ಹಿಟ್ಲರ್ ಲವ್ ಪಾಲಿಟಿಕ್ಸ್
₹ 170 ₹ 145
Secure Payments
Your payments are 100% secure
Pan India Shipping
Delivery between 2-8 Days
Return Policy
No returns accepted. Please refer our full policy
Book Details
Weight | .4 kg |
---|---|
Author | Satish Balegara |
Page Nos | 140 |
ISBN | 9789394942370 |
Publications | Veeraloka |
SYNOPSIS
ಈ ಜಗತ್ತಿನಲ್ಲಿ ಕ್ರೂರ ಪ್ರಾಣಿಗಳಿವೆ. ನರ ಭಕ್ಷಕ ಜೀವಿಗಳಿವೆ. ಆದರೆ ಪ್ರಕೃತಿಯ ದೃಷ್ಟಿಯಲ್ಲಿ ನೋಡಿದರೆ ಮನುಷ್ಯನಿಗಿಂತ ಕೆಟ್ಟ ಪ್ರಾಣಿ ಇನ್ನೊಂದಿಲ್ಲ ಎನ್ನುತ್ತಾರೆ. ಅಂತಹ ಕ್ರೂರ ಮನುಷ್ಯರ ಪೈಕಿ ಹಿಟ್ಲರ್ ನಂಬರ್ ಒನ್ ಸ್ಥಾನದಲ್ಲಿ ನಿಲ್ಲುತ್ತಾನೆ. ಆತ ಒಬ್ಬ ಸರ್ವಾಧಿಕಾರಿಯಾಗಿ, ರಾಜಕಾರಣಿಯಾಗಿ, ದೇಶಭಕ್ತನಾಗಿ ಮೆಚ್ಚುಗೆ ಗಳಿಸುತ್ತಾನೆ. ಆದರೆ ಆತ ಮಾಡಿದ ನರ ಮೇಧ ಇದೆಯಲ್ಲ ಕಣ್ಣಂಚಿನಲ್ಲಿ ನೀರಲ್ಲ ರಕ್ತವನ್ನು ತೊಟ್ಟಿಕ್ಕಿಸುತ್ತದೆ.
ಹಿಮಾಲಯದಲ್ಲಿಯೂ ಬೆಚ್ಚಗಿರುವ ಮನಸ್ಸು, ಹಿಟ್ಲರ್ ಹತ್ಯೆಯ ಕಥೆಗಳನ್ನು ಕೇಳಿದರೆ ಕ್ರೂರತನದ ಚಳಿಗೆ ಸಿಲುಕಿ ಮರಗಟ್ಟಿ ಹೋಗುತ್ತದೆ.
ಹಿಟ್ಲರ್ ಲವ್ ಪಾಲಿಟಿಕ್ಸ್ ಎನ್ನುವ ಈ ಕೃತಿಯಲ್ಲಿ ಹಿಟ್ಲರ್ ಮಹಿಳೆಯರನ್ನು ಕೂಡ ತನ್ನ ರಾಜಕೀಯ ಆಟದಲ್ಲಿ ದಾಳವಾಗಿ ಬಳಸಿಕೊಂಡ ಬಗ್ಗೆ ವಿವರಣೆಗಳಿವೆ. ಹಿಟ್ಲರನ್ನು ಬೆಳಕು ಎಂದು ತಿಳಿದುಕೊಂಡು ಬೆಂಕಿಯಲ್ಲಿ ಬೆಂದು ಹೋದ ಪತಂಗಗಳ ದಾರುಣ ಕಥನವಿದೆ. ಇತಿಹಾಸವನ್ನು ಬೆರಗು ಕಣ್ಣುಗಳಿಂದ ನೋಡುವವರು ಓದಲೇಬೇಕಾದ ಕೃತಿಯಿದು.
ABOUT AUTHOR
Opinion of Others
There are no others opinion yet.
Reviews
There are no reviews yet.