
Category: | ಕನ್ನಡ |
Sub Category: | ಕವನಗಳು |
Author: | ಶ್ಯಾಮಲಾ ಗೋಪೀನಾಥ್ | shyamala Gopinath |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 970-01-990140-53 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಹಿಂದಕ್ಕೆ ಹೆಜ್ಜೆ ಹಾಕುತ್ತ ನದೀಮೂಲಕ್ಕೆ ಹೋದರೆ ಅಲ್ಲಿ ಸಣ್ಣ ತೊರೆ. ಕಾಣುವಂತೆ ಕಾವ್ಯ ಅದರ ಮೂಲದಲ್ಲೂ ಕವಿತೆಯೇ, ಹನಿಕೂಡ ಹಳ್ಳವಾಗಿ ತೊರೆಯಾಗಿ ನದಿ ಸಮುದ್ರವಾಗುವ ಪ್ರಕ್ರಿಯೆಯನ್ನು ಕಾವ್ಯಕ್ಕೂ ಹೋಲಿಸಬಹುದು ಮಹಾಕಾವ್ಯ, ಖಂಡಕಾವ್ಯ, ಕಥನ ಕವನ, ಭಾವಗೀತೆ, ಚುಟುಕ, ಹನಿಗವನ - ಏನೇ ಇರಲಿ ಅವುಗಳ ಜೀವಸತ್ವ ಏನಿದೆಯೆಂಬುದಷ್ಟೆ ಮುಖ್ಯ. ಶ್ಯಾಮಲಾ ಅವರ ಸ್ವ… ಈ ನಿಟ್ಟಿನಲ್ಲಿ ಲಕ್ಷಣಯುಕ್ತವಿದ್ದು ರೂಪ ಭಾವ ಭಂಗಿಗಳಿಗೆ ಸಂಬಂಧಿಸಿ ಮೈತುಂಬಿವೆ. ಕವಿತೆ ನಿರಾಕರಣೆಗೆ ಒಳಗಾದಂತೆ ಅನಿಸುವ ಕಾಲ ಇದು. ಸಾಮಾಜಿಕ ಜಾಲತಾಣಗಳು ಅದರ ಗಾತ್ರವನ್ನು ಕುಗ್ಗಿಸಿವೆ. ಕವಿತೆಯೊಂದರೊಳಗೆ ಭಾವನೆ, ಧ್ವನಿ, ತಾತ್ವಿಕತೆ ಮುಂತಾದನ್ನು ಒಳಗೊಳಿಸುವಲ್ಲಿ ಕವಿ ಸೋತಂತೆ ಕಂಡರೂ ಈ ಕೃತಿ ಅಂತಹ ಕುಸಿತಕ್ಕೆ ಒಳಗಾಗಿಲ್ಲ. ಇದೊಂದು ಯಶಸ್ವೀ ಪುಷ್ಪಾರ್ಚನೆ. ಪ್ರಕೃತಿ ಪರಿಸರ, ಅದರ ಸುಂದರ ತಾಣಗಳು, ಮನುಷ್ಯನನ್ನು ರೂಪಿಸುವ ಅನುಭವಗಳು, ಅಚಲ ಜೀವನ ಮೌಲ್ಯಗಳು, ದೇಶಭಕ್ತಿ, ಹೆತ್ತವರ ನೆನಪು, ಕನಸುಗಳಿದ್ದು ಸ್ವಾರ್ಥ, ದೌರ್ಜನ್ಯ ಮುಂತಾದ್ದರ ಕುರಿತು ಸಾತ್ವಿಕ ರೋಷವೂ ಸೇರಿ ಅನೇಕ ಮಗ್ಗುಲಲ್ಲಿ ಕವಿಮನಸ್ಸು ಅಲೆದಾಡಿದೆ. ಎಲ್ಲವನ್ನೂ ಒಂದು ಅಂತರದಿಂದ ಕವಯಿತ್ರಿ ಕಾಣುತ್ತಾರೆ. ಇದೇ ಸಾಧಾರಣೀಕರಣ, ಚಿತ್ರಣದ ಬದಲು ಬಿಡಿ ಚಿತ್ರಗಳ ಸರಳತೆಯೂ ಖುಶಿಕೊಡುತ್ತದೆ. ಕಾವ್ಯ ಹಾಡಾಗಿ, ಓದಿಹೇಳಿದ್ದಾಗಿ ಮತ್ತು ಮೌನ ಓದಾಗಿ ನಮ್ಮ ಬಳಿ ಬರುತ್ತದೆ ತಾನೆ. ಈ ಮೂರರಲ್ಲಿ ತಾನೇ ಕುಳಿತು ಓದಿ ಸವಿಯುವುದಕ್ಕೆ ಹಾಳಿತವೆನಿಸುವ ರಚನೆಗಳಿವು. ಮೂರೋ ನಾಲ್ಕೂ ಕವನಗಳು ಭಾವಗೀತೆಯ ಗಾತ್ರದಲ್ಲಿದ್ದರೆ ಉಳಿದಂತೆ ಹತ್ತು ಹನ್ನೆರಡು ಸಾಲುಗಳಲ್ಲಿ ಮುಗಿಯುತ್ತವೆ. ಅಷ್ಟರೊಳಗೇ ಹೇಳಬೇಕಾದ್ದನ್ನು ತುಂಬಿರುವುದು ಯಶಸ್ವೀ ಪ್ರಯತ್ನವೇ ಸರಿ. ಸೊಂಪಾದ ಗದ್ಯ ಲೇಖಕಿ ಮೊದಲ ಕೃತಿಯಲ್ಲೇ ಕಾವ್ಯಾತ್ಮಕತೆಯ ಎತ್ತರ ಸಾಧಿಸಿರುವುದು ಅಭಿನಂದನೀಯ
.
ಪ್ರೊ. ಪಿ ಎನ್. ಮೂಡಿತ್ತಾಯ ನಿವೃತ್ತ ಪ್ರಾಂಶುಪಾಲರು ಕಾಸರಗೋಡು
ಶ್ಯಾಮಲಾ ಗೋಪೀನಾಥ್ | shyamala Gopinath |
0 average based on 0 reviews.