ಹಿಂದಿನ ನಿಲ್ದಾಣ

Original price was: ₹ 120.Current price is: ₹ 102.

Buy E_Book

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .2 kg
Author
Page Nos
Publications

SYNOPSIS

ಕರಾವಳಿಯ ಪುಟ್ಟ ಊಲಗೆ ಮಾತ್ರ ಲಗತ್ತಾಗುವ ಈ ಚಿಟಿಜ ನೋಟಗಳು, ಜೀವಗಳು ಈಗ ಅಲ್ಲಯೂ ಅಪರೂಪವಾಗುತ್ತಿರುವ ಈ ಕಾಲದಲ್ಲಿ ಈ ನೆನಪಿನ ಹೆಣಿಗೆಗಳು ಮುಂದೊಮ್ಮೆ ಹೊಸಕಾಲದ ಹೊಸಪೀಱಗೆಯ ಕುತೂಹಲದ ಹಾಗೆ ಬೆಚ್ಚನೆಯ ಹೊಏಕಯಾಗಿ ಒದಗಬಹುದು, ಕಥೆಗಾತಿಯಾಗಬೇಕೆನ್ನುವ ಹಂಬಲದ ಶುಭಶ್ರೀಯ ಅನುಭವದ ಬುತ್ತಿಯಲ್ಲಿ ಸಾಕಷ್ಟು ಕಥಾಭೀಜಗಳವೆ,

ABOUT AUTHOR

ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರು. ಅಜ್ಜಿ-ಅಪ್ಪನಿಂದ ಬಂದ ಓದು ಬರಹ ಆಸಕ್ತಿಯನ್ನು ಬಳಸಿಕೊಂಡು ಬಂದಿದ್ದಾರೆ. ರಾಜ್ಯದ ಅನೇಕ ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆಯಲ್ಲಿ ಇವರ ಲೇಖನಗಳು ಕಥೆಗಳು ಪ್ರಕಟಗೊಂಡಿವೆ. ಪ್ರಸ್ತುತ ಶೃಂಗೇರಿಯಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್. ಕೃಷ್ಣನ ಬಗ್ಗೆ ಅಪಾರ ವಲವು ಹೊಂದಿದ್ದು, ಇತ್ತೀಚಿಗೆ ಗೋಕುಲ ದಿನಗಳನ್ನು ಮರು ಸೃಷ್ಟಿಸುವ ಉದ್ದೇಶದಿಂದ ಕೃಷ್ಣ ರಾಧಯ ಕುರಿತಾದ ಕನ್ನಡದ ಹಲವು    Read More...

Opinion of Others

  1. Dattatreya Hegde

    Dattatreya HegdeJournalist

    ಸವಿನೆನೆಪಿನ `ನಿಲ್ದಾಣ' .............................. ಬಾಲ್ಯದ ಸವಿನೆನಪನ್ನು `ಹಿಂದಿನ ನಿಲ್ದಾಣ'ದ (ಲಲಿತ ಪ್ರಬಂಧಗಳು)ಕೃತಿಯ ಮೂಲಕ ಶುಭಶ್ರೀ ಭಟ್ಟ ತೆರೆದಿಟಿದ್ದಾರೆ. ಅಷ್ಟೇನೂ ಅರಿವಿರದ ಬಾಲ್ಯದ ದಿನಗಳ ಅನುಭವ ಪುಳಕಗೊಳ್ಳುವಂತೆ ಮಾಡುತ್ತದೆ. ಇಲ್ಲಿ ಲೇಖಕಿಯದ್ದೂ ಇದೇ ಅನುಭವ. ಮೂಢನಂಬಿಕೆಯ ಬಗ್ಗೆ ಅರ್ಥವಾಗದ ವಯಸ್ಸಿನಲ್ಲಿ ಎಲ್ಲವನ್ನೂ ನಂಬುವುದು, ಕೊಡುವ ಪುಡಿಗಾಸಿನಲ್ಲಿ ಚೂರು-ಪಾರು ಉಳಿಸಿ ಮಕ್ಕಳ ಕಥೆ ಪುಸ್ತಕ ಖರೀದಿಸುವುದು, ತೇರಿನ ವೈಭವ, ಅಲ್ಲಿ ಹುಡುಗಿಯರಿಗಾಗಿ ಗಾಳ ಹಾಕುವ ಹುಡುಗರು, ಬಳೆಯಂಗಡಿ ಸಾಲು, ಮಿಠಾಯಿಯ ನೆನಪನ್ನು ಪುಟ್ಟ ಬರೆಹಗಳ ಮೂಲಕ ಚಂದವಾಗಿ ಕಟ್ಟಿಕೊಟ್ಟಿದ್ದಾರೆ. ಮಲೆನಾಡು ಮತ್ತು ಕರಾವಳಿಯ ಭಾಗವಾದ ಉತ್ತರ ಕನ್ನಡದ ಕೆಲವು ಪದ್ದತಿ, ಮನೆಗೆಲಸದವರ ಜೊತೆಗಿನ ಆಪ್ತತೆ, ಅವರೊಡನೆ ತಾರತಮ್ಯವಿರದೆ ಕಳೆದ ಜೀವನ, ಮಕ್ಕಳ ಕಿಲಾಡಿಯ ದಿನಗಳನ್ನು ಓದಿದಾಗ ಬಾಲ್ಯದ ಜೀವನ ಮರುಕಳಿಸುತ್ತದೆ. ಮಜವಾದ ಬಾಲ್ಯವನ್ನು ಗೆಳತಿಯರು, ನೆರೆಹೊರೆಯವರು, ಸಹೋದರಿಯೊಂದಿಗೆ ಕಳೆದ ನೆನಪನ್ನು ಸುಮಧುರವಾಗಿ ಹೆಣೆದಿದ್ದಾರೆ. ದಣಪೆ ಹಾರುವುದು, ದಾಸವಾಳ ಗಿಡದ ಶೆಳೆಯಲ್ಲಿ ಅಮ್ಮನಿಂದ ಪೆಟ್ಟು ತಿನ್ನುವುದು, ಅಜ್ಜಿಯಿಂದ ಮುದ್ದುಗರೆಸಿಕೊಳ್ಳುವುದು, ಮಂಗಾಟದ ಬಾಲ್ಯ ಹಿಂದಿನ ನಿಲ್ದಾಣದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಆದರೆ ಅವುಗಳ ವಿಸ್ತರಣೆ ಇನ್ನಷ್ಟು ಇದ್ದರೆ ಚೆಂದವಿತ್ತು ಎನಿಸುತ್ತದೆ. ಕೊಂಕಣ ರೈಲು ಬರುವಾಗ ಗದ್ದೆಯಂಚಲ್ಲಿ ಕುಳಿತು ಟಾಟಾ ಮಾಡುವುದು, ಗುಡ್ಡ ಏರಿ ವಿವಿಧ ಹಣ್ಣು ಕೀಳುವುದು, ತೋಟದಂಚಿನಲ್ಲಿ ಮಾವಿನಹಣ್ಣು ಹೆಕ್ಕುವುದು ಒಂದು ರೀತಿಯ ಹುಡುಗಾಟದ ಬುದ್ಧಿಯನ್ನು ತೋರಿದರೆ, ಮುಗ್ಧೆ ಮಾಸ್ತಿಯ ಮೇಲಿನ ಪ್ರೀತಿ, ಪಾರಿಜಾತದ ಮರ ಬಿದ್ದುಹೋದಾಗಿನ ಆದ ನೋವು , ಹಳ್ಳಿಗೆ ಬಸ್ ಬಂದಿದ್ದು, ಸ್ಥಗಿತವಾಗಿದ್ದರ ಬಗೆಗಿನ ಪ್ರಬಂಧ ಮನಸೆಳೆಯುತ್ತವೆ. ಮುನ್ನುಡಿ ಬರೆದಿರುವ ಕವಿ ಸುಬ್ರಾಯ ಚೊಕ್ಕ್ಕಾಡಿ, ಇಲ್ಲಿನ ಬರೆಹಗಳು ಕೊಂಚ ವಿನೋದ, ತುಂಟತನದಿAದ ಕೂಡಿದವಾಗಿವೆ. ಕೆಲವು ಬರೆಹಗಳು ಹೆಚ್ಚು ಭಾವನಿಷ್ಪವೂ, ಸ್ವಲ್ಪ ಗಂಭೀರವೂ ಆಗಿದೆ. ಬಾಲ್ಯದ ನೆನೆಪುಗಳು ಲೇಖಕಿಯಲ್ಲಿ ಜೀವಂತವಾಗಿ ಇನ್ನೂ ಉಳಿದಿರುವುದು ಸಂತೋಷ. ನಮ್ಮ ಭಾವಕೋಶವನ್ನು ಲವಲವಿಕೆಯಿಂದ ಕಾಪಿಡುವುದು ಈ ನೆನಪುಗಳು ಎಂದಿದ್ದಾರೆ. ಹಿಂದಿನ ನಿಲ್ದಾಣದ ಬಗ್ಗೆ ಲೇಖಕಿ, ದಣಪೆಯೊಳಗೆ ಸಿಲುಕಿಕೊಂಡ ಸಾಲುಗಳನ್ನು ಹಿಂದಿನ ನಿಲ್ದಾಣದಿಂದ ಈಗಿನ ನಿಲ್ದಾಣದ ತನಕ ತಂದು ದಾಟಿಸಿದ್ದೇನೆ ಎಂದಿದ್ದಾರೆ. ಹಳ್ಳಿಯಲ್ಲಿ ಪ್ರಕೃತಿಯೊಂದಿಗೆ ಬದುಕಿದವರಿಗೆ , ಜೀವನವನ್ನೆಲ್ಲ ಹಸಿರಿನ ಮಧ್ಯೆಯೇ ಕಳೆದವರಿಗೆ ಬೆಂಗಳೂರಿಗೆ ಬಂದಾಗ ಉಸಿರು ಕಟ್ಟುವ ವಾತಾವರಣ ಎದುರಾಗುವ ಬಗೆ, ಅದನ್ನು ನಿವಾರಿಸಿಕೊಳ್ಳಲು ಹೊರ ಪ್ರದೇಶ ತಿರುಗಾಡುವುದನ್ನು ಮನೋಜ್ಞವಾಗಿ ಬಿಂಬಿಸಿದ್ದಾರೆ. ಕೊನೆಯಲ್ಲಿ, ಪರಿಸರವನ್ನು ಮನೆಮಗಳಂತೆ, ಬಾಲ್ಯದ ಗೆಳತಿಯಂತೆ ಕಾಣಿರಿ ಎಂಬ ಅಮೂಲ್ಯ ಸಂದೇಶವನ್ನೂ ನೀಡಿದ್ದಾರೆ. ಪಚಡಿ, ಬಿಂಬ್ಲಕಾಯಿ, ರಾಜನೆಲ್ಲಿಕಾಯಿ, ಹುಣಸೆಹಣ್ನು ಕಂಬಳ ಮಾಡಿ ತಿನ್ನುವ ಸುಖದ ವಿವರಣೆ ಮನಸೆಳೆಯುತ್ತದೆ. ಜೊತೆಗೆ ಗಜ್ನಿಕೆರೆ, ಗಿಂಡಿ ಚೊಂಬು, ಬುಡ್ಡಿದೀಪ ಇವುಗಳ ಹೆಸರು ಮರೆತುಹೋಗುತ್ತ, ಅವು ಮೂಲೆಸೇರುತ್ತಿರುವ ಇಂದಿನ ದಿನಗಳಲ್ಲಿ ಓದುಗರಿಗೆ ಇಂತಹ ಪಾತ್ರೆಗಳು ಅಥವಾ ವ್ಯವಸ್ಥೆ ಇತ್ತೆನ್ನುವುದನ್ನು ನೆನೆಪಿಸುತ್ತಾರೆ. ಇಂದಿನ ಮಕ್ಕಳು ಈ ರೀತಿಯ ಬಾಲ್ಯ ಅನುಭವಿಸುವುದು ಸಾಧ್ಯವಿಲ್ಲ. ಹಳ್ಳಿಯ ಬಾಲ್ಯದ ಮರೆಯಲಾಗದ, ಹುಡುಗಾಟದ ಜೀವನದ, ಸವಿನೆನಪಿನ ಇಂತಹ ಕೃತಿಗಳನ್ನಾದರೂ ಓದಬೇಕು. ಕೃತಿಯಲ್ಲಿನ ಎಲ್ಲಾ ಪ್ರಬಂಧಗಳು ಓದಿಸಿಕೊಂಡು ಹೋಗುತ್ತವೆ. ಅಲ್ಲಲ್ಲಿ ಹವಿಗನ್ನಡದ ಸಾಲುಗಳಿವೆ. ಬಾಲ್ಯದ ನೆನಪನ್ನು ಓದಿದಾಗ ನಮ್ಮನ್ನೂ ಕೂಡ ಬಾಲ್ಯಕ್ಕೆ ಕರೆದೊಯ್ಯುತ್ತದೆ. ನವಿರಾದ ನಿರೂಪಣೆ ಇದೆ. ಗಾಂವ್ಟಿ ಶಬ್ದಗಳಿವೆ. ಇಂತಹ ಶಬ್ದ ಕೇಳಿದಾಗ ಏನೋ ಒಂದು ರೀತಿಯ ಖುಷಿಯಾಗುತ್ತದೆ. ಕೊನೆಯಲ್ಲಿ, ಮನಸಿನ ಸರಗೋಲು ತೆಗೆದು ನೆನಪುಗಳು ಒಳಬರಲಿ ಎಂದು ಲೇಖಕಿ ಕೃತಿಯಲ್ಲಿ ಬರೆದುಕೊಂಡಿದ್ದಾರೆ. ಖಂಡಿತವಾಗಿ ಈ ಕೃತಿ ನಮ್ಮೊಳಗೆ ಹಳೆಯ ನೆನಪನ್ನು ಒತ್ತರಿಸುತ್ತದೆ. ಕೃತಿಯನ್ನು ಓದಲು ಕೈಗೆತ್ತಿಕೊಂಡರೆ ಓದಿಯೇ ಮುಗಿಸಿಬಿಡುವಷ್ಟು ಅಲ್ಲಿನ ಘಟನೆಗಳು ನಮ್ಮನ್ನು ಮುತ್ತಿಕೊಳ್ಳುತ್ತವೆ.

  2. Tejaswini Hegde

    Tejaswini HegdeAuthor

    ಕಾರಣಾಂತರಗಳಿಂದ ಕಳೆದ ಏಳೆಂಟು ತಿಂಗಳಿಂದ ಓದು ಮತ್ತು ಬರಹಕ್ಕೆ ವಿರಾಮ ಕೊಡಬೇಕಾಗಿ ಬಂತು. ಆದರೂ ಆಗೀಗ, ಈ ಮೊದಲು ಓದಿ ಮೆಚ್ಚಿ ಎಲ್ಲೋ ಗೀಚಿಟ್ಟುಕೊಂಡಿದ್ದ ಸಾಲುಗಳನ್ನೋ, ಬಹಳ ಮೆಚ್ಚುಗೆಯಾದ ಕಥೆಗಳನ್ನೋ ಆದಾಗೆಲ್ಲ ಮರು ಓದಿಗೆ ಹಚ್ಚುತ್ತಾ, ಮೆಚ್ಚುತ್ತಾ, ಇನ್ನೂ ನನ್ನೊಳಗಿನ ಓದುಗಳು, ಬರಹಗಾರಳು ಜೀವಂತವಾಗಿದ್ದಾಳೆಂದು ಸಮಾಧಾನಿಸಿಕೊಳ್ಳುವ ಪ್ರಯತ್ನ ಸಾಗುತ್ತಿತ್ತು. ಹೀಗಿರುವಾಗ ಮತ್ತೆ ಓದಿನತ್ತ ಮುಖ ಮಾಡಲು ಅಂತೂ ಹೇಗೋ ತುಸು ಸಮಯ ಹೊಂದಿಸಿ ಹೊರಟಾಗ.... ಆತ್ಮೀಯರು, ಸ್ನೇಹಿತರು ಅಭಿಮಾನದಿಂದ ಕಳುಹಿಸಿದ್ದ ಹಾಗೂ ನಾನೇ ಎಂದಾದರೊಂದು ದಿನ ಓದಿ ಮುಗಿಸಿಯೇನು ಎಂಬ ಆಶಯದಲ್ಲಿ ಆಗೀಗ ಕೊಂಡಿದ್ದ ಪುಸ್ತಕಗಳ ದಂಡು! ಮೊದಲಿಗೆ ಲಘು ಬರಹದಿಂದಲೇ ಆರಂಭಿಸೋಣ ಎಂದು ಹೊರಟಾಗ ಕೈ ಎತ್ತಿಕೊಂಡಿದ್ದು ತಿಂಗಳುಗಳ ಹಿಂದೆಯೇ "ಬಿಡುವಾದಾಗ ಓದಿ ಹೇಳು..." ಎಂದು ಪ್ರೀತಿಯಿಂದ ಕಳುಹಿಸಿದ್ದ ಶುಭಶ್ರೀ ಭಟ್ ಅವರ ಲಲಿತ ಪ್ರಬಂಧಗಳ ಸಂಕಲನ ‘ಹಿಂದಿನ ನಿಲ್ದಾಣ’ ಪುಸ್ತಕವನ್ನು. ಇದು ಅವರ ಬೊಚ್ಚಲ ಪುಸ್ತಕವಾಗಿದ್ದು, ಸಹಜವಾಗಿಯೇ ಆರಂಭವನ್ನು ತನ್ನ ಬಾಲ್ಯದ ಸವಿನೆನಪುಗಳ ಸರಮಾಲೆಗಳೊಂದಿಗೇ ಮಾಡಿದ್ದಾರೆ. ಲೇಖಕಿಯು ಹುಟ್ಟಿ ಬೆಳೆದ ಪರಿಸರ ಹಾಗೂ ನನ್ನ ಅಮ್ಮನ ತವರು (ನನ್ನಜ್ಜನ ಮನೆ) ಎರಡೂ ಒಂದೇ ಆಗಿದ್ದರಿಂದಲೋ ಏನೋ ಇಲ್ಲಿಯ ಪೆಪ್ಪರಮೆಂಟಿನಂಥ ಪುಟ್ಟಪುಟ್ಟ ಬರಹಗಳು ಬಹುಬೇಗ ನನ್ನೊಳಗಿಳಿದವು. ಹೀಗಾಗಿ ಸಣ್ಣಸಣ್ಣ (ಒಂದೆರಡು ಪುಟಗಳ) ಗುಳಿಗೆಯಾಕಾರದ 23 ಪುಟ್ಟ ಬರಹಗಳನ್ನು ಸರಾಗವಾಗಿ ಪೆಪ್ಪರ್ಮೆಂಟಿನಂತೇ ಮೆಲ್ಲುತ್ತಾ ಆಸ್ವಾದಿಸಲಾಯಿತು. ಶಾಲೆಗೆ ರಜೆ ದೊರಕಿದ್ದೇ ನಾವು ಮಂಗಳೂರಿನಿಂದ ಹಾರಿ ಹೋಗುತ್ತಿದ್ದ ಕುಮ್ಟೆಯ ಬಳಿಯ ಕೆಕ್ಕಾರಿನಲ್ಲಿರುವ ನನ್ನಜ್ಜನ ಮನೆಯ ಪರಿಸರ, ಅಲ್ಲಿಯ ಜನಜೀವನಕ್ಕೂ, ಕುಮ್ಟೆಯ ಅತ್ತಲಿನ ಧಾರೇಶ್ವರದ ಬದುಕಿಗೂ ಏನೊಂದೂ ವ್ಯತ್ಯಾಸವಿಲ್ಲ ಮತ್ತು ಈಗ ಅತ್ತಕಡೆ ಏನೇನು ಬದಲಾವಣೇಗಳು ಆಗುತ್ತಿವೆಯೋ ಅವೆಲ್ಲ ಇತ್ತಲೂ ಆಗುತ್ತಿರುವಂಥದ್ದೇ! ಓದುತ್ತಿರುವಂತೆಯೇ ಧಾರೇಶ್ವರದ ಸಾವಿತ್ರಜ್ಜಿ, ಕೆಕ್ಕಾರಿನ ಕಮಲಕ್ಕ, ಸರಸೋತಕ್ಕ ಆದರು.... ಅಲ್ಲಿಯ ಮುಗ್ಧೆ ಮಾಸ್ತಿ, ಕೆಕ್ಕಾರಿನ ನನ್ನಚ್ಚುಮೆಚ್ಚಿನ ಮತ್ತು ರಜೆಗೆ ನಾನು ಹೋದಾಗೆಲ್ಲ ತನ್ನ ನಿರ್ಮಲ ಪ್ರೀತಿ, ಕಾಳಜಿ ತೋರುತ್ತಿದ್ದ ಹಾಲಕ್ಕಿ ಜನಾಂಗದ ದೇವಿಯಾದಳು, ಅಲ್ಲಿಯ ಪೆದ್ದು ನಗೆಗೌಡ ನಮ್ಮೆಲ್ಲರನ್ನೂ ಬಾಲ್ಯದಲ್ಲಿ ತನ್ನ ಎತ್ತಿನಗಾಡಿಯಲ್ಲಿ ತಿರುಗಿಸುತ್ತಿದ್ದ ಇಲ್ಲಿಯ ದೇವುಡ್ಗ ಆದ, ಅಲ್ಲಿಯ ಮನೆಯಂಗಳದ ಪಾರಿಜಾತದ ಮೋಹ ನನ್ನಜ್ಜಿ ಮನೆಯ ಹಿತ್ತಲಿನ ನನ್ನ ಪ್ರೀತಿಯ ಚಿಕ್ಕುಮರವಾಯ್ತು, ಧಾರೇಶ್ವರದ ತೇರು ಕೆಕ್ಕಾರಿನ ತೇರಾಯ್ತು.... ಮತ್ತೆಲ್ಲ ಅದದೇ ಸಾಮ್ಯ ಇತ್ತಲೂ ಅತ್ತಲೂ... ಕಡು ಕೃಷ್ಣ ಮೋಹಿ, ನವಿಲ್ಮಳ್ಳಿ, ಕಡಲ್ಮಳ್ಳಿ ಎಲ್ಲವೂ ಇತ್ತಲೂ ಇರುವಂಥದ್ದೇ ಆಗಿರುವಾಗ ಬರಹಗಳೊಳಗಿನ ಲೇಖಕಿಯ ಬಾಲ್ಯದ ಎಲ್ಲ ಸವಿನೆನಪುಗಳು ನನ್ನ ಬಾಲ್ಯದೊಂದಿಗೆ ಬೆರೆತು ಹಿತವಾದ ಮುದ ತುಂಬಿದವು. ಹಳ್ಳಿಯ ಪರಿಸರವನ್ನು ಅನುಭವಿಸಿದ, ಕಂಡಿರುವ ಅಥವಾ ಆ ಒಂದು ಬದುಕಿನ ಚೆಲುವನ್ನು ಆಸ್ವಾದಿಸುವ ಮನಸುಳ್ಳ ಎಲ್ಲರಿಗೂ ಈ ನವಿರು ಬರಹಗಳು ಮೆಚ್ಚುಗೆಯಾಗುತ್ತವೆ. ಜೀವತೋತ್ಸಾಹವನ್ನು ತುಂಬುವ, ಚೇತೋಹಾರಿ ಮುಗ್ಧ ಬರಹಗಳ ಸುಂದರ ಗುಚ್ಛದೊಂದಿಗೆ ಅಕ್ಷರ ಪಯಣಕ್ಕೆ ಶುಭಾರಂಭ ಮಾಡಿರುವ ಉದಯೋನ್ಮುಖ ಲೇಖಕಿ Shubhashree Bhat ಅವರಿಗೆ ಅಭಿನಂದನೆಗಳು. ಅವರು ಮತ್ತಷ್ಟು ಗಂಭೀರ ಓದು, ಬರಹ ನಡೆಸುತ್ತ, ವೈವಿಧ್ಯಮಯ ಪುಸ್ತಕಗಳನ್ನು ಸಾಹಿತ್ಯ ಲೋಕಕ್ಕೆ ನೀಡಲಿ ಎಂದು ಹಾರೈಸುವೆ. 😊 #ಪುಸ್ತಕಪರಿಚಯ #ಹಿಂದಿನನಿಲ್ದಾಣ ಪು: ಹಿಂದಿನ ನಿಲ್ದಾಣ ಲೇ: ಶುಭಶ್ರೀ ಭಟ್ಟ ಬೆಲೆ: 120/- ಪುಟಗಳು: 88 ಪ್ರಕಾಶನ: ವೀರಲೋಕ ~ತೇಜಸ್ವಿನಿ ಹೆಗಡೆ

Customer Reviews

Reviews

There are no reviews yet.

Be the first to review “ಹಿಂದಿನ ನಿಲ್ದಾಣ”

Your email address will not be published. Required fields are marked *

Related Products