷ್ಯನನ್ನು ಈ ಸೃಷ್ಟಿಯ ವಿಶೇಷ ಎಂದಿದ್ದಾರೆ. ಈ ಕಗ್ಗಕ್ಕೆ ಮಾದರಿಯಾಗಿ ಲೇಖಕಿ ಪ್ರಜ್ವಲಾ ಶೆಣೈಯವರು ತಮ್ಮ "ಗೆಲುವು ಸಾಧಿಸುವ ಮುನ್ನ' ಪುಸ್ತಕದಲ್ಲಿನ ಲೇಖನಗಳಲ್ಲಿ ಮನುಷ್ಯನ ವಿವಿಧ ಮುಖಗಳನ್ನು ಮನೋಜ್ಞವಾಗಿ ಚಿತ್ರಿಸಿದ್ದಾರೆ. ಸಲಪತ್ತೆರಡು ಉತ್ತಮ ಲೇಖನಗಳಿರುವ ಇವರ 'ಭರವಸೆಯ ಹೆಜ್ಜೆಗಳು" ಪುಸ್ತಕದಲ್ಲಿ ಜೀವನದಲ್ಲಿ ಎದುರಾಗುವ ಎಲ್ಲಾ ಸವಾಲುಗಳನ್ನು ಮತ್ತು ಉಂಟಾಗುವ ಭಾವನೆಗಳನ್ನು ಬಹಳ ಸುಂದರವಾಗಿ ಚಿತ್ರಿಸಿ ಸಹೃದಯರ ಮನಸ್ಸನ್ನು ಗೆದ್ದು ಸಾಹಿತ್ಯ ವಲಯದಲ್ಲಿ ಒಂದು ಹೊಸ ಭರವಸೆಯನ್ನು ಮೂಡಿಸಿದ್ದರು. ಓದುಗರ ಮೆಚ್ಚುಗೆಗಿಂತ ಮಿಗಿಲಾದ ಪ್ರಶಸ್ತಿ ಬೇರಿಲ್ಲ ಪ್ರಜ್ವಲಾ ಶೆಣೈಯವರ 'ಗೆಲುವು ಸಾಧಿಸುವ ಮುನ್ನ" ಕೃತಿಯಲ್ಲಿರುವ ಲೇಖನಗಳೆಲ್ಲ ಈಗಾಗಲೇ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಸಾಹಿತ್ಯಾಸಕ್ತರ ಮನಸ್ಸನ್ನು ಗೆದ್ದಿವೆ. ನಾನು ಕೂಡ ಇವರ ಲೇಖನಗಳ ಓದುಗ, ಹೊಸ ಹೊಸ ವಿಷಯವನ್ನು ತೆಗೆದುಕೊಂಡು ಬಹಳ ಸುಂದರವಾಗಿ ಮನಮುಟ್ಟುವಂತೆ ನಿರೂಪಿಸುವ ಇವರ ಬರವಣಿಗೆಯ ಶೈಲಿಯಲ್ಲಿ ಪ್ರಬುದ್ಧತೆಯಿದೆ. ಪ್ರತಿಭಾವಂತ ಶಿಕ್ಷಕಿಯಾಗಿ, ಪ್ರಬುದ್ಧ ಲೇಖಕಿಯಾಗಿ ಸಹೃದಯರ ಅಭಿಮಾನ ಮತ್ತು ಗೌರವಕ್ಕೆ ಪಾತ್ರರಾಗಿರುವ ಪ್ರಜ್ವಲಾ ಶೆಣೈವರ ಲೇಖನಿಯಿಂದ ಇನ್ನಷ್ಟು ಉತ್ತಮ ಕೃತಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಣೆಯಾಗಲೆಂದು ಶುಭ ಹಾರೈಸುತ್ತೇನೆ.
ಪ್ರಜ್ವಲಾ ಶೆಣೈ ಕಾರ್ಕಳ | Prajwala shenoy karkala |
0 average based on 0 reviews.