
Category: | ಕನ್ನಡ |
Sub Category: | ಕಾದಂಬರಿ |
Author: | PROF KALEGOWDA NAGAVARA |
Publisher: | ಕದಂಬ ಪ್ರಕಾಶನ | Kadamba Prakashana |
Language: | Kannada |
Number of pages : | 168 |
Publication Year: | 2025 |
Weight | 400 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಯಶಸ್ವಿ ಯುದ್ಧಗಳಲ್ಲಿ ಪುಲಿಕೇತಿಯಲ್ಲಿದ್ದ ಅತುಳ ಪರಾಕ್ರಮ, ವಿಜಗೀತು ಮನೋಬಲ, ಅರ್ಥಶಾಸ್ತ್ರ ನೈಪುಣ್ಯ ಸಾರುವ ಮತ್ತು ಶಾಸನದ ಆಧಾರವಿರುವ ಅನೇಕ ದೃಷ್ಟಾಂತಗಳನ್ನು ಶಿವಾನಂದ ನಾಗಣ್ಣವರ ಒದಗಿಸಿದ್ದಾರೆ. ಅಪ್ಪಾಯಿಕ-ಗೋವಿಂದ, ಕೊಂಕಣದ ಮೌರ್ಯರು, ಕಂಚಿಯ ಪಲ್ಲವರು, ಮಧುರೆಯ ಪಾಂಡ್ಯರು ಮೊದಲಾದವರನ್ನು ಪರಾಭವಗೊಳಿಸಿದ ಸಾಹಸಗಳು ರೊಚಕವಾಗಿವೆ. ಆಳುಪರೊಂದಿಗೆ ವೈವಾಹಿಕ ಸಂಬಂಧ ಮತ್ತು ಗಂಗರೊಂದಿಗೆ ಸ್ನೇಹ, ಲಾಟರು, ಮಾಳವ-ಗುರ್ಜರ, ರೇವತಿ ದ್ವೀಪಗಳ ಮೇಲೆ ತನ್ನ ಅಧಿಪತ್ಯದ ಮೊಹರನ್ನು ಒತ್ತಿದ್ದು ಮುಂತಾದ ಸಾಲು ಸಾಲು ಸಾಧನೆಗಳ ಜಯದುಂದುಭಿಯನ್ನು ಲೇಖಕರು ಮೊಳಗಿಸಿದ್ದಾರೆ. ಈ ಎಲ್ಲಕ್ಕೂ ಕಿರೀಟವಿಟ್ಟಂತೆ ಕಂಗೊಳಿಸುವುದು ಕನೌಜಿನ ಚಕ್ರವರ್ತಿ ಹರ್ಷವರ್ಧನನ್ನು ಹಿಮ್ಮೆಟ್ಟಿಸಿದ್ದು, ಚರಿತ್ರಾರ್ಹ ಸಾಹಸ ಮೆರೆದು ದಕ್ಷಿಣಾಪಥೇಶ್ವರನಾಗಿ ವಿಜೃಂಭಿಸಿದ ಏಕಮೇವ ಅದ್ವಿತೀಯ ರಾಜಪರಮೇಶ್ವರ ಪುಲಿಕೇತಿ ಎಂಬುದನ್ನು ಶಿವಾನಂದ ನಾಗಣ್ಣವರ ವಿವರವಾಗಿ ವರ್ಣಿಸಿದ್ದಾರೆ. ಕರ್ನಾಟಕವನ್ನು ಭಾರತದ ರಾಜಕೀಯ ಭೂಪಟದಲ್ಲಿ ಧ್ರುವ ನಕ್ಷತ್ರವಾಗಿ ರಾರಾಜಿಸುವಂತೆ ಮಾಡಿದ ವೀರಾಗ್ರಣಿ ಎರಡನೆಯ ಪುಲಿಕೇತಿಯ ಅಸಾಧಾರಣ ಸಿದ್ದಿ, ಸಾಧನೆ ಮತ್ತು ಅಪೂರ್ವ ಕೊಡುಗೆಯನ್ನು ನಿರೂಪಿಸಿರುವ ಈ ಕೃತಿಯ ಲೇಖಕರಾದ ಡಾ. ಶಿವಾನಂದ ಆರ್. ನಾಗಣ್ಣವರ ಅವರನ್ನು ಅಭಿನಂದಿಸಲು ಹರ್ಷವಾಗುತ್ತದೆ. -ನಾಡೋಜ ಪ್ರೊ. ಹಂ.ಪ. ನಾಗರಾಜಯ್ಯ
PROF KALEGOWDA NAGAVARA |
ಕಾಳೇಗೌಡ ನಾಗವಾರ |
0 average based on 0 reviews.