ಹೂವಿನ ಕೊಲ್ಲಿ

 230

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಯಾರಾದರೂ ನನ್ನ ಎದೆಗೆ ಬಂದೂಕಿಟ್ಟು, ನಿನ್ನ ಕೊನೆಯ ಆಸೆ ಏನು ಅಂತ ಕೇಳಿದ್ರೆ… ಅಬ್ದುಲ್ ರಶೀದ್ ಅವರ ಬರಹಗಳನ್ನು ಇನ್ನೊಮ್ಮೆ ಓದಿಕೊಂಡುಬಿಡ್ತೀನಿ ಅಂತ ಬಂದೂಕಿಟ್ಟವರಿಗೆ ಹೇಳುವೆ.

-ಜಯಂತ್ ಕಾಯ್ಕಿಣಿ.
ಕಾಯ್ಕಿಣಿ ಸರ್ ಇಂತಹ ಮಾತುಗಳನ್ನು ಹೇಳುತ್ತಾರೆಂದರೆ ‘ಅಬ್ದುಲ್ ರಶೀದ್’ ಅವರ ಸಾಹಿತ್ಯದ ಶಕ್ತಿ ನಿಮಗೆ ಅರಿವಾದೀತು. ಅವರು ಕಥೆ ಹೇಳುವ ರೀತಿ, ಅವರ ಕಥೆಗಳಲ್ಲಿನ ವಸ್ತು ವೈವಿದ್ಯತೆ, ಒಳನೋಟಗಳು ತುಂಬಾ ಅನನ್ಯವಾಗಿರುತ್ತವೆ. ಆದ್ದರಿಂದಲೇ ಅವರ ಕಥೆಗಳು ಒಂದಕ್ಕಿಂತ ಒಂದು ವಿಶೇಷವಾಗಿರುತ್ತವೆ ಮತ್ತು ಅವರನ್ನು ಓದುವ, ಅವರ ಕಥೆಗಳಿಗಾಗಿ ಕಾಯುವ ಒಂದು ದೊಡ್ಡವರ್ಗವೇ ಇದೆ. ಅಂತಹ ಅಬ್ದುಲ್ ರಶೀದ್ ಅವರ ಹೂವಿನ ಕೊಲ್ಲಿ ಪರಿಷ್ಕೃತ ಕಾದಂಬರಿಯನ್ನು ಇದೀಗ ವೀರಲೋಕ ಹೊರತರುತ್ತಿದೆ. ಕೊಡಗಿನ ಕಾಫಿ ತೋಟದ ಒಳಗಿನ ಬದುಕನ್ನು ಹೇಳುವ ಕಾದಂಬರಿ ಇದು. ಅಂತರ್ಜಾಲಕ್ಕಾಗಿ ಬರೆದಂತಹ ಈ ಕಾದಂಬರಿಯನ್ನು ಆಗ ಲೇಖಕರಾದ ಅಬ್ದುಲ್ ರಶೀದ್ ಅವರು ಬ್ಲಾಗಂಬರಿ ಎಂದೂ ಕರೆದಿದ್ದರು. ಈ ಕಾದಂಬರಿ ಈಗ ಪರಿಷ್ಕೃತಗೊಂಡು ಬಿಡುಗಡೆಗೊಳ್ಳುತ್ತಿದೆ.

ABOUT AUTHOR

ಅಬ್ದುಲ್ ರಶೀದ್ (ಜನನ 1965) ಒಬ್ಬ ಬರಹಗಾರ, ಕವಿ, ಸಂಪಾದಕ ಮತ್ತುಅನುವಾದಕ. 2004 ರಲ್ಲಿ ಅವರು ಜೀವಮಾನದ ಸಾಧನೆಗಾಗಿ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ಪಡೆದಿದ್ದಾರೆ.ಇವರು ಮೈಸೂರು ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆದಿದ್ದಾರೆ. 'ಕೆಂಡಸಂಪಿಗೆ' ಎಂಬ ಅಂತರ್ಜಾಲ ಸಾಹಿತ್ಯ ಪತ್ರಿಕೆಯ ಸಂಪಾದಕರಾಗಿರುವ ಅಬ್ದುಲ್ ರಶೀದ್ ಅವರು ವೃತ್ತಿಯಿಂದ ಮೈಸೂರು ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಾಹಕರು

Opinion of Others

There are no others opinion yet.

Customer Reviews

Reviews

There are no reviews yet.

Be the first to review “ಹೂವಿನ ಕೊಲ್ಲಿ”

Your email address will not be published. Required fields are marked *