Category: | ಕನ್ನಡ |
Sub Category: | ಸಿನಿಮಾ |
Author: | Gopalakrishna Pai |
Publisher: | Ankita Pustaka |
Language: | Kannada |
Number of pages : | |
Publication Year: | 2024 |
Weight | |
ISBN | |
Book type | Paperback |
Delivery between 2-8 Days
No returns accepted. Please refer our full policy
Your payments are 100% secure
ಪಿ.ಶೇಷಾದ್ರಿ ಸಂವೇದನಾಶೀಲ ಕನ್ನಡ ಚಲನಚಿತ್ರ ನಿರ್ದೇಶಕ. ಸಮಾಜದಲ್ಲಿ ನೈತಿಕತೆಯ ಪಾತ್ರ ಮತ್ತು ಅದರ ಅಭಾವ ಅವರ ಕಲಾಭಿವ್ಯಕ್ತಿಯ ವಿಶ್ಲೇಷಣೆಯ ಮೂಲ ಕಾಳಜಿ. ಸಮಾಜದಲ್ಲಿನ ಪುರುಷ ಕೇಂದ್ರಿತ ವ್ಯವಸ್ಥೆ, ಹೆಣ್ಣಿನ ಶೋಷಣೆ. ಇವುಗಳು ಅನೈತಿಕ ವ್ಯಾಪಾರಗಳಿಗೆ ಮೌನ ಪ್ರೇರಣೆಯನ್ನು ನೀಡುತ್ತವೆ ಎಂಬ (ಮುನ್ನುಡಿ) ಕಥಾನಕದಿಂದ ಪ್ರಾರಂಭಗೊಂಡ ಇವರ ಸಿನಿಮಾಯಾನ ನಂತರದ ದಿನಗಳಲ್ಲಿ ಅಧಿಕಾರಶಾಹಿಯ ಅನೈತಿಕತೆ, ಭ್ರಷ್ಟಾಚಾರ (ಬೇರು), ಭಯೋತ್ಪಾದಕತೆ ನಮ್ಮ ನೆರೆಯಲ್ಲಿ, ಸಮಾಜದಲ್ಲಿ ಇದ್ದಾಗ ಅದನ್ನು ಭಾವನಾತ್ಮಕ ನೆಲೆಯಲ್ಲಿ ನೋಡುವ ಪ್ರಯತ್ನ (ಅತಿಥಿ), ಸಮುದಾಯ ಮತ್ತು ವ್ಯಕ್ತಿತ್ವಗಳ ನಡುವಿನ ಬಿರುಕು (ತುತ್ತೂರಿ), ಆಧುನಿಕತೆ ರೂಢಿಸಿರುವ ವಲಸೆ, ಅದರಿಂದ ಉಂಟಾಗುವ ಸಾಂಸಾರಿಕ ಶೋಭೆ (ಬೆಟ್ಟದ ಜೀವ), ರಾಜಕೀಯ ಗೋಸುಂಬೆತನ (ಡಿಸೆಂಬರ್-1), ಲೈಂಗಿಕ ಅಸಮಾನತೆ (ಬೇಟಿ), ಆರ್ಥಿಕ ಉದಾರೀಕರಣದ ಪ್ರಭಾವದಿಂದ ಉಂಟಾದ ಸಾಂಸ್ಕೃತಿಕ ಪಲ್ಲಟ (ಭಾರತ್ ಸ್ಟೋರ್ಸ್) ಹೀಗೆ ಹತ್ತು ಹಲವು ರೀತಿಯ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಕೃತಿಕ ಬದಲಾವಣೆಗಳನ್ನು ದಾಖಲಿಸುತ್ತಾ ಬಂದಿದೆ. ಈ ಮಧ್ಯೆ ಪಾಶ್ಚಾತ್ಯ ಪ್ರಭಾವ ಮತ್ತು ಅದರಿಂದಾದ ಜೀವನಕ್ರಮದಲ್ಲಿನ ಬದಲಾವಣೆಗಳಿಂದ ಉಂಟಾಗುವ ಸ್ಥಿತ್ಯಂತರಗಳನ್ನು ಗ್ರಹಿಸುವ ಯತ್ನದಲ್ಲಿ 'ವಿಮುಕ್ತಿ' ಮತ್ತು 'ವಿದಾಯ'ಗಳಂಥ ಚಿತ್ರಗಳನ್ನೂ ಅವರು ಕೊಟ್ಟಿದ್ದಾರೆ. ಕಳೆದ ನೂರು ವರ್ಷಗಳಲ್ಲಿ ಮನುಷ್ಯ ಸಂಬಂಧಗಳು ಕಂಡ ತೀವ್ರ ಬದಲಾವಣೆ 'ಮೂಕಜ್ಜಿಯ ಕನಸುಗಳು' ಚಿತ್ರದಲ್ಲಿ ಕಂಡರೆ, ಒಂದೇ ಜೀವನದ ಚಲನೆಯಲ್ಲಿ ಬದಲಾವಣೆಗೊಳ್ಳುವ ಪ್ರವೃತ್ತಿಯನ್ನು 'ಮೋಹನದಾಸ' ಚಿತ್ರಿಸುತ್ತದೆ. ಹೀಗೆ ಇಲ್ಲಿಯವರೆಗೆ 12 ಚಿತ್ರಗಳನ್ನು ನಿರ್ದೇಶಿಸಿರುವ ಹಾಗೂ ಒಂಬತ್ತು ಬಾರಿ ರಾಷ್ಟ್ರಪ್ರಶಸ್ತಿ ಪುರಸ್ಕೃತರಾಗಿರುವ ಇವರ ಚಿತ್ರಗಳ ಕುರಿತ ಮಂಥನ ಈ ಕೃತಿಯ ಹೂರಣ.
Gopalakrishna Pai |
0 average based on 0 reviews.