
“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು. ಅಮೋಘವರ್ಷ” ಕಾದಂಬರಿ ರಾಷ್ಟ್ರಕೂಟರ ಕುರಿತು ಪೂರ್ಣ ಪ್ರಮಾಣದಲ್ಲಿ ಅರಿತುಕೊಳ್ಳುವುದಕ್ಕೆ ಸಹಾಯಕಾರಿಯಾಗಲಿದೆ. ಲೇಖಕರಾದ ಲಕ್ಷ್ಮಣ ಕೌಂಟೆ ಅವರು ಹಲವು ಗ್ರಂಥಗಳನ್ನು ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದು ರಾಷ್ಟ್ರಕೂಟರ ಕುರಿತು ಇದುವರೆಗೂ ಪ್ರಕಟವಾದ ಎಲ್ಲ ಕಾದಂಬರಿಗಳಿಗಿಂತಲೂ ಭಿನ್ನವೂ ವಿಶಿಷ್ಠವೂ ಆಗಿದೆ.
Category: | ವೀರಲೋಕ ಪುಸ್ತಕಗಳು |
Sub Category: | |
Author: | ಲಕ್ಷ್ಮಣ ಕೌಂಟೆ | Lakshmana Kaunte |
Publisher: | ವೀರಲೋಕ |
Language: | Kannada |
Number of pages : | 348 |
Publication Year: | 2023 |
Weight | 500 |
ISBN | 9789394942790 |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
"ಎಲ್ಲರೂ ಋಜುಮಾರ್ಗದಲ್ಲಿಯೇ ಕ್ರಮಿಸಲಾರರು ಮಹಾರಾಜ, ನಿಮ್ಮ ಪುತ್ರರಾದರೂ ಸಾಮಾನ್ಯ ಜನರಲ್ಲಿ ಒಬ್ಬರು. ನೀವು ವಿಶೇಷ ವ್ಯಕ್ತಿಗಳು. ಆ ವ್ಯಕ್ತಿತ್ವವನ್ನು ಸಂಪಾದಿಸಿಕೊಂಡವರು. ನಿಮ್ಮೊಂದಿಗೆ ಅವರ ವರ್ತನೆಗಳನ್ನು ಹೋಲಿಸುವುದು ಹೇಗೆ? ಸ್ವಾಮಾನ್ಯರು ಸ್ವಭಾವತಃ ಚಂಚಲಚಿತ್ತರು. ಅನುಕೂಲ ಸಿಂಧು ಪ್ರವೃತ್ತಿಯವರು. ಲೌಕಿಕ ಹಿತಾಸಕ್ತರು ಲಾಭ ನಷ್ಟಗಳ ಹಿನ್ನೆಲೆಯನ್ನಿಟ್ಟುಕೊಂಡು ವ್ಯವಹರಿಸುವರು. ಅಂತೆಯೇ ಅವರು ಹಿಡಿದ ಮಾರ್ಗವನ್ನು ಮತ್ತೆ ಮತ್ತೆ ಬದಲಿಸುತ್ತಲೇ ಇರುತ್ತಾರೆ. ಅವರಿಗೆ ಲೌಕಿಕ ಸುಖ ಬೇಕು, ಕೇವಲ ಆಧ್ಯಾತ್ಮ ಬೇಡ. ವೇದಾಂತ ಅವರಿಗೆ ಹಿಡಿಸುವುದಿಲ್ಲ. ವೇದನೆಯಲ್ಲಿಯೇ ಅವರು ಸುಖವನ್ನು ಅರಸುತ್ತಾರೆ. ಅದೆ ಷ್ಟೇ ದುಃಖದಲ್ಲಿ ಮುಳುಗಿದರೂ ಅವರು ಸುಖದ ನಿರೀಕ್ಷೆಯನ್ನು ಬಿಡಲಾರರು. ಜನರು ಆಧ್ಯಾತ್ಮವನ್ನು ಅವಲಂಬಿಸಿ ನಡೆದರೆ ಆಳುವ ದೊರೆಗಳು ಬಹುಪಾಲು ನಿಶ್ಚಿಂತೆಯಿಂದ ಇರಬಹುದು. ಆದರೆ.."
ಲಕ್ಷ್ಮಣ ಕೌಂಟೆ | Lakshmana Kaunte |
0 average based on 0 reviews.