| Category: | ಕನ್ನಡ |
| Sub Category: | ಲೇಖನಗಳು, ಪ್ರಬಂಧಗಳು |
| Author: | ಆರ್ ಬಿ ಗುರುಬಸವರಾಜ | R B Gurubasavaraja |
| Publisher: | ಸಾವಣ್ಣ ಪ್ರಕಾಶನ | Sawanna Prakashana |
| Language: | Kannada |
| Number of pages : | 112 |
| Publication Year: | 2026 |
| Weight | 100 |
| ISBN | 978-81-689233-8-6 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
‘ವಿಸ್ಮಯವೇ ಜ್ಞಾನದ ಮೊದಲ ಮೆಟ್ಟಿಲು, ಪ್ರಶ್ನೆಯೇ ಅದರ ಬಾಗಿಲು, ಅನ್ವೇಷಣೆಯೇ ಅದರ ಪಯಣ’ ಎಂಬಂತೆ ವಿಸ್ಮಯ ಸಂಗತಿಗಳು ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ, ಅಂದರೆ ‘ಅಜ್ಞಾನದಿಂದ ಜ್ಞಾನದ ಕಡೆಗೆ’ ಮುನ್ನಡೆಸುವ ಸಣ್ಣ ಸಣ್ಣ ದೀಪಗಳಿದ್ದಂತೆ. ಅವು ಕೇವಲ ಜ್ಞಾನಾರ್ಜನೆಯನ್ನು ಮಾಡದೇ ರೋಮಾಂಚಕ ಅನುಭವವನ್ನು ನೀಡುತ್ತವೆ.
ನಮ್ಮ ಸುತ್ತಲಿನ ಜಗತ್ತು ನಿಗೂಢತೆ ಮತ್ತು ಸೋಜಿಗಗಳ ಆಗರ. ಈ ಬ್ರಹ್ಮಾಂಡದ ವಿಶಾಲತೆಯಿಂದ ಹಿಡಿದು, ಸೂಕ್ಷ್ಮಜೀವಿಗಳ ಜಟಿಲತೆಯವರೆಗೆ, ಪ್ರಕೃತಿಯ ಪ್ರತಿ ಮಗ್ಗಲಲ್ಲೂ ಅಡಗಿರುವ ಅದ್ಭುತಗಳನ್ನು ಹುಡುಕುತ್ತಾ ಸಾಗುವ ಪ್ರವಾಸವೇ ಈ
‘ವಿಸ್ಮಯ ಸಂಗತಿಗಳು’.
ಇದು ಕೇವಲ ಕುತೂಹಲಕಾರಿ ಮಾಹಿತಿಗಳ ಸಂಗ್ರಹವಲ್ಲ. ಬದಲಾಗಿ, ಅಜ್ಞಾತವನ್ನು ಅರಿಯುವ ಹಂಬಲವುಳ್ಳ ಜಿಜ್ಞಾಸುಗಳಿಗೆ ನೀಡಿದ ಒಂದು ಕಾಣಿಕೆ. ವಿಜ್ಞಾನ, ತಂತ್ರಜ್ಞಾನ, ಇತಿಹಾಸ, ಪ್ರಕೃತಿ ಮತ್ತು ಮಾನವ ನಡವಳಿಕೆಗಳ ಆಳದಲ್ಲಿ ಅಡಗಿರುವ ಅಚ್ಚರಿಯ ಸತ್ಯಗಳನ್ನು ಅತ್ಯಂತ ಸರಳ ಹಾಗೂ ಆಕರ್ಷಕವಾಗಿ ಇಲ್ಲಿ ಕಟ್ಟಿಕೊಡಲಾಗಿದೆ. ಪ್ರತಿ ಪುಟವೂ ಓದುಗನ ಕಲ್ಪನಾ ಲೋಕವನ್ನು ವಿಸ್ತರಿಸುತ್ತಾ, ಜಗತ್ತನ್ನು ನೋಡುವ ಹೊಸ ದೃಷ್ಟಿಕೋನವನ್ನು ಒದಗಿಸುತ್ತದೆ.
ನಿಮ್ಮಲ್ಲಿರುವ ಕುತೂಹಲವನ್ನು ಕೆರಳಿಸುವ, ಜ್ಞಾನದ ಹಸಿವನ್ನು ನೀಗಿಸುವ ಮತ್ತು ಆಶ್ಚರ್ಯದ ಲೋಕಕ್ಕೆ ಕರೆದೊಯ್ಯುವ ಅದ್ಭುತ ಪಯಣ ಇಲ್ಲಿದೆ. ಬೌದ್ಧಿಕ ಚೇತನಗಳಿಗೆ ದಾರಿ ದೀಪವಾಗಬಲ್ಲ ಈ ಪುಸ್ತಕ, ಪ್ರತಿಯೊಬ್ಬ ಜ್ಞಾನದಾಹಿಯ ಸಂಗ್ರಹದಲ್ಲಿರಲೇಬೇಕಾದ ಕೃ. ಬನ್ನಿ, ವಿಸ್ಮಯಗಳ ಈ ರೋಚಕ ಪಯಣದಲ್ಲಿ ನಾವೆಲ್ಲರೂ ವಿಹರಿಸೋಣ.
- ಆರ್.ಬಿ. ಗುರುಬಸವರಾಜ
ಆರ್ ಬಿ ಗುರುಬಸವರಾಜ | R B Gurubasavaraja |
0 average based on 0 reviews.