Delivery between 2-8 Days
No returns accepted. Please refer our full policy
Your payments are 100% secure
ನಾನು ಹಿಂಬಾಲಿಸಿಕೊಂಡು ಹೋದ ತತ್ವಜ್ಞಾನಿಗಳ ದೊಡ್ಡ ಪಟ್ಟಿಯೇ ಇದೆ. ನನ್ನನ್ನು ಇನ್ನಿಲ್ಲದಂತೆ ಕಾಡಿದವರು ಜೆ. ಕೃಷ್ಣಮೂರ್ತಿ, ಓಶೋ ಮತ್ತು ಯೂ.ಜಿ. ಕೃಷ್ಣಮೂರ್ತಿ. ಈ ಮೂವರ ಪೈಕಿ ಮೊದಲ ಇಬ್ಬರನ್ನು ಓದಿಕೊಂಡೆ. ಯೂ.ಜಿ. ಕೃಷ್ಣಮೂರ್ತಿ ಜತೆಗೆ ಏಳು ವರ್ಷ ಒಡನಾಡಿದೆ. ನಾನು ಓದಿದ ಗ್ರೀಕ್ ಮತ್ತು ರೋಮನ್ ತತ್ವಶಾಸಜ್ಞರು ಸ್ಪಿರಿಚುವಲ್ ಜಗತ್ತಿನ ಬಗ್ಗೆ ಕುತೂಹಲ ಹುಟ್ಟಿಸಿದರು. ಭಾರತೀಯ ತತ್ವಶಾಸಜ್ಞರು ಆಧ್ಯಾತ್ಮಿಕ ಲೋಕದ ಪರಿಚಯ ಮಾಡಿಸಿದರು. ಓದುತ್ತಾ, ಹುಡುಕುತ್ತಾ, ನಶ್ವರತೆಯ ನಡುವೆಯೇ ಶಾಶ್ವತವಾದ ಆನಂದ ಯಾವುದು ಎಂದು ತಡಕಾಡುತ್ತಾ ಇದ್ದವನಿಗೆ ಇಳಂಗೋವನ್ ಸಿಕ್ಕ. ಇದು ನನ್ನ ಅಲೌಕಿಕ ಪಯಣದ ಕತೆ. ನಾನು ಕಂಡ, ಒಡನಾಡಿದ, ಓದಿದ ಎಲ್ಲವನ್ನೂ ಈ ಪುಸ್ತಕದಲ್ಲಿ ತೆರೆದಿಟ್ಟಿದ್ದೇನೆ. ಏನೂ ಗೊತ್ತಾಗದೇ ಹೋದಾಗ ಇಳಂಗೋವನ್ ಎದುರಲ್ಲಿ ಮಗುವಿನಂತೆ ಕೂತು ಬಿಟ್ಟಿದ್ದೇನೆ. ಗಾಳಿಗುಡ್ಡದ ಅಂಚಿನಲ್ಲಿ ನಿಂತು ನಕ್ಷತ್ರ ಖಚಿತ ಆಕಾಶ ನೋಡುತ್ತಾ, ಬೆಳಕಿಗಾಗಿ ಕಾದಿದ್ದೇನೆ. ನಿಮಗೆ ಆಧ್ಯಾತ್ಮಿಕ ಪಯಣದಲ್ಲಿ ಆಸಕ್ತಿಯಿದ್ದರೆ, ಅಲೌಕಿಕದ ಹುಡುಕಾಟ ಇಷ್ಟವಾಗಿದ್ದರೆ ಈ ಪುಸ್ತಕ ನಿಮಗೆ ನೆರವಾಗುತ್ತದೆ. ಇಳಂಗೋವನ್ ನಿಮಗೂ ಸಿಗುತ್ತಾನೆ. ದಾರಿ ಮುಗಿಯಿತು ಅಂತ ಅಂಚಿಗೆ ಬಂದು ನಿಂತಾಗ, ಕೈ ಹಿಡಿದು ನಡೆಸುತ್ತಾನೆ. ನಿಮ್ಮ ಇಳಂಗೋವನ್ ನಿಮಗೆ ಸಿಗಲಿ.
Jogi |
0 average based on 0 reviews.