
Category: | ಕನ್ನಡ |
Sub Category: | ಲೇಖನಗಳು, ಪ್ರಬಂಧಗಳು |
Author: | RJ ನಯನಾ ಶೆಟ್ಟಿ | RJ Nayana Shetty |
Publisher: | ವಿನಯ ಪ್ರಕಾಶನ | Vinaya Prakashana |
Language: | Kannada |
Number of pages : | |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಜೀವನದಲ್ಲಿ ಯಶಸ್ಸು ಎಂದರೆ ಏನು?
ಹಣ ಗಳಿಸುವುದು, ಜನಪ್ರಿಯತೆ ಗಳಿಸುವುದು, ಅರಮನೆಯಂತಹ ಮನೆ, ದುಬಾರಿ ಕಾರು, ನಾವು ಅಂದುಕೊಂಡಂತೆ ಬದುಕುವುದು - ಹೀಗೆ ಒಂದಿಷ್ಟು ಉತ್ತರಗಳು ಸಿಗುತ್ತವೆ.
ಆದರೆ ಇಷ್ಟೇನಾ ಬದುಕು??
-ನಿಜವಾದ ಯಶಸ್ಸು – ಒಬ್ಬ ವ್ಯಕ್ತಿ ತಾನು ಬದುಕುವುದರ ಜೊತೆಗೆ ಕೈಲಾದ ಮಟ್ಟಿಗೆ ಒಂದಿಷ್ಟು ಜನರಿಗೆ ಬದುಕು ಕಟ್ಟಿ ಕೊಡುವುದು, ಇತರರ ಬದುಕಿನಲ್ಲಿ ನಗು ಅರಳಿಸುವ ಕಾಯಕ ಮಾಡುವುದು. ಅಂತಹ ಯಶಸ್ಸಿನ ಕಥೆಯಾಗಲು ನಾವಿಡುವ ಪ್ರತೀ ಹೆಜ್ಜೆಯಲ್ಲೂ ಮೌಲ್ಯಗಳು, ಸಂಸ್ಕಾರ, ಜವಾಬ್ದಾರಿ, ದೇಶ ಪ್ರೇಮ, ಪರಿಸರ ಪ್ರೀತಿಯ ಜೊತೆಗೆ ಸಾಗುವ ನಮ್ಮ ಬದುಕು ಮುಂದಿನ ಪೀಳಿಗೆಗೆ ಮಾದರಿಯಾಗುವ ರೀತಿ ಇದ್ದರೆ ಎಷ್ಟು ಚೆಂದ ಅಲ್ಲವೇ? ಮಕ್ಕಳು ನಾವು ಹೇಳಿ ಕೊಟ್ಟಿದ್ದನ್ನು ಕಲಿಯುವುದಿಲ್ಲ ಬದಲಿಗೆ ನಮ್ಮನ್ನು ನೋಡಿ ಕಲಿಯುತ್ತಾರೆ ಎನ್ನುವ ಮಾತಿದೆ. ಯಾವಾಗಲೂ ಒಳ್ಳೆಯ ಬದಲಾವಣೆಗಳನ್ನು ಬೇರೆ ಯಾರೋ ಮಾಡುತ್ತಾರೆಂದು ಕಾಯುವ ಬದಲು ಅದೇ ಬದಲಾವಣೆ ನಮ್ಮಿಂದಲೇ ಶುರುವಾಗಲಿ ಎಂದು ಮುಂದೆ ಹೊರಟರೆ ಹೇಗೆ? ಹಾಗೆ ಹೊರಟವರ ಕಥೆಗಳು, ಅನುಭವಗಳ ಜೊತೆ ಸೇರಿದ ಪಯಣವಿದು.
ಈ ಪುಸ್ತಕದಲ್ಲಿ ಸೋತು ಗೆದ್ದವರ ಕಥೆ ಇದೆ, ಪರಿಸರದ ಜೊತೆಗೆ ಬದುಕು ಕಟ್ಟಿಕೊಂಡವರ ಸಂಭ್ರಮವಿದೆ, ನಮ್ಮ ಹೆಜ್ಜೆ ಗುರುತುಗಳಲ್ಲಿ ನಮ್ಮ ಮಕ್ಕಳನ್ನು ನಡೆಸುವ ಜವಾಬ್ದಾರಿಯಿದೆ. ಹಿರಿಯರು ಪಾಲಿಸುತ್ತಿದ್ದ ನಾವು ಮರೆತ ಪರಿಸರ ಸಂರಕ್ಷಣೆಯ ಪಾಠವಿದೆ. ಜಗತ್ತೆಷ್ಟು ಬದಲಾದರೂ ಮನದೊಳಗೆ ಇನ್ನೂ ಕೂಡ ಜಾಗೃತವಾಗಿರುವ ನಮ್ಮ ಹಿರಿಯರು ಕಟ್ಟಿಕೊಟ್ಟಿದ್ದ ಭಾರತೀಯತೆಯ ಮೂಲ ಸೆಲೆಯಿದೆ.
ಇಲ್ಲಿರುವ ಪ್ರತೀ ಲೇಖನವನ್ನು ಬರೆಯುವಾಗ ನನ್ನೊಳಗೆ ಜೀವಂತವಾಗಿದ್ದ 'ಬದಲಾವಣೆ ನಮ್ಮಿಂದಲೇ ಶುರುವಾಗಲಿ' ಎನ್ನುವ ಚಿಂತನೆ ನನ್ನನ್ನು ಆವರಿಸಿದಂತೆ ಜಗತ್ತನ್ನೂ ಆವರಿಸಲಿ ಎನ್ನುವ ಪ್ರಾರ್ಥನೆ ಜೊತೆಗಿದೆ.
ಆರ್. ಜೆ. ನಂಯನಾ ಶೆಟ್ಟಿ
RJ ನಯನಾ ಶೆಟ್ಟಿ | RJ Nayana Shetty |
0 average based on 0 reviews.