• ಯಾವುದೇ ಕನ್ನಡ ಸ್ತಕಕ್ಕಾಗಿ ಸಂಪರ್ಕಿಸಿ
  • Call Us : +91 7022122121 / +91 8861212172
  • ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
back

Publishers

Categories

Authors

Languages

Book Type

Clear All
Filter
ಕಂದಕ | Kandaka

'ಕಂದಕ' ಈ ಕೃತಿಯ ಲೇಖಕರಾದ ಭಾರದ್ವಾಜ ಕೆ. ಆನಂದತೀರ್ಥ, ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕಣಿವೆ ಗ್ರಾಮದ ನಿವಾಸಿ, ಕೆ. ಆನಂದತೀರ್ಥ ಮತ್ತು ಸುಮಿತ್ರಮ್ಮ ದಂಪತಿಯ ಮಗ. ಎಂ.ಎ. ಪದವೀಧರ ಭಾರದ್ವಾಜರಿಗೆ ಕೃಷಿ, ಪತ್ರಿಕೋದ್ಯಮ, ಬರವಣಿಗೆ, ಪ್ರವಾಸ ಎಲ್ಲವೂ ಹವ್ಯಾಸ. ಇವರ ಅವನಿ'ಗೆ (ಕವನ ಸಂಕಲನ), ನೆನಪುಗಳು ಮಾಸುವ ಮುನ್ನ (ಎಂ.ಸಿ. ನಾಣಯ್ಯ ಅವರ ಜೀವನ ಚರಿತ್ರೆಯ ನಿರೂಪಣೆ) ಕಾನನದ ಅಂಚಿನಲ್ಲಿ (ಕಾದಂಬರಿ), ಕಳೆದುಕೊಂಡವರು (ಕಾದಂಬರಿ), ಕಣಿವೆಯ ಆಳದಿಂದ (ಅಂಕಣ ಬರಹಗಳ ಸಂಗ್ರಹ), ಕನವರಿಕೆಗಳು (ಲಲಿತ ಪ್ರಬಂಧಗಳ ಸಂಗ್ರಹ), ಕಂದಿಲು (ಕೆಲವು ನಿವೃತ್ತ ಶಿಕ್ಷಕರ ಸಂಕ್ಷಿಪ್ತ ಜೀವನ ಚರಿತ್ರೆ), ಕೌತುಕವಲ್ಲದ ಕ್ಷಣಗಳು (ಲಲಿತ ಪ್ರಬಂಧಗಳ ಸಂಗ್ರಹ), ನೀರು ನುಗ್ಗಿದ ಮೇಲೆ (ಪ್ರಬಂಧಗಳ ಸಂಗ್ರಹ) ಹಾಗೂ ಕರೋನಯ್ಯ ಬಂದವ್ನಿಗೆ (ಕಾದಂಬರಿ), ಸಂದಾಯಿ(ಕಾದಂಬರಿ), ಕ್ರಮಣ (ಕಾದಂಬರಿ) ಈಗಾಗಲೇ ಪ್ರಕಟವಾಗಿದೆ. -ಎನ್. ನಾಗರಾಜ್‌ ರಾವ್ ರಂಗಕರ್ಮಿ ಬಸವನಗುಡಿ, ಬೆಂಗಳೂರು.

₹265   ₹225

ನಿಷಿತೆ | Nishite

ಪ್ರೀತಿನಿ ಧನಂಜಯ ಅವರ “ನಿಷಿತೆ”. ಈ ಕಾದಂಬರಿಯು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಪ್ರೀತಿನಿ ಅವರು ತಮ್ಮ ಮೊದಲ ಕೃತಿಯಲ್ಲೇ ಇಂಥದ್ದೊಂದು ಪ್ರಯೋಗಕ್ಕೆ ಅಣಿಯಾಗಿದ್ದು ಮೆಚ್ಚಬೇಕಾದ ಸಂಗತಿ. ದೆವ್ವ, ಭೂತ, ವಾಸ್ತವ, ಕಲ್ಪನೆ ಮತ್ತು ವೈಜ್ಞಾನಿಕ ವಿಷಯಗಳ ಸುತ್ತಲೇ ಸುತ್ತುವ ಈ ಕಾದಂಬರಿಯ ಮೂಲಕ ನಿಜಕ್ಕೂ ದೆವ್ವ ಭೂತಗಳಿಗೆ ಅಸ್ತಿತ್ವ ಇದೆಯೋ? ಇಲ್ಲವೋ? ಎನ್ನುವ ವೈಚಾರಿಕತೆಯ ಬೆಳಕು ಚೆಲ್ಲಲು ಲೇಖಕಿ ಪ್ರಯತ್ನಿಸಿದ್ದಾರೆ. ಎಷ್ಟೊಂದು ಸಿನೆಮಾಗಳನ್ನು ನೋಡಿದರೂ ದೆವ್ವ ಭೂತಗಳ ಬಗೆಗಿನ ಕುತೂಹಲ ತಣಿಯದವರಿಗೆ ಈ ಕೃತಿ ರಸಾನುಭವ ನೀಡಬಲ್ಲುದು ಮತ್ತು ಒಂದೊಳ್ಳೆ ಎಂಟರ್‌ಟ್ರೈನರ್ ಆಗಬಲ್ಲುದು.

₹250   ₹213

ಹಕ್ಕಿ ಅಟೆಂಡೆನ್ಸ್ | Hakki Attendence

ಬರ್ಡ್ ವಾಚಿಂಗ್ ಅನ್ನೋದು ತುಂಬಾ ತಾಳ್ಮೆ ಬೇಡುವ ಕೆಲಸ. ಅಂಥಹ ತಾಳ್ಮೆಯನ್ನು ಇಡೀ ಪುಸ್ತಕದುದ್ದಕ್ಕೂ ಸೆರೆಹಿಡಿದಿರುವ ಹಕ್ಕಿಗಳ ಮುದ್ದಾದ ಫೋಟೋಗಳಲ್ಲಿ ಕಾಣಬಹುದು.ಜೊತೆಗೆ ಆ ಫೋಟೊಗಳೊಂದಿಗೆ ನಡೆಸಿರುವಆತ್ಮೀಯ ಸಂಭಾಷಣೆಗಳಿವೆ. ಆ ಸಂಭಾಷಣೆಗಳಲ್ಲಿ ನಮ್ಮೆಲ್ಲರ ವಿದ್ಯಾರ್ಥಿ ಜೀವನವನ್ನು ನೆನಪಿಸುವ ಶಕ್ತಿ ಇದೆ.

₹595   ₹494

ದಡ ಸೇರದ ದೋಣಿಗಳು | Dada Serida Donigalu

ಕಥೆ ಅಂದರೆ ಕಟ್ಟು ಕಥೆಯಲ್ಲ, ಒಂದು ಅಳತೆಗೆ ಕಟ್ಟಿದ ಕಥೆ, ಸಹಜವಾಗಿ ಹೆಣೆದಾಗ ಅದು ಕಣ್ಣಿಗೆ ಕಟ್ಟುವಂಥಾ ಕಥೆಯಾಗುತ್ತದೆ. ಕಥೆಗಳ ಸ್ವರೂಪವೇ ಹಾಗಿರಬೇಕು. ಓದುತ್ತಾ ಇದ್ದ ಹಾಗೆ ಕಥೆಯ ಪಾತ್ರಗಳು ಕಣ್ಣು ಮುಂದೆ ಬಂದು ನಿಲ್ಲಬೇಕು. ಪಾತ್ರಗಳು ಆಡುವ ಮಾತುಗಳು ಯಾವುದೂ ನಾಟಕೀಯವಾಗಿರಬಾರದು. ಇಂಥಾ ಸಂದರ್ಭಗಳಲ್ಲಿ ನಾವು ಮಾತಾಡಿದರೂ ಹಾಗೇ ಮಾತಾಡುತ್ತೀವಿ ಎನ್ನುವಂತಿರಬೇಕು. ಇನ್ನು ಕಥೆಯಲ್ಲಿ ಬರುವ ಘಟನೆಗಳೂ ನೈಜತೆಗೆ ದೂರವಾಗಿರಬಾರದು. ಹೌದು ಇದು ಎಲ್ಲರ ಬದುಕಲ್ಲೂ ನಡೆಯುವಂಥದು, ಎಲ್ಲ ಪಾತ್ರಗಳೂ ಹೀಗೇ ನಡೆದುಕೊಳ್ಳುವಂಥವು ಎನಿಸಬೇಕು. ಆಗ ಮಾತ್ರ ಕಥೆ ಬರೆದವನಿಗೂ ಕಥೆ ಓದುವವನಿಗೂ ಒಂದು ಸಹೃದಯ ಸಂಪರ್ಕ ಬರುತ್ತದೆ. ಅಲ್ಲಿಗೆ ಕಥೆಯೂ ಗೆಲ್ಲುತ್ತದೆ, ಕಥೆಗಾರನೂ ಗೆಲ್ಲುತ್ತಾನೆ. ಪ್ರಸ್ತುತ ನಿಮ್ಮ ಕೈಯಲ್ಲಿರುವ ದಡ ಸೇರದ ದೋಣಿಗಳು ಕಥೆಯಲ್ಲಿ ಇರುವ ಎಲ್ಲಾ ಇಪ್ಪತ್ತೈದು ಕಥೆಗಳ ಸ್ವರೂಪವೂ ಹೀಗೇ ಇದೆ. ಈ ಎಲ್ಲಾ ಕಥೆಗಳನ್ನು ಓದುವಾಗ ಲೇಖಕರ ಸುಮಾರು 50 ವರ್ಷಕ್ಕೂ ಹೆಚ್ಚಿನ ಸಾಹಿತ್ಯ ವ್ಯವಸಾಯದ ಅನುಭವದ ಸಾರ ಓದುಗರಿಗೆ ಅರಿವಾಗುತ್ತದೆ. ಪಾತ್ರಗಳು ಯಾವುದೂ ಸೃಷ್ಟಿಯಾಗಿಲ್ಲ, ಬದಲಿಗೆ ಅವುಗಳೇ ಬಂದು ಬೆಸೆದುಕೊಂಡಿವೆ. ಸೃಷ್ಟಿಕರ್ತ ಬ್ರಹ್ಮ ಒಬ್ಬನೇ ಆದರೂ ಅವನು ಸೃಷ್ಟಿಸಿರುವ ಪಾತ್ರಗಳೂ, ಅವುಗಳ ಸ್ವಭಾವಗಳೂ, ಮಾತುಗಳೂ, ನಡವಳಿಕೆಗಳೂ ಹೇಗೆ ಬೇರೆಬೇರೆ ಯಾಗಿರುವುವೋ ಹಾಗೆ ಕಥೆಗಾರ ಒಬ್ಬನೇ ಆದರೂ ಅವನು ತನ್ನ ಕಥೆಯಲ್ಲಿ ಸೃಷ್ಟಿಸಿರುವ ಪಾತ್ರಗಳು ಅವನ ಮೂಗಿನ ನೇರಕ್ಕೆ ನಡೆದುಕೊಂಡರೂ, ಮಾತಾಡಿದರೂ ಎಲ್ಲವೂ ಸಹಜವಾಗಿರುತ್ತವೆ. ಯಾವುದೂ ನಾಟಕೀಯ ಎನಿಸುವುದಿಲ್ಲ, ಬಲವಂತ ಎನಿಸುವುದಿಲ್ಲ. ಒಟ್ಟಿನಲ್ಲಿ ಕಥೆ ಅಂದರೆ ಅದು ಬರೀ ಕಥೆಯಲ್ಲ, ಅದು ನಮ್ಮ ಬದುಕಿನ ಅನೇಕ ಘಟನೆಗಳಿಗೆ ಹಿಡಿದ ಕನ್ನಡಿ ಎನ್ನುವಂತೆ ಈ ಸಂಗ್ರಹದ ಕಥೆಗಳೆಲ್ಲಾ ನಿಮ್ಮನ್ನು ಸೆರೆಹಿಡಿದು ಓದಿಸಿ ಕೊಳ್ಳುವುದರಲ್ಲಿ ಅನುಮಾನವಿಲ್ಲ. ನಿಮಗೆ ಈ ಎಲ್ಲಾ ಕಥೆಗಳ ಓದಿನ ಸುಖ ದೊರೆಯಲಿ. -ಬೇಲೂರು ರಾಮಮೂರ್ತಿ

₹275   ₹234

ಪುಟ್ಕತೆ ಎಂಬ ದೊಡ್ಕತೆಗಳ ಸಂಕಲನ | Putkate emba Dodkategala sankalana

ಇದು ಪುಟ್ಕತೆಯ ಲೋಕ. ಪುಟಪುಟದಲ್ಲೂ ಪುಟ್ಟಪುಟ್ಟ ಕತೆಗಳು, ಬೃಹತ್ತಾದುದನ್ನೇ ಹೇಳುವ ಕತೆಗಳು. ಅವರ ಕತೆ, ಇವರ ಕತೆ, ನಿಜದ ಕತೆ, ಕಟ್ಟುಕತೆ... ಎಷ್ಟೆಲ್ಲಾ ಕತೆಗಳು. ನಿಮಗೆ ಗೊತ್ತೇ, ಇಲ್ಲಿ ನಿಮ್ಮ ಕತೆಯೂ ಇದೆ! ಓದ್ಯೋಡಿ.

₹120   ₹102

ಕಾಗೆ ಮೇಷ್ಟ್ರು | Kage Meshtru

ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ. ಹೊಸ ಭಾಷೆ, ವಿಶಿಷ್ಟ ವಸ್ತು-ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಯುಗದ ಪಲ್ಲಟಗಳು, ಜಾಗತೀಕರಣ ಸಂದರ್ಭದಲ್ಲಿನ ಮನುಷ್ಯ ಸಂಬಂಧಗಳು, ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾರರ ಕತೆಗಳಲ್ಲಿ ವಿಮರ್ಶಕರು ಗುರುತಿಸಿರುವ ಕೆಲವು ವಿಶೇಷತೆಗಳು. ಪ್ರಸ್ತುತ ‘ಕಾಗೆ ಮೇಷ್ಟ್ರು’ ಎಂಬ ಕಥಾ ಸಂಕಲನದಲ್ಲಿ ಹುಟ್ಟು ಸಾವು ಎನ್ನುವ ಎರಡು ತುರೀಯ ಸತ್ಯಗಳ ನಡುವೆ, ಮನುಷ್ಯನ ನೆಮ್ಮದಿಯ ಹುಡುಕಾಟದಲ್ಲಿ ವೇದ್ಯವಾಗುವ ಅಸಂಖ್ಯ ಅಣು ಸತ್ಯಗಳ ಮೇಳವಿದೆ. ಬದುಕಿನ ಅಸಂಗತ ಕ್ಷಣಗಳ ಆಳದಲ್ಲಿ ಹುದುಗಿರುವ ದರ್ಶನವು ಕತೆಗಾರನ ಕಾವ್ಯ ಕುಸುರಿಯಲ್ಲಿ ಅನಾವರಣಗೊಳ್ಳುವ ಸೋಜಿಗವನ್ನು ಓದಿನ ಮಾಯೆಯಲ್ಲೇ ಅನುಭವಿಸಬೇಕು. ಇಂಥ ಅನುಭವ ಸುಖದ ಸೆಳೆತ ಈ ಕತೆಗಳನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ಓದುವ ನಶೆ ನಿಮಗೇರಲಿ…

₹125   ₹106

ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ | Lets Make A Short Film

ಬೇರೆಯವರಿಗೆ ಕತೆ ಹೇಳುವ, ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ. ಕತೆಗಳಿರುವವರೆಗೂ ಮನುಷ್ಯನಿರುತ್ತಾನೆ. ಈಗ ಸ್ಮಾರ್ಟ್ ಯುಗ. ಎಲ್ಲರ ಕೈಯಲ್ಲೊಂದು ಸ್ಮಾರ್ಟ್ ಫೋನು. ಎಲ್ಲರ ಎದೆಯೊಳಗೆ ಕತೆಗಳಿರುವ ಕಾಲ. ಇಂತಹ ಕತೆಗಳನ್ನು ಸಶಕ್ತವಾಗಿ ದಾಟಿಸುವ ಮಾಧ್ಯಮ ದೃಶ್ಯಮಾಧ್ಯಮ. ಬನ್ನಿ ನಿಮ್ಮೊಳಗಿನ ಕತೆಗಳನ್ನು ದೃಶ್ಯಮಾಧ್ಯಮಕ್ಕೆ ತರೋಣ, ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ!

₹120   ₹102

ಚಿತ್ರ-ವಿಚಿತ್ರ | Chitra Vichitra

ಸಿನಿಮಾ ಎನ್ನುವುದು ಕಲೆ, ಉದ್ಯಮ, ಮನರಂಜನೆ.. ಇವೆಲ್ಲಕ್ಕಿಂತ ಮೀರಿದ ಒಂದು ತುಡಿತ ಎನ್ನಬಹುದು. ಕಥೆ ಹೇಳುವ, ಕೇಳುವ ತೋರಿಸುವ ಆ ಹುರುಪು ಉತ್ಸಾಹಕ್ಕೆ ಬೆಲೆ ಕಟ್ಟಲು ಸಾಧ್ಯವೇ..? ಹಾಗೆ ನೋಡಿದರೆ ನನಗೆ ನನ್ನ ಸಂಸ್ಕೃತಿ ಕಲಿಸಿದರಲ್ಲಿ ಸಿನಿಮಾದ ಪಾಲು ಇದೆ. ಒಂದು ಬೇರೆಯದೇ ಆದ ಪ್ರಪಂಚವನ್ನು ಸೃಷ್ಟಿಸುವ ತಾಕತ್ತು ಸಶಕ್ತವಾಗಿರುವ ಕ್ಷೇತ್ರವಿದು. ನನ್ನೆಲ್ಲ ವಿದ್ಯಾಭ್ಯಾಸ ಮುಗಿದ ಮೇಲೆ ನನ್ನ ಮುಂದಿದ್ದ ಪ್ರಶ್ನೆ? ಬದುಕುವುದಕ್ಕಾಗಿ ಕೆಲಸ ಮಾಡುವುದಾ..? ಅಥವಾ ಕನಸನ್ನು ಈಡೇರಿಸಿಕೊಳ್ಳುವುದಕ್ಕಾಗಿ ಬದುಕುವುದಾ..?

₹220   ₹187

ಸಹಭಾಷಿಕರ ಕನ್ನಡ ಪ್ರೇಮ | Sahabhashikara Kannada Prema

ಸಕಲ ಭಾಷಾಮಯೀ ಸರಸ್ವತಿ ಸರ್ವಭಾಷಾಮಯೀ ಸರಸ್ವತೀ ಎನ್ನುವ ಮಾತಿದೆ. ಇದೇ ಸಂದರ್ಭದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ನಾಡು ನುಡಿಗಳ ಜಗತ್ತಿಗೆ ತಮ್ಮ ಮನೆಯ, ಕುಟುಂಬದ ಭಾಷೆ ಬೇರೆ ಆಗಿದ್ದರೂ ಕನ್ನಡಕ್ಕೆ ಅನೇಕರು ದಣಿವರಿಯದೆ ಜೀವ ತೇಯ್ದಿದ್ದಾರೆ. ಅಂಥ ೧೦೧ ಮಹಾನುಭಾವರ ಬಗ್ಗೆ ರಚಿಸಿರುವ ಕೃತಿಯೇ ಸಹಭಾಷಿಕರ ಕನ್ನಡ ಪ್ರೇಮ. ‌ ಇಲ್ಲಿ ಯಾವುದೂ, ಯಾರೂ ಅನ್ಯರಲ್ಲ, ಎಲ್ಲವೂ ಸಹಭಾಷೆಗಳೇ, ಎಲ್ಲರೂ ಸಹಭಾಷಿಕರೇ…

₹400   ₹340

ವೀರ ಸಿಂಧೂರ ಲಕ್ಷ್ಮಣ | Veera Sindhoora Laksmana

`ವೀರ ಸಿಂಧೂರ ಲಕ್ಷ್ಮಣ’ ಕೌಂಡಿನ್ಯ ಅವರು ದಾಖಲೆಗಳೊಂದಿಗೆ ಸಂಶೋಧನೆ ಮಾಡಿ ರಚಿಸಿರುವ ಮಹೋನ್ನತ ಕೃತಿಯಾಗಿದೆ. ಬ್ರಿಟಿಷರ ವಿರುದ್ಧ ಮತ್ತು ಶೋಷಿತ ಬಡವರ ಪರವಾಗಿ ಹೋರಾಡಿದ, ‘ಕರ್ನಾಟಕ ರಾಬಿನ ಹುಡ್’ ಎಂದು ಪ್ರಖ್ಯಾತನಾಗಿರುವ ಈ ಮಹಾನ್ ದೇಶ ಭಕ್ತ ಮತ್ತು ಅಪ್ರತಿಮ ಹೋರಾಟಗಾರನ ಕಥೆಯನ್ನು ತಿಳಿಸುವ ಕಾದಂಬರಿಯಾಗಿದೆ.

₹190   ₹162

ಕನಸುಗಳ ಶ್ರಾದ್ಧ | Kanasugala Shraaddha

ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?

₹200   ₹170

ಅಮೋಘವರ್ಷ | Amoghavarsha

“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು. ಅಮೋಘವರ್ಷ” ಕಾದಂಬರಿ ರಾಷ್ಟ್ರಕೂಟರ ಕುರಿತು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕಾರಿಯಾಗಲಿದೆ. ಲೇಖಕರಾದ ಲಕ್ಷ್ಮಣ ಕೌಂಟೆ ಅವರು ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದು ರಾಷ್ಟ್ರಕೂಟರ ಕುರಿತು ಇದುವರೆಗೂ ಪ್ರಕಟವಾದ ಎಲ್ಲ ಕಾದಂಬರಿಗಳಿಗಿಂತಲೂ ಭಿನ್ನವೂ ವಿಶಿಷ್ಠವೂ ಆಗಿದೆ.

₹420   ₹357

ಗೌಡ ಪರಂಪರೆ | Gouda Parampare

ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಸಮುದಾಯ ದಕ್ಷಿಣ ಕನ್ನಡದ ಪುತ್ತೂರು, ಸುಳ್ಯ, ಬೆಳ್ತಂಗಡಿ ಮತ್ತು ಬಂಟ್ವಾಳ ತಾಲ್ಲೂಕಿನ ವಿಟ್ಲ, ಪಾಣೆ ಮಂಗಳೂರು ಹಾಗೂ ಕೊಡಗಿನಲ್ಲಿ ಬಹುಸಂಖ್ಯಾತರಾಗಿ, ಸಾಕಷ್ಟು ಭೂ ಹಿಡುವಳಿ ಹೊಂದಿ ಜೀವಿಸುತ್ತಬಂದಿದ್ದಾರೆ.ಇವರು ಮೂಲತಃ ಕೃಷಿಕರು. ಆದರೆ ಈ ಸಮುದಾಯದ ಬೇರುಗಳನ್ನು ಹುಡುಕುತ್ತಾ ಹೋದರೆ ಇವರ ಮೂಲವನ್ನು ಸುಮಾರು ಸಾವಿರದ ಐದುನೂರು ವರ್ಷಗಳಷ್ಟು ಹಿಂದಕ್ಕೆ ತೆಗೆದುಕೊಂಡು ಹೋಗಬಹುದಾಗಿದೆ ಎಂಬುದು ವಿದ್ವಾಂಸರ ಅಭಿಪ್ರಾಯವಾಗಿದೆ. ಇವರ ಮೂಲದ ಬಗ್ಗೆ ಅನೇಕ ಚರ್ಚೆ, ವಾದಗಳಿದ್ದರೂ ಪ್ರಸ್ತುತ ಕೃತಿಯಲ್ಲಿ ಈ ಸಮುದಾಯದ ಮೂಲವನ್ನು ಗಂಗವಂಶದಲ್ಲಿಗುರುತಿಸಲಾಗಿದೆ

₹325   ₹276

ಈಗಲ್ಸ್ ಲೈನ್ | Eagles Line

ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ. ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ. ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್ ಥಿಲ್ಲರ್ ಅಲ್ಲ. ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ. ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡಂಚಿನ/ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದಂಬರಿ ಎಂಬ ಕುಲಾವಿ

₹220   ₹187

ಹೂವಿನ ಕೊಲ್ಲಿ | Hoovina Kolli

ಯಾರಾದರೂ ನನ್ನ ಎದೆಗೆ ಬಂದೂಕಿಟ್ಟು, ನಿನ್ನ ಕೊನೆಯ ಆಸೆ ಏನು ಅಂತ ಕೇಳಿದ್ರೆ… ಅಬ್ದುಲ್ ರಶೀದ್ ಅವರ ಬರಹಗಳನ್ನು ಇನ್ನೊಮ್ಮೆ ಓದಿಕೊಂಡುಬಿಡ್ತೀನಿ ಅಂತ ಬಂದೂಕಿಟ್ಟವರಿಗೆ ಹೇಳುವೆ. ಜಯಂತ್ ಕಾಯ್ಕಿಣಿ. ಕಾಯ್ಕಿಣಿ ಸರ್ ಇಂತಹ ಮಾತುಗಳನ್ನು ಹೇಳುತ್ತಾರೆಂದರೆ ‘ಅಬ್ದುಲ್ ರಶೀದ್’ ಅವರ ಸಾಹಿತ್ಯದ ಶಕ್ತಿ ನಿಮಗೆ ಅರಿವಾದೀತು. ಅವರು ಕಥೆ ಹೇಳುವ ರೀತಿ, ಅವರ ಕಥೆಗಳಲ್ಲಿನ ವಸ್ತು ವೈವಿದ್ಯತೆ, ಒಳನೋಟಗಳು ತುಂಬಾ ಅನನ್ಯವಾಗಿರುತ್ತವೆ. ಆದ್ದರಿಂದಲೇ ಅವರ ಕಥೆಗಳು ಒಂದಕ್ಕಿಂತ ಒಂದು ವಿಶೇಷವಾಗಿರುತ್ತವೆ ಮತ್ತು ಅವರನ್ನು ಓದುವ, ಅವರ ಕಥೆಗಳಿಗಾಗಿ ಕಾಯುವ ಒಂದು ದೊಡ್ಡವರ್ಗವೇ ಇದೆ. ಅಂತಹ ಅಬ್ದುಲ್ ರಶೀದ್ ಅವರ ಹೂವಿನ ಕೊಲ್ಲಿ ಪರಿಷ್ಕೃತ ಕಾದಂಬರಿಯನ್ನು ಇದೀಗ ವೀರಲೋಕ ಹೊರತರುತ್ತಿದೆ. ಕೊಡಗಿನ ಕಾಫಿ ತೋಟದ ಒಳಗಿನ ಬದುಕನ್ನು ಹೇಳುವ ಕಾದಂಬರಿ ಇದು. ಅಂತರ್ಜಾಲಕ್ಕಾಗಿ ಬರೆದಂತಹ ಈ ಕಾದಂಬರಿಯನ್ನು ಆಗ ಲೇಖಕರಾದ ಅಬ್ದುಲ್ ರಶೀದ್ ಅವರು ಬ್ಲಾಗಂಬರಿ ಎಂದೂ ಕರೆದಿದ್ದರು. ಈ ಕಾದಂಬರಿ ಈಗ ಪರಿಷ್ಕೃತಗೊಂಡು ಬಿಡುಗಡೆಗೊಳ್ಳುತ್ತಿದೆ.

₹270   ₹230

ನಗು ಎಂದಿದೆ ಮಂಜಿನ ಬಿಂದು | Nagu Endide Manjina Bindu

ತೀರಾ ಸಂಪ್ರದಾಯದ ಚೌಕಟ್ಟಿನಲ್ಲಿ ಬೆಳೆದು ಅನಿವಾರ್ಯವಾಗಿ ಶಾಸ್ತ್ರಿಗಳ ಮನೆ ಸೇರುವ ಸೌಭಾಗ್ಯಳಿಗೆ ವಾದ್ಯ, ಸಂಗೀತಗಳಲ್ಲಿ ಆಸಕ್ತಿ. ಶಾಸ್ತ್ರಿಯವರ ಬಳಿ ಸಂಗೀತ ಅಭ್ಯಾಸ ಮಾಡಿ ಪಕ್ಕದ ಮನೆಯವರ ಬಳಿ ವೀಣೆ ನುಡಿಸುವುದನ್ನು ಕಲಿತರೂ ಅವಳ ಪ್ರತಿಭೆಗೆ ಅವಕಾಶವಿರುವುದಿಲ್ಲ. ಶಾಸ್ತ್ರಿಗಳೇ ತಮ್ಮ ಬೆಂಗಳೂರಿನ ಗೆಳೆಯ ಅವಧಾನಿಯ ಬಳಿಗೆ ಕಳುಹಿಸಿ ಅವಳ ಪ್ರತಿಭೆಗೆ ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳುತ್ತಾರೆ. ಅವಧಾನಿಗಳ ಮನೆ ಕೂಡ ಸಂಗೀತಾರಾಧನೆಯ ದೇಗುಲ. ಅವರ ಮಗ ಮುರಳಿಗೆ ಇದು ಒಮ್ಮತವಿಲ್ಲದ್ದು. ತನಗೆ ಅದೃಷ್ಟ ದೊರಕಿತೆಂದು ಸೌಭಾಗ್ಯ ಹರ್ಷಿಸುತ್ತಿರುವಾಗಲೇ ಜಿ ಮನೆಯಿಂದ ಹೊರಹೋಗಬೇಕಾದ ಸನ್ನಿವೇಶ ಏರ್ಪಡುತ್ತದೆ. ಅವಳು ನೊಂದುಕೊಂಡರು ಜೀವನೋಪಾಯಕ್ಕಾಗಿ ತನ್ನ ಪ್ರತಿಭೆಯನ್ನು ಬಳಸಿಕೊಳ್ಳುವುದು ಸಮಂಜಸವೆನಿಸಿ, ಮುಗ್ಗಳಾದ ಆಕೆ ಪತ್ರಿಕೆಯ ಜಾಹೀರಾತು ನೋಡಿ ಅಲ್ಲಿಗೆ ಹೋಗುತ್ತಾಳೆ. ಅವಳ ಪ್ರತಿಭೆಗೆ ಸದಾವಕಾಶವಿದ್ದರೂ ಅದು ಸರಿಯಾದ ಸ್ಥಳವಲ್ಲವೆನ್ನುವುದು ತಿಳಿಯುತ್ತದೆ. ಮುಂದೆ ಅವಳ ಬದುಕಿನಲ್ಲಿ ಸಂಕರ್ಷ ನೆನ್ನುವ ಆಧುನಿಕ ಮನೋಭಾವದ ಯುವಕನ ಪ್ರವೇಶವಾಗುತ್ತದೆ. ಅಲ್ಲಿಯವರೆಗೂ ಎಲ್ಲವೂ ಒಳ್ಳೆಯ ರೀತಿಯಲ್ಲಿಯೇ ಸಾಗುವ ಬದುಕು ಇದ್ದಕ್ಕಿದ್ದಂತೆ ಸಂಕಷ್ಟಕ್ಕಿದಾಗುತ್ತದೆ. ಸಂಕರ್ಷ್, ಆಕರ್ಷ್. ಮುರಳಿ ಅವಳ ಬದುಕಿನಲ್ಲಿ ಮೂಡಿದ ಮಂಜಿನ ಬಿಂದುಗಳಾಗುತ್ತಾರೆಯೇ? ಅವಳ ಕನಸುಗಳು ಸಾಕಾರಗೊಳ್ಳುತ್ತವೆಯೇ? ಇವಕ್ಕೆಲ್ಲ ಉತ್ತರ... ನಗು ಎಂದಿದೆ... ಕಾದಂಬರಿಯಲ್ಲಿದೆ.

₹210   ₹179

ಹಿಟ್ಲರ್ ಲವ್ ಪಾಲಿಟಿಕ್ಸ್ | Hitler Love Politics

ಈ ಜಗತ್ತಿನಲ್ಲಿ ಕ್ರೂರ ಪ್ರಾಣಿಗಳಿವೆ. ನರ ಭಕ್ಷಕ ಜೀವಿಗಳಿವೆ. ಆದರೆ ಪ್ರಕೃತಿಯ ದೃಷ್ಟಿಯಲ್ಲಿ ನೋಡಿದರೆ ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಇನ್ನೊಂದಿಲ್ಲ ಎನ್ನುತ್ತಾರೆ. ಅಂತಹ ಕ್ರೂರ ಮನುಷ್ಯರ ಪೈಕಿ ಹಿಟ್ಲರ್ ನಂಬರ್ ಒನ್ ಸ್ಥಾನದಲ್ಲಿ ನಿಲ್ಲುತ್ತಾನೆ. ಆತ ಒಬ್ಬ ಸರ್ವಾಧಿಕಾರಿಯಾಗಿ, ರಾಜಕಾರಣಿಯಾಗಿ, ದೇಶಭಕ್ತನಾಗಿ ಮೆಚ್ಚುಗೆ ಗಳಿಸುತ್ತಾನೆ. ಆದರೆ ಆತ ಮಾಡಿದ ನರ ಮೇಧ ಇದೆಯಲ್ಲ ಕಣ್ಣಂಚಿನಲ್ಲಿ ನೀರಲ್ಲ ರಕ್ತವನ್ನು ತೊಟ್ಟಿಕ್ಕಿಸುತ್ತದೆ.

₹170   ₹145

ಗದಾಯುದ್ಧಂ | Gadayuddham

ಕವಿಚಕ್ರವರ್ತಿ ಬಿರುದಾಂಕಿತ ಮಹಾಮೇರು ಕವಿ ರನ್ನ ವಿರಚಿತ ಗದಾಯುದ್ದಂ (ಸಾಹಸ ಭೀಮ ವಿಜಯಂ) ಕೃತಿ , ಗಮಕ ವಿದ್ವಾನ್ ಡಾ. ಎಂ ಎ ಜಯರಾಮ್ ರಾವ್ ಅವರ ವ್ಯಾಖ್ಯಾನದೊಂದಿಗೆ. 'ಗದಾಯುದ್ಧ'ವನ್ನು ರನ್ನನು ತನ್ನ ಆಶ್ರಯದಾತ ಅರಸನಾದ ಸತ್ಯಾಶ್ರಯನನ್ನು ಮಹಾಭಾರತದ ಭೀಮನಿಗೆ ಹೋಲಿಸಿ, ಭೀಮನನ್ನೇ ಕಥಾನಾಯಕನನ್ನಾಗಿ ಕಲ್ಪಿಸಿ(ಕೊನೆಯಲ್ಲಿ ಪಟ್ಟಾಭಿಷೇಕವಾಗುವುದು ಭೀಮನಿಗೇ) ಬರೆದಿದ್ದಾನೆ. ಹತ್ತು ಆಶ್ವಾಸಗಳುಳ್ಳ ಈ ಚಂಪೂ ಕೃತಿಯು ಕೇವಲ ಗದಾಯುದ್ಧದ ಪ್ರಸಂಗವನ್ನಷ್ಟೇ ಕಥಾವಸ್ತುವನ್ನಾಗಿ ಹೊಂದಿದ್ದರೂ, ಸಮಗ್ರ ಮಹಾಭಾರತದ ಸಿಂಹಾವಲೋಕನವನ್ನಿಲ್ಲಿ ಕಾಣಬಹುದು.

₹350   ₹298

ಮನಿ ಮನಿ ಎಕಾನಮಿ | Money Money Economy

ವಿತ್ತ ಜಗತ್ತಿನ ಬರಹಗಾರರಾಗಿ ಖ್ಯಾತರಾಗಿರುವ ರಂಗಸ್ವಾಮಿ ಮೂಕನಹಳ್ಳಿ ಅವರು ಬರೆದಿರುವ ಪುಸ್ತಕವೇ ‘ಮನಿ ಮನಿ ಎಕಾನಮಿ. ’ ಇದು ಬ್ಯಾಂಕಿಂಗ್, ಹಣಕಾಸು ಕ್ಷೇತ್ರ ಕುರಿತ ಮಾಹಿತಿಪೂರ್ಣ ಪುಸ್ತಕವಾಗಿದೆ. ವಿತ್ತ ಜತ್ತಿನ ಆಗುಹೋಗುಗಳನ್ನು ಪ್ರತಿಯೊಬ್ಬ ಸಾಮಾನ್ಯ ಪ್ರಜೆಯೂ ತಿಳಿದುಕೊಳ್ಳುವ ಅಗತ್ಯವಿದೆ. ಸಾಮಾನ್ಯ ಪ್ರಜೆಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಲೇಖಕರು ಹಲವು ಉಪಯುಕ್ತ ಮಾಹಿತಿಯ ಲೇಖನಗಳನ್ನು ಬರೆದಿದ್ದಾರೆ. ವಿದ್ಯಾರ್ಥಿಗಳು, ಪೋಷಕರು, ಅಧ್ಯಾಪಕರು, ಸಾಮಾನ್ಯ ಪ್ರಜೆಗಳಿಗೂ ಉಪಯುಕ್ತ ಪುಸ್ತಕ ಇದಾಗಿದೆ.

₹175   ₹149

ಸೋಲೆಂಬ ಗೆಲುವು | Solemba Geluvu

ಕನ್ನಡದ ಪ್ರತಿಭಾಶಾಲಿ ಲೇಖಕಿ, ಅಧ್ಯಾಪಕರಾದ ದೀಪಾ ಹಿರೇಗುತ್ತಿ ಅವರು ಬರೆದಿರುವ ವ್ಯಕ್ತಿತ್ವ ವಿಕಸನದ ಬರಹದ ಪುಸ್ತಕ ಇದಾಗಿದೆ. ಜೀವನದಲ್ಲಿ ಸೋಲು, ಗೆಲುವು ಸಹಜ. ಗೆಲುವಿನಿಂದ ನಾವು ಪಾಠ ಕಲಿಯಲು ಸಾಧ್ಯವಿಲ್ಲ. ಆದರೆ ಸೋಲು ನಮಗೆ ಪಾಠ ಕಲಿಸುತ್ತೆ. ಅದಕ್ಕೇ ಲೇಖಕರು ಇಲ್ಲಿ ‘ಸೋಲೆಂಬ ಗೆಲುವು’ ಎಂಬ ಹೆಸರನ್ನು ಪುಸ್ತಕಕ್ಕೆ ಇಟ್ಟಿದ್ದಾರೆ. ಹಲವು ಸಾಧಕರ ಹಿಂದೆ ನೋವು, ಅಪಮಾನ, ತಾತ್ಸಾರ, ನಿಂದನೆಗಳು ಇರುತ್ತವೆ. ಆದರೆ ಇದೆಲ್ಲವನ್ನು ಮೆಟ್ಟಿ ನಿಂತು ಛಲ ಬಿಡದೆ ತನ್ನ ಗುರಿ ಸಾಧನೆಗಾಗಿ ಮುನ್ನುಗ್ಗುವವನೇ ನಿಜವಾದ ಸಾಧಕ ಆಗುತ್ತಾನೆ ಎಂಬ ಗುಣಾಂಶ ಈ ಪುಸ್ತಕದಲ್ಲಿದೆ. ಅಂತಹ ಮಹಾನ್ ಸಾಧಕರ ಜೀವನ ಚಿತ್ರಣ ಇಲ್ಲಿದೆ. ಇವರೆಲ್ಲರೂ ಪುಸ್ತಕ ಓದುವವರಿಗೆ ಸ್ಫೂರ್ತಿ, ಪ್ರೇರಣೆ ನೀಡುತ್ತಾರೆ.

₹150   ₹128

ಕೈ ಹಿಡಿದು ನೀ ನಡೆಸು ತಂದೆ | Kai Hididu Nee Nadesu Tande

ಇದೊಂದು ತಂದೆ, ಮಗನ ಬೆಳವಣಿಗೆಗೆ ಕೊಡುವ ಟಿಪ್ಸ್ ಪುಸ್ತಕವಾಗಿದೆ. ಹೆಚ್ಚೆಂದರೆ ಹತ್ತು ಸಾಲುಗಳಲ್ಲಿ ವಿಶ್ವವಾಣಿ ಸಂಪಾದಕರು, ಲೇಖಕರೂ ಆದ ವಿಶ್ವೇಶ್ವರ ಭಟ್ ಅವರು ಮಗನಿಗೆ ತಂದೆ ನೀಡುವ ಸದ್ವಿಚಾರಗಳ ಆಣಿಮುತ್ತುಗಳಾಗಿವೆ. ಮಗನಿಗೆ ನೇರವಾಗಿ ಹೇಳುವ ಧಾಟಿಯಲ್ಲಿರುವ ಇಲ್ಲಿನ ಬರಹಗಳು ಬಹಳ ಆಪ್ತವಾಗಿವೆ. ‘ಹತ್ತು ಕಟ್ಟೋ ಬದಲು ಒಂದು ಮುತ್ತು ಕಟ್ಟು’ ಎನ್ನುವ ಹಾಗೆ; ಮಗನ ದೈಹಿಕ, ಮಾನಸಿಕ ಬೆಳವಣಿಗೆಗೆ ಸಹಕಾರಿಯಾಗುವ ಅಪರೂಪದ ಪುಸ್ತಕವಾಗಿದೆ. ನಿಮ್ಮ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿ-ಒಟ್ಟಾರೆ ವ್ಯಕ್ತಿತ್ವ ವಿಕಸನಕ್ಕಾಗಿ ನೀವು ಓದಲೇಬೇಕಾದ ಪುಸ್ತಕವಿದು. ಮಗನಿಗೆ ಅಪ್ಪ ಯಾವತ್ತೂ ಒಳ್ಳೆಯ ಸ್ನೇಹಿತ ಎಂಬುದು ಈ ಪುಸ್ತಕದ ಸಂದೇಶವಾಗಿದೆ. ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ ಅವರು ಬರೆದಿರುವ ವಿಶಿಷ್ಟ ಪುಸ್ತಕ. ತಂದೆಯೊಬ್ಬ ಮಗನಿಗೆ ಕೊಡಬಹುದಾದ ಆಪ್ತ ಸಲಹೆಗಳು ಹೇಗಿರಬಲ್ಲವು ಎಂಬುದನ್ನು ಈ ಪುಸ್ತಕ ಕಟ್ಟಿಕೊಡುತ್ತದೆ.

₹250   ₹213