ಸಿಂಗಾಪುರ ಕೆಲವು ಟಿಪ್ಪಣಿಗಳು
Original price was: ₹ 100.₹ 89Current price is: ₹ 89.
Book Details
Weight | .4 kg |
---|---|
Author | Vishweshar Bhat |
Page Nos | 88 |
ISBN | 9789354565182 |
Publications | Sapna Book House |
SYNOPSIS
ಕಳೆದ ಇಪ್ಪತ್ತೈದು ವರ್ಷಗಳಲ್ಲಿ ನಾನು ಸಿಂಗಾಪುರಕ್ಕೆ ಅದಕ್ಕಿಂತ ಹೆಚ್ಚು ಸಲ ಕೆಲಸ, ಪ್ರವಾಸ ಅಥವಾ ಅನ್ಯ ಕಾರಣಕ್ಕಾಗಿ ಭೇಟಿ ನೀಡಿದ್ದಿರಬಹುದು. ಮುಂದಿನ ಐದೂ ವಿದೇಶ ಪ್ರವಾಸ ಸಿಂಗಾಪುರವೇ ಅಂದರೂ ಸರಿಯೇ. ನನ್ನ ಪಾಲಿಗೆ ಮತ್ತೆ ಮತ್ತೆ ಭೇಟಿ ನೀಡಿದರೂ ಬೋರಾಗದ ಊರು ಅದು. ಅಷ್ಟಕ್ಕೂ ಅದು ದೊಡ್ಡ ಊರೋ, ನಗರವೋ, ದೇಶವೋ, ದ್ವೀಪವೋ, ಗೊತ್ತಿಲ್ಲ. ಮಹಾನಗರವಾಗಿ ಹಳ್ಳಿತನ ಉಳಿಸಿಕೊಂಡಿರುವುದಕ್ಕೆ, ಅಂಥ ತನವನ್ನು ಉಳಿಸಿಕೊಂಡು ಜಾಗತಿಕ ನಗರವಾಗಿರುವುದಕ್ಕೆ ಸಿಂಗಾಪುರ ಯಾವತ್ತೂ ವಿಸ್ಮಯವೇ. ಒಂದು ಕಾಲದಲ್ಲಿ ಸಿಂಗಾಪುರ ಮೀನುಗಾರರ ಊರಾಗಿತ್ತು. ಇಂದು ತಿಮಿಂಗಿಲುಗಳಂಥ ಉದ್ಯಮಿಗಳ ಬೀಡಾಗಿದೆ. ಎಲ್ಲ ಜನ ಮತ್ತು ಎಲ್ಲ ದೇಶಗಳು ಕಲಿಯಲು ಸಿಂಗಾಪುರದಲ್ಲಿ ಬೆಟ್ಟದಷ್ಟಿವೆ. ಎಲ್ಲ ಪ್ರಧಾನಿಗಳು, ಅಧ್ಯಕ್ಷರು ತಮ್ಮ ದೇಶವನ್ನು ಸಿಂಗಾಪುರದಂತೆ ಮಾಡುತ್ತೇವೆ ಎಂದು ಹೇಳುತ್ತಾರೆ. ಅವರೆಲ್ಲರಿಗೂ ಬೆಂಚ್ ಮಾರ್ಕ್ ಅಂದ್ರೆ ಸಿಂಗಾಪುರ. ಹಾಗಾದರೆ ಸಿಂಗಾಪುರದಲ್ಲಿ ಏನಿದೆ? ಅದೇ ಈ ಕೃತಿಯ ಹೂರಣ. ಇದು ಪ್ರವಾಸಿ ಕಥನವಲ್ಲ, ಸಿಂಗಾಪುರವನ್ನು ವಿಜೃಂಭಿಸುವ ಬೆರಗಿನ ನೋಟವೂ ಅಲ್ಲ. ಇವು ನಾನು ಆಗಾಗ ಅಲ್ಲಿಗೆ ಹೋದಾಗ ಮಾಡಿಕೊಂಡ ಕೆಲವು ಟಿಪ್ಪಣಿಗಳು. ನೋಟಕ್ಕೆ ದಕ್ಕಿದ ನೋಟ್ಸ್ ಗಳು. ಅಲ್ಲಿಗೆ ಹೋಗದವರಿಗೆ ಇಲ್ಲಿನ ವಿಷಯ ಹೊಸತು. ಹೋದವರಿಗೂ ಅನೇಕ ಹೊಳಹುಗಳು ಸಿಗಬಹುದು.
– ವಿಶ್ವೇಶ್ವರ ಭಟ್
ABOUT AUTHOR
Opinion of Others
There are no others opinion yet.
Reviews
There are no reviews yet.