ಡಾ. ವಸುಂಧರಾ ಭೂಪತಿ
Category: | ಕನ್ನಡ |
Sub Category: | ಸೃಜನಶೀಲ ಸಾಹಿತ್ಯ |
Author: | DR VASUNDHARA BHOPATHI |
Publisher: | ವಸಂತ ಪ್ರಕಾಶನ |
Language: | Kannada |
Number of pages : | |
Publication Year: | |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ನಮ್ಮ ದೇಶವನ್ನು ದೊಡ್ಡ ಮಟ್ಟದಲ್ಲಿ ಪೀಡಿಸುವ ಪಿಡುಗುಗಳೆಂದರೆ ಅನಕ್ಷರತೆ, ಅಜ್ಞಾನ. ಇದರ ಪರಿಣಾಮದಿಂದ ಜನತೆ ಹಲವು ಬಗೆಯ ದೈಹಿಕ, ಮಾನಸಿಕ ರೋಗಗಳಿಗೆ ಬಹುಬೇಗ ಬಲಿಯಾಗುವುದು ಕಂಡುಬರುತ್ತದೆ. ಇತ್ತೀಚಿನ ದಿನಗಳಲ್ಲಿ ಮತ್ತೆ ಮತ್ತೆ ಕಾಣಿಸಿಕೊಳ್ಳುವ ಕೆಲವು ವಿಶೇಷ ಕಾಯಿಲೆಗಳ ಜೊತೆಗೆ ಸಾಮಾನ್ಯವಾಗಿ ಎಲ್ಲರಿಗೂ ಬರಬಹುದಾದ ಕೆಲವು ರೋಗಗಳು ಸಮುದಾಯಗಳನ್ನು ಕಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇವುಗಳನ್ನು ಸಂಪೂರ್ಣ ತೊಡೆದುಹಾಕಲು ಸಾಧ್ಯವಾಗದಿದ್ದರೂ ನಿಯಂತ್ರಣದಲ್ಲಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ನಮ್ಮ ಜೀವನವನ್ನು ಕೆಲವು ಬಗೆಯ ಶಿಸ್ತುಗಳಿಗೆ ಒಳಗುಮಾಡಿಕೊಳ್ಳಬೇಕಾಗುತ್ತದೆ. ಆಹಾರ, ವ್ಯಾಯಾಮ, ಮಾನಸಿಕ ಒತ್ತಡ ಇವುಗಳನ್ನು ಸರಿಯಾದ ಕ್ರಮದಲ್ಲಿ ಪರಿಪಾಲಿಸಿದರೆ ಇದು ಕಾಡುವ ಕಾಯಿಲೆಯಾಗದೇ ತಡೆಗಟ್ಟಬಹುದಾದ ಜೀವನ ವಿನ್ಯಾಸವಾಗುತ್ತದೆ. ಇದಕ್ಕೆ ಅಗತ್ಯವಾದ ತಿಳಿವಳಿಕೆಗಳನ್ನು ಜನಸಾಮಾನ್ಯರಿಗೆ ಮುಟ್ಟಿಸುವಂತಹ ಕಾರ್ಯವನ್ನು ‘ಆರೋಗ್ಯ ಚಿಂತನ ಮಾಲಿಕೆ’ಯ ಕೃತಿಗಳು ಮಾಡುತ್ತವೆ. ಆಹಾರಕ್ರಮ ದಿನದಿಂದ ದಿನಕ್ಕೆ ಬದಲಾಗುತ್ತಿದೆ. ನಮ್ಮ ಊಟದ ತಟ್ಟ್ಟೆಯಲ್ಲಿ ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಹೊಟೇಲ್ ಆಹಾರವೇ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಅದರಲ್ಲೂ ಜಂಕ್ಫುಡ್ ಹಾವಳಿಯ ಮಧ್ಯೆ ಮನೆಯ ಊಟ ಯಾರಿಗೂ ಬೇಡವಾಗಿದೆ. ಆದ್ದರಿಂದ ನಾವು ಸೇವಿಸುವ ಅಕ್ಕಿಯಿಂದ ಹಿಡಿದು ಗ್ರೀನ್ಚಹಾದವರೆಗೆ ಎಲ್ಲ ಆಹಾರ ಪದಾರ್ಥಗಳಲ್ಲಿ ಏನೇನೆಲ್ಲ ಉಪಯುಕ್ತ ರಾಸಾಯನಿಕ ಅಂಶಗಳಿವೆ, ಪೋಷಕಾಂಶಗಳಿವೆ ಮತ್ತು ಅವು ಹೇಗೆ ನಮಗೆ ಕಾಯಿಲೆ ಬಾರದಂತೆ ತಡೆಯಬಲ್ಲವು ಎಂಬುದನ್ನು ಪ್ರಸಿದ್ಧ ವೈದ್ಯೆ, ಪ್ರಖ್ಯಾತ ವೈದ್ಯಸಾಹಿತಿ ಹಾಗೂ ‘ಆರೋಗ್ಯ ಚಿಂತನ ಮಾಲಿಕೆ’ಯ ಸಂಪಾದಕರಾಗಿರುವ ಡಾ. ವಸುಂಧರಾ ಭೂಪತಿಯವರು ‘ಆಹಾರಸಿರಿ’ ಕೃತಿಯಲ್ಲಿ ವಿವರಿಸಿದ್ದಾರೆ. ಆಹಾರದ ಬಗೆಗಿನ ಅನೇಕ ಹೊಸ ವಿಷಯಗಳನ್ನು ಈ ಕೃತಿಯಲ್ಲಿ ಅಳವಡಿಸಲಾಗಿದೆಯಲ್ಲದೆ ಕೆಲವು ಮಿಥ್ಯಾಕಲ್ಪನೆಗಳ ಬಗೆಗೂ ತಿಳಿಸಲಾಗಿದೆ.
DR VASUNDHARA BHOPATHI |
0 average based on 0 reviews.