ಈಗಲ್ಸ್ ಲೈನ್

 187

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .4 kg
Author
Page Nos
ISBN
Publications

SYNOPSIS

ಈ ಕೃತಿಯ ಹಲವು ಅಧ್ಯಾಯಗಳಲ್ಲಿ ಒಂದೊಂದು ಕಥೆಗೆ ವಸ್ತುವಾಗುವಂಥ ಬೆರಗಿನ ವಿವರಗಳಿವೆ. ಸ್ವಾರಸ್ಯಕರ ಮಾಹಿತಿಗಳಿವೆ. ಹಾಗಂತ ಇದು ಅಜ್ಜಿಕಥೆಯಲ್ಲ. ಕುತೂಹಲ, ಪದೇಪದೇ ಕೈಜಗ್ಗುತ್ತದೆ; ಆದರೆ ಇದು ಸಸ್ಪೆನ್ಸ್ ಥಿಲ್ಲರ್ ಅಲ್ಲ. ಕಾಡಿನ ಹತ್ತಾರು ಜೀವಿಗಳ ಬದುಕಿನ ವಿವರವಿದ್ದರೂ ಇದು ಪರಿಸರದ ಕಥೆಯಷ್ಟೇ ಅಲ್ಲ. ಹಲವು ನಂಬಿಕೆ, ಆಚರಣೆಗಳ ಮೆರವಣಿಗೆಯಿದೆ. ಆದರೆ ಇದು ಕಾಡಂಚಿನ/ ಮಲೆನಾಡಿನ ಹಳ್ಳಿಯೊಂದರ ಕಥೆಯಷ್ಟೇ ಆಗಿ ಉಳಿಯುವುದಿಲ್ಲ. ಬದಲಿಗೆ, ಈ ಎಲ್ಲಾ ಅಂಶಗಳನ್ನೂ ಇಷ್ಟಿಷ್ಟೇ ಸೇರಿಸಿ ಹೆಣಿಗೆ ಹಾಕಿದ ಕಾದಂಬರಿ ಎಂಬ ಕುಲಾವಿ

ABOUT AUTHOR

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಲ್ಯಾ ಎಂಬ ಪುಟ್ಟ ಹಳ್ಳಿ ರಾಜೇಶ್ ಅವರ ಹುಟ್ಟೂರು. ಪ್ರಕೃತಿಯ ಜೊತೆಯಲ್ಲಿ ಬೆಳೆದ ಇವರಿಗೆ ಪರಿಸರವೆಂದರೆ ಇನ್ನಿಲ್ಲದ ಪ್ರೀತಿ. ಪರಿಸರದ ಕುರಿತು ಮುಗಿಯದ ಅಧ್ಯಯನದ ಆಸಕ್ತಿ. ವೃತ್ತಿಯಲ್ಲಿ ಇಂಜಿನಿಯರ್ ಆದ ರಾಜೇಶ್, ವೃತ್ತಿಯ ಪರಿಧಿ ಮೀರಿದ ಓದು ಬರವಣಿಗೆಯ ಸಾಂಗತ್ಯವನ್ನು ಅಂಟಿಸಿಕೊಂಡವರು. ವಿಜ್ಞಾನ, ಜೀವನ, ಪರಿಸರ, ಪ್ರವಾಸ, ಸಮಾಜವನ್ನು ವೈಚಾರಿಕ ಚಿಂತನೆಗೆ ಪ್ರೇರೇಪಿಸುವ ಇವರ ಹಲವಾರು ಲೇಖನಗಳು    Read More...

Opinion of Others

  1. Nalini Bhemappa

    Nalini BhemappaWriter

    ಓದುಗರಿಗೆ ಒಂದು ವಿಭಿನ್ನ ಕಥಾವಸ್ತು, ಅದರಲ್ಲೂ ಪರಿಸರ, ಪ್ರಾಣಿ, ಪಕ್ಷಿ ಎಲ್ಲದರ ಬಗ್ಗೆ ಕಾಳಜಿ ಹೊಂದಿದ ಕಾದಂಬರಿ ಎಂದರೆ ಉತ್ಪ್ರೇಕ್ಷೆಯಾಗಲಾರದು. ಒಂದು ಹಳ್ಳಿಯ, ಕಾಡಿನ ಚಿತ್ರಣವನ್ನು ಕಣ್ಣ ಮುಂದೆಯೇ ಹರಡುವಂತೆ, ಅಕ್ಷರಗಳ ರೂಪದಲ್ಲಿ ಹೇಗೆಲ್ಲಾ ಕಟ್ಟಿಕೊಡಬಹುದು ಎಂಬುದಕ್ಕೆ ಬಹುದೊಡ್ಡ ಉದಾಹರಣೆ ‘ಈಗಲ್ ಲೈನ್’. ಪರಿಸರದ ಚಿತ್ರಣ ಓದುಗರಿಗೆ ರಸದೌತಣದಂತಿದೆ. ಸರಳ ನಿರೂಪಣೆ, ಸರಾಗವಾಗಿ ಸಾಗುವ ಕಥೆ, ಎಲ್ಲಿಯೂ ತಡವರಿಸದೆ ಮುಂದುವರೆಯುತ್ತದೆ. ಮೊದಲ ಪುಸ್ತಕದಲ್ಲಿಯೇ ಭರವಸೆ ಮೂಡಿಸಿರುವ ಲೇಖಕ ಎನ್ನಬಹುದು. ಮಾಳ ಎಂಬ ಕುಗ್ರಾಮ, ಅಲ್ಲಿಯ ಜನ, ಅವರ ಆಚರಣೆ, ಪದ್ಧತಿ, ಸಂಪ್ರದಾಯ, ಜಾತಿಪದ್ಧತಿ, ಮೂಢನಂಬಿಕೆ ಎಲ್ಲವನ್ನೂ ಹೇಗೆ ಅಪ್ಪಿಕೊಂಡಿದ್ದಾರೆ, ಸಹಜವಾಗಿ ಒಪ್ಪಿಕೊಂಡಿದ್ದಾರೆ, ಅವುಗಳನ್ನು ಬದಲಾಯಿಸಲೂ ಸಾಧ್ಯವಿಲ್ಲ, ಸುಮ್ಮನೆ ನೋಡುತ್ತಾ ಸಾಗಬೇಕು ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತಾ ಹೋಗುತ್ತಾರೆ. ಹಳ್ಳಿಗರ ಮುಗ್ದತೆ, ಅದನ್ನು ಬಂಡವಾಳ ಮಾಡಿಕೊಳ್ಳುವ ಜನ, ಚಿಕ್ಕಪುಟ್ಟ ವಿಷಯಗಳಲ್ಲಿಯೂ ಅವರು ಸಂತೋಷ ಹುಡುಕಿ ಸಂಭ್ರಮಿಸುವ ರೀತಿ, ಅವರಲ್ಲಿ ಅಡಗಿರುವ ಪ್ರತಿಭೆ, ತಾವು ನಂಬಿದ ದೈವಕ್ಕೆ, ತಲತಲಾಂತರದಿಂದ ನಡೆದುಕೊಂಡು ಬಂದ ರೀತಿ ನೀತಿ ಪದ್ಧತಿಗಳಿಗೆ ಎಂದೂ ದ್ರೋಹ ಬಗೆಯದ ಗುಣ ಎಲ್ಲವನ್ನೂ ಯಾವ ತುಂಬ ಸಹಜವಾಗಿ, ಕಟ್ಟಿಕೊಟ್ಟಿದ್ದಾರೆ. ಹಕ್ಕಿ, ಹಾವು, ಜೇನು, ಹುಲಿ, ಏಡಿ, ಆಮೆ, ಮುಳ್ಳುಹಂದಿ, ಗಂಧದ ಮರ, ಔಷಧೀಯ ಸಸ್ಯ ಹೀಗೆ ಸಕಲ ವಿಷಯಗಳ ಬಗ್ಗೆಯೂ ಮಾಹಿತಿ ನೀಡುತ್ತ, ಕಾಡನ್ನೇ ನಮ್ಮ ಮುಂದೆ ಬಯಲು ಮಾಡಿದ್ದಾರೆ ಎನ್ನಬಹುದು. ಕಥೆಯ ಜೊತೆ ವಿವರಗಳನ್ನು, ಮಾಹಿತಿಯನ್ನು ಹೇಗೆ ಕೊಡಬಹುದು ಎಂಬುದರ ಸೂಕ್ಷ್ಮತೆ ಚೆನ್ನಾಗಿ ಅರಿತಿದ್ದಾರೆ. ಮುಖ್ಯವಾಗಿ ಗಮನಿಸಿದ ಅಂಶವೆಂದರೆ ಅವಶ್ಯಕತೆ ಇರುವ ಕಡೆ ಅಲ್ಲಿಯ ಜನರ ನಂಬಿಕೆ, ಪದ್ಧತಿಗಳ ಹಿಂದಿರಬಹುದಾದ ವೈಜ್ಞಾನಿಕ ಅಥವಾ ತಾರ್ಕಿಕ ಹಿನ್ನೆಲೆಗಳನ್ನು ತಕ್ಷಣವೇ ವಿವರಿಸಿರುವ ರೀತಿ ತುಂಬ ಮೆಚ್ಚುಗೆಯಾಗುತ್ತದೆ. ಅಲ್ಲಲ್ಲಿ ಕಚಗುಳಿ ಇಡುವ ಸಂಭಾಷಣೆ, ನವಿರಾಗಿ ಬೆರೆತ ಹಾಸ್ಯ ಮನರಂಜಿಸುತ್ತದೆ. ಪ್ರಶಾಂತವಾಗಿ ಹರಿವ ತೊರೆಯಂತೆ, ಈ ಕಾದಂಬರಿ ತಣ್ಣಗೆ ಓದುಗರನ್ನೂ ಸೇರಿಸಿಕೊಂಡು ಸಾಗುತ್ತದೆ. ಕಾದಂಬರಿಯಲ್ಲಿ ಬರುವ ಪಾತ್ರಗಳು, ಅದರಲ್ಲೂ ಮಾಣಿಗನ ಪಾತ್ರ ಕೊನೆಯವರೆಗೂ ಕಾಡುತ್ತದೆ. ಅಂತ್ಯ ಕೂಡಾ ಊಹಿಸಲಾರದ ರೀತಿಯಲ್ಲಿ ಮುಗಿಸಿರುವುದರಿಂದ, ಕೊನೆಗೆ ನಿಟ್ಟುಸಿರೊಂದು ಹೇಳದೆ ಕೇಳದೆ ಹೊರಬರುತ್ತದೆ.. ಬೆನ್ನುಡಿಯಲ್ಲಿ ಮಣಿಕಾಂತ್ ಸರ್ ಹೇಳಿದಂತೆ ಪೂಚಂತೇ ಅವರನ್ನು ಧ್ಯಾನಿಸುತ್ತಲೇ ಕೃತಿ ರಚನೆಗೆ ಮುಂದಾದರೇನೋ ಎನಿಸುವುದು ನಿಜ. ಸಂಭಾಷಣೆಯಲ್ಲಿ ಬರುವ ಕೆಲವು ಪ್ರಾಂತೀಯ ಪದಗಳ ಅರ್ಥ ಕೊನೆಯಲ್ಲಿ ಕೊಟ್ಟಿದ್ದರೆ ಚೆನ್ನಾಗಿರ್ತಿತ್ತು ಎನ್ನುವುದೊಂದೇ ಪುಟ್ಟ ಸಲಹೆ. ಕಾದಂಬರಿ ಹೆಚ್ಚು ಹೆಚ್ಚು ಓದುಗರನ್ನು ತಲುಪಲಿ. ಮತ್ತಷ್ಟು ವಿಭಿನ್ನ ರೀತಿಯ ಪುಸ್ತಕಗಳು ನಿಮ್ಮಿಂದ ಹೊರಬರಲಿ ಎಂದು ಪ್ರೀತಿಯಿಂದ ಹಾರೈಸುವೆ.

  2. Shwetha Bhide

    Shwetha BhideWriter

    Rajesh Kumar Kallya ಅನೇಕ ವರ್ಷಗಳ ಫೇಸ್ಬುಕ್ ಪರಿಚಯ. ಊರ ಕಡೆಯವರೆಂಬ ಸಲುಗೆಯಿಂದ ಕಾಲೆಳೆದುಕೊಳ್ಳುವಷ್ಟು ಸಲೀಸಿದ್ದರೂ ಅವರ ಪೋಸ್ಟ್ ಗಳು ಗಮನ ಸೆಳೆಯುತ್ತಿದ್ದವು. ಆಗಾಗ ಹಾವು, ಹುಳ, ಹಕ್ಕಿಗಳು ಎನ್ನುವ ಪರಿಸರ ಸಂಬಂಧದ ಪೋಸ್ಟ್ ಗಳು ಈಗಲೂ ಇವರ ವಾಲ್ ಮೇಲೆ ಕಾಣಸಿಗುತ್ತವೆ. ಹಾಗಾಗಿ ಇವರ ಬುಕ್ ಹೇಗಿರಬಹುದೆಂಬ ಕುತೂಹಲವಂತೂ ಇತ್ತು. ಅವರ ಪುಸ್ತಕವನ್ನು ಕೈಗೆತ್ತಿಕೊಳ್ಳುವ ಮೊದಲೇ ಇಂಥದೊಂದು ಎಳೆಯ ಮೇಲಿನ ಪುಸ್ತಕವಿರಬಹುದು ಎನ್ನುವ ಆಲೋಚನೆ ಸುಳ್ಳಾಗಲಿಲ್ಲ. ಅವರೇ ಹೇಳುವಂತೆ 'ತೀರಾ ನೂರರಲ್ಲಿ ಮತ್ತೊಂದು' ಎನ್ನುವ ರೀತಿಯ ಪ್ರೇಮಕಥೆ ಇದಲ್ಲ. ಪರಿಸರದ ಬಗೆಗಿನ ಪುಸ್ತಕವಾದರೂ ವಿಜ್ಞಾನದ ವಿಷಯಗಳನ್ನೇನೂ ತುರುಕಿಲ್ಲ. ಊರ ಕಡೆ ಇದ್ದ ಅನುಭವವಿದ್ದರೆ ಅಲ್ಲಿ ನಡೆಯುವ ಘಟನೆಗಳನ್ನೇ ದಿನಚರಿಯಂತೆ ಪೋಣಿಸಿದ್ದಾರೆ. ಹಾಗೆಂದಮಾತ್ರಕ್ಕೆ ಇದೇನೂ ಡೈರಿಯಲ್ಲ. ತೀರಾ ವಿಶೇಷವೆನಿಸದ, ಯಾವುದೇ ನಿಗೂಢ ವಿಷಯಗಳ ರಹಿತವಾಗಿ ಸುತ್ತ ಮುತ್ತ ನಡೆಯುವ ಘಟನೆಗಳನ್ನೇ ಹೀರೊ ಆಗಿಸಿ, ಯಾವುದೇ ಉತ್ಪ್ರೇಕ್ಷೆಗಳ ಉಪ್ಪು ಖಾರ ಸೇರಿಸದೆ ತಣ್ಣನೆ ನಿರೂಪಿಸುತ್ತಾ ಹೋಗಿದ್ದಾರಷ್ಟೇ. ಹಾಗೆ ನೋಡಿದರೆ ಈ ಕಥೆಗೆ ಅಂತ್ಯವಿಲ್ಲ. ದಿನನಿತ್ಯ ನಡೆಯುವ ಘಟನೆಗಳನ್ನು ಅಲ್ಲಿಯೇ ಇದ್ದು, ನೋಡಿ ಅನುಭವಿಸಿದವರಿಗೆ "ಅರೆ... ಇಲ್ಲಿ ಹೀಗೆಯೇ ಅಲ್ವಾ" ಎನಿಸಿದರೆ, ಅಲ್ಲಿನ ಅನುಭವಗಳೇ ಇಲ್ಲದವರಿಗೆ ಅದೊಂದು ಮಾಂತ್ರಿಕ ಲೋಕದಂತೆ ಭಾಸವಾಗಬಹುದೇನೋ. ಕೆಲವೊಮ್ಮೆ ಇವರ ಮಾತಿನ ಲಹರಿ ನಾಸ್ತಿಕರಂತೆ ಎನಿಸಿದರೂ ಕಥೆಯ ನಿರೂಪಣೆಯ ಮಧ್ಯೆ ಸುಳಿಯುವ ದೈವದ ಮತ್ತು ದರ್ಶನದ ವಿಷಯಗಳ ಬಗ್ಗೆ ದಾಖಲಿಸುವಾಗ ತಮ್ಮ ನಿಲುವನ್ನು ಹಚ್ಚದೇ ನಿರ್ಲಿಪ್ತವಾಗಿ ಹೇಳುವುದು ನಿಜಕ್ಕೂ ಒಳ್ಳೆಯ ಆಯ್ಕೆ! ಅವರ ಜೊತೆ ಇದ್ದ ಪಾತ್ರಗಳು ಗೊತ್ತಿಲ್ಲದೇ ಹತ್ತಿರಾಗುತ್ತಾ ಹೋಗುತ್ತವೆ, ಆಪ್ತವಾಗುತ್ತವೆ ಎನ್ನುವಲ್ಲಿಗೆ ಈ ಪುಸ್ತಕ ಗೆದ್ದಿದೆ. ಅಭಿನಂದನೆಗಳು! ನಿಮ್ಮಿಂದ ಇನ್ನಷ್ಟು ಉತ್ತಮ ಪುಸ್ತಕಗಳ ರಚನೆಯಾಗಲಿ. ಇಂಥಾ ಪುಸ್ತಕಗಳು ಈಗಿನ ಪೀಳಿಗೆಗಳಿಗೆ ತಲುಪಿ ಅವರಿಗೂ ಇಷ್ಟು ಸಂವೇದನೆ ಸಿದ್ಧಿಸಿದರೆ ಅದೊಂದು ಅದ್ಭುತ ಗೆಲುವಾಗಿ ಉಳಿಯುತ್ತದೆ, ಮತ್ತು ಹಾಗಾಗಲಿ ಎನ್ನುವ ಆಶಯ ನನ್ನದು. ಊರ ಬಗ್ಗೆ, ಅಲ್ಲಿನ ಭಾಷೆ ಗೊತ್ತಿಲ್ಲದವರಿಗೆ ಈ ಪುಸ್ತಕದಲ್ಲಿನ ವಿಶೇಷ ಪದಗಳಿಗೆ ಅರ್ಥವನ್ನು ಪುಟದ ಕೊನೆಯಲ್ಲೋ, ಪುಸ್ತಕದ ಕೊನೆಯಲ್ಲೋ ಕೊಟ್ಟಿದ್ದಿದ್ದರೆ ಸುಲಭವಾಗುತ್ತಿತ್ತು ಎನ್ನುವ ಸಣ್ಣ ತಕರಾರು 🙂

Customer Reviews

Reviews

There are no reviews yet.

Be the first to review “ಈಗಲ್ಸ್ ಲೈನ್”

Your email address will not be published. Required fields are marked *