Delivery between 2-8 Days
No returns accepted. Please refer our full policy
Your payments are 100% secure
ಮೊಗಳ್ಳಿಯವರ ಕಾವ್ಯಾತ್ಮಕ ಶೈಲಿಯ ವಿಶಿಷ್ಟ ಕಾದಂಬರಿ ಬಿಟ್ಟು ಹೋದ ಮನುಷ್ಯ, ನಾಗರೀಕತೆ ಹಾಗೂ ಮನುಷ್ಯ ಸಂಬಂಧಗಳಲ್ಲಿನ ಜಟಿಲತೆ ಇದರ ಕೇಂದ್ರ ವಸ್ತು, ಲೇಖಕರೇ ಹೇಳುವಂತೆ "ಗುರಿಯಿಲ್ಲದೆ,ಆದರೆ ಗುರಿ ಇದೆ ಎಂದು ಹುಡುಕಾಡುತ್ತ ಗುರಿತಪ್ಪಿ ಕಳೆದುಹೋಗುವ ಪಾತ್ರಗಳನ್ನು" ಈ ಕಥನ ಒಳಗೊಂಡಿದೆ.ಹಾಗೆಯೇ ಇಲ್ಲಿ ಮಾನವ ಸಂದರ್ಭಗಳು ಸರಣಿಯಂತೆ ಒಂದಕ್ಕೊಂದು ಬೆಸೆದುಕೊಂಡಿವೆ. " ಸಾಂಸಾರಿಕ ಜಂಜಾಟದಿಂದ ಆರಂಭವಾಗುವ ಈ ಕಥನ ವಿಶ್ವಾತ್ಮಕವಾಗಿ ಬೆಳೆದು ಸಂಬಂಧಗಳನ್ನು ಆರ್ದ್ರವಾಗಿ ತಡಕಾಡುತ್ತವೆ."
ಕಾದಂಬರಿಯ ಮುಖ್ಯ ಪಾತ್ರಗಳಾದ ಭೌತವಿಜ್ಞಾನಿ ತಂದೆ,ಅವನ ಹೆಂಡತಿ,ಮಗ,ಮೂವರು ಹೆಣ್ಣುಮಕ್ಕಳು ತಮ್ಮದೇ ಹಾದಿಯ ಹುಡುಕಾಟ ಸಂಘರ್ಷಗಳಲ್ಲಿರುವವರು. ಇಲ್ಲಿ ಬರುವ ಯಾವ ಪಾತ್ರಗಳಿಗೂ ಹೆಸರಿಲ್ಲ, ಬದಲಿಗೆ ತಮ್ಮ ಕಾರ್ಯಕ್ಷೇತ್ರ ಸಂಬಂಧಗಳ ಮುಖಾಂತರ ಗುರುತಿಸಲ್ಪಡುತ್ತಾರೆ. ಈ ಕಥನ ಮನುಷ್ಯ ಸಂಬಂಧಗಳ, ನಾನಾ ಭಾವಗಳ ಸಂಕೀರ್ಣ ಚಿತ್ರಶಾಲೆಯಂತಿದೆ. ಮನುಷ್ಯರ ಅನಿವಾರ್ಯ ವಿದಾಯದ ಸಂಕೀರ್ಣ ಪಯಣವನ್ನು ಒಂದು ಸ್ವಪ್ನದಂತೆ ನಿರೂಪಿಸುತ್ತದೆ.
ಮೊಗಳ್ಳಿ ಗಣೇಶ್ |
0 average based on 0 reviews.