ರಾಜೇಶ್ ಕುಮಾರ್ ಕಲ್ಯಾ

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಕಲ್ಯಾ ಎಂಬ ಪುಟ್ಟ ಹಳ್ಳಿ ರಾಜೇಶ್ ಅವರ ಹುಟ್ಟೂರು. ಪ್ರಕೃತಿಯ ಜೊತೆಯಲ್ಲಿ
ಬೆಳೆದ ಇವರಿಗೆ ಪರಿಸರವೆಂದರೆ ಇನ್ನಿಲ್ಲದ ಪ್ರೀತಿ. ಪರಿಸರದ ಕುರಿತು ಮುಗಿಯದ ಅಧ್ಯಯನದ ಆಸಕ್ತಿ. ವೃತ್ತಿಯಲ್ಲಿ
ಇಂಜಿನಿಯರ್ ಆದ ರಾಜೇಶ್, ವೃತ್ತಿಯ ಪರಿಧಿ ಮೀರಿದ ಓದು ಬರವಣಿಗೆಯ ಸಾಂಗತ್ಯವನ್ನು ಅಂಟಿಸಿಕೊಂಡವರು.
ವಿಜ್ಞಾನ, ಜೀವನ, ಪರಿಸರ, ಪ್ರವಾಸ, ಸಮಾಜವನ್ನು ವೈಚಾರಿಕ ಚಿಂತನೆಗೆ ಪ್ರೇರೇಪಿಸುವ ಇವರ ಹಲವಾರು
ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹಿರಿಯ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಬರಹಗಳೆಂದರೆ
ಎಂದೂ ಮುಗಿಯದ ಹುಚ್ಚು ಪ್ರೀತಿ. “ಈಗಲ್ಸ್ ಲೈನ್” ಇವರ ಚೊಚ್ಚಲ ಕೃತಿ.