
Category: | ಕನ್ನಡ |
Sub Category: | ಕವನಗಳು |
Author: | ಶುಭಲಕ್ಷ್ಮಿನಾಯಕ | Shubhalakshmi Nayaka |
Publisher: | pustaka mane |
Language: | Kannada |
Number of pages : | |
Publication Year: | 2025 |
Weight | 400 |
ISBN | 91960647428954 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಆಂಗ್ಲ ಭಾಷಾ ಪ್ರಾಧ್ಯಾಪಕಿ ಶ್ರೀಮತಿ ಶುಭಲಕ್ಷ್ಮಿ ಆರ್ ನಾಯಕ ಬಹುಮುಖ ಪ್ರತಿಭೆಯ ಸಹೃದಯಿ, ಸಾಹಿತಿ ಹಾಗೂ ಕವಯಿತ್ರಿ. ಇವರಿಗೆ ಕನ್ನಡ ನಾಡು-ನುಡಿಯ ಬಗ್ಗೆ ಅಪಾರವಾದ ಪ್ರೀತಿ ವಾತ್ಸಲ್ಯ ಆದ್ದರಿಂದಲೇ ಇವರು ಕನ್ನಡ ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡು ವಿವಿಧ ರೀತಿಯ ಕಾವ್ಯ ಪ್ರಕಾರಗಳಾದ ಕವನ, ಚುಟುಕು, ಗಝಲ್, ರುಬಾಯಿ, ಪಟ್ಟದಿ, ಮುಕ್ತಕ, ಕಥನ, ಕವನ, ಶಿಶುಗೀತೆಗಳು, ಲೇಖನ ಮಾಲೆಗಳು, ಚಿಂತನ-ಮಂಥನ, ವಿಮರ್ಶೆ, ಬರೆಯುವುದರೊಂದಿಗೆ ಆಕಾಶವಾಣಿ ಕಾರ್ಯಕ್ರಮ ನೀಡುವುದರ ಮೂಲಕ ಸಮೃದ್ಧ ಬೆಳೆಗಳನ್ನು ತೆಗೆದುಕೊಂಡ ಸಿರಿವಂತರು. ಇವರ ಸಾಹಿತ್ಯ ಕೃಷಿಗೆ ನೀರು ಗೊಬ್ಬರವನ್ನು ಉಣಬಡಿಸಿ ಜೋಪಾನವಾಗಿ ರಕ್ಷಿಸಿದವರು ಇವರ ಪತಿ ಕನ್ನಡ ಅಧ್ಯಾಪಕರಾದ ನಿರಂಜನ ಅವರು.
ಇಲ್ಲಿ ರಚಿತವಾದ ಮುಕ್ತಕಗಳು ಹಲವು ವಸ್ತುವೈವಿಧ್ಯಗಳನ್ನು ಒಳಗೊಂಡಿದೆ. ಇಲ್ಲಿ ಕವಯಿತ್ರಿಯ ಸೃಜನಶೀಲ ಚಿಕಿತ್ಸಕ ಬುದ್ದಿಮತ್ತೆ ವೇದ್ಯವಾಗುತ್ತದೆ. ಮುಕ್ತಕಗಳಲ್ಲಿ ಬಳಸಿದ ಹಲವು ಬಗೆಯ ರೂಪಕಗಳು, ಉಪಮೆಗಳು ಮುಕ್ತಕದ ಒಳತಿರುಳಿಗೆ ಮೆರುಗನ್ನು ನೀಡಿದೆ. ಕವಯಿತ್ರಿ ತಮ್ಮ ಅನುಭವ ದ್ರವ್ಯವನ್ನು ಬಳಸಿ ಆದಿಪ್ರಾಸಯುಕ್ತ ಚೌಪದಿಗಳನ್ನು ಹೆಣೆದು ನಮ್ಮ ಮುಂದಿಟ್ಟ ಪರಿ ಗಮನಾರ್ಹ. ಪ್ರತಿಯೊಂದು ಮುಕ್ತಕವೂ ಅವರದೇ ಆದ ಶೈಲಿಯ ರಚನೆಯನ್ನು ಒಳಗೊಂಡಿದೆ. ಅದರ ಹರಹು ವಿಸ್ತಾರವಾಗಿದೆ. ಛಂದಸ್ಸಿನ ಕಲಿಕೆಯೆಂದರೆ ಒಂದು ತಪಸ್ಸು ಇದ್ದಂತೆ. ಛಂದಸ್ಸಿನ ಬಳಕೆಯಲ್ಲಿ ಇನ್ನಷ್ಟು ಪ್ರಾವೀಣ್ಯ ಪಡೆಯಲು ಅವಕಾಶವಿದೆ.
ಬರೆದಿಹರು ಶುಭಲಕ್ಷ್ಮಿ ಹಲವಾರು ಮುಕ್ತಕವ ಸುರಿದಿಹರು ಅನುಭವದ ಸೂತ್ರದಲಿ ಕೋದು ಮೆರುಗು ತಂದಿರಲು ಈ ಹೊತ್ತಗೆಯ ಚಿಂತನವು ಚಿರಕಾಲ ಉಳಿಯುವುದು - ಲಕುಮಿರಮಣ||
ಕವಯಿತ್ರಿ ಶುಭಲಕ್ಷ್ಮಿಯವರ ಈ ಕೃತಿ ಜನಪ್ರಿಯತೆಯನ್ನು ಪಡೆದು ಸಾಹಿತ್ಯ ಕ್ಷೇತ್ರದಲ್ಲಿ ರಾರಾಜಿಸಲಿ. ಶುಭಹಾರೈಕೆಗಳೊಂದಿಗೆ,
- ಲಕ್ಷ್ಮೀ ವಿ. ಭಟ್
ಮಂಜೇಶ್ವರ
ಶುಭಲಕ್ಷ್ಮಿನಾಯಕ | Shubhalakshmi Nayaka |
0 average based on 0 reviews.