ಭಾನುಮತಿಯ ಪರಿವಾರ

 119

Secure Payments

Your payments are 100% secure

Pan India Shipping

Delivery between 2-8 Days

Return Policy

No returns accepted. Please refer our full policy

Book Details

Weight .3 kg
Author
Page Nos
ISBN
Publications

SYNOPSIS

” ಭಾನುಮತಿಯ ಪರಿವಾರ” ಎಂಬುದು ಹಿಂದಿ ನಾಣ್ಣುಡಿ “ಭಾನುಮತೀ ಕಾ ಕುನ್ ಬಾ”ದ ಕನ್ನಡ ಅನುವಾದ. ಇದರ ಪೂರ್ಣ ಪಾಠ – ಕಹೀಂ ಕಿ ಈಂಠ್, ಕಹೀಂ ಕಾ ರೋಡಾ, ಭಾನುಮತಿ ನೆ ಕುನ್ ಬಾ ಜೋಡಾ . ವಿಲೋಮ ಗುಣವುಳ್ಳ ವಸ್ತುಗಳ ಜೋಡಣೆಯ ಕುರಿತು ವಿವರಿಸಲು ಈ ನಾಣ್ಣುಡಿ ಬಳಕೆಯಾಗುತ್ತದೆ. .ಹಾಗಾದರೆ ಭಾನುಮತಿಯ ಪರಿವಾರ ಹೇಗಿತ್ತು.?
ಓದಿ ನೋಡಿ ಕುಮಾರಸ್ವಾಮಿ ತೆಕ್ಕುಂಜ ಅವರ “ಭಾನುಮತಿಯ ಪರಿವಾರ” ಕಾದಂಬರಿ

ABOUT AUTHOR

ಇಂಜಿನಿಯರಿoಗ್ ಪದವೀಧರರಾದ ಕುಮಾರಸ್ವಾಮಿ ತೆಕ್ಕುಂಜ ಅವರ ಹುಟ್ಟೂರು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರಂಬೂರು. ಹಾಸನದ ಮಲೆನಾಡು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಇಂಜಿನಿಯರಿoಗ್ ಪದವಿ ಪಡೆದ ಬಳಿಕ ಮುಂಬಯಿಯ ಫಿಯಟ್ ಆಟೊಮೊಬಾಯಿಲ್ಸ್ ಸಂಸ್ಥೆಯಲ್ಲಿ ಸುಮಾರು ಹದಿನೈದು ವರ್ಷ ಸೇವೆ ಸಲ್ಲಿಸಿ, ನಂತರ ನಾಸಿಕದ ಮಹೀಂದ್ರ ಅಂಡ್ ಮಹೀಂದ್ರ ಸಂಸ್ಥೆಯಲ್ಲಿ ಐದು ವರ್ಷ, ಬೆಂಗಳೂರಿನ ಜನರಲ್ ಮೋಟರ‍್ಸ್ ಟೆಕ್ನಿಕಲ್ ಸೆಂಟರ್‌ನಲ್ಲಿ ಹತ್ತು ವರ್ಷ    Read More...

Opinion of Others

  1. Anantharaja Gowda Putturu

    Anantharaja Gowda PutturuAuthor

    "ಭಾನುಮತಿಯ ಪರಿವಾರ" ಬಹಳ ಆಸ್ತೆಯಿಂದ ಓದಿದೆ. ಸಂಪೂರ್ಣ ಮಹಾಭಾರತವನ್ನೆ ಬಿಚ್ಚಿಟ್ಟಿರುವಿರಿ. ಕಾದಂಬರಿಯಲ್ಲಿ ಬರುವ ಪ್ರತಿಯೊಬ್ಬರ ವ್ಯಕ್ತಿತ್ವವನ್ನು ಎಳೆಎಳೆಯಾಗಿ ನಿಮ್ಮ ಅನುಭವವನ್ನು ಧಾರೆಯೆರೆದು ವಿಶ್ಲೇಷಣಾತ್ಮಕವಾಗಿ ವಿವರಿಸಿರುವಿರಿ. "ಮಹಾಭಾರತ" ವು ನಿಜವಾಗಿ ನಡೆದಿರುವ ಚಾರಿತ್ರಿಕ ಕಥಾವಸ್ತು ಎಂದು ನಂಬಿರುವ ಭಾರತೀಯರಲ್ಲಿ ನಾನೂ ಒಬ್ಬ. ಧನ್ಯವಾದ 🙏🙏🙏

  2. Parvati Aithal

    Parvati AithalSenior Translator

    ಪ್ರಿಯ ಕುಮಾರಸ್ವಾಮಿ ಅವರೆ, ನಿಮ್ಮ '#ಭಾನುಮತಿಯ_ಪರಿವಾರ' ಕಾದಂಬರಿಯನ್ನು ಓದಿದೆ.‌ ಮೊದಲೇ ಗೊತ್ತಿರುವ ಕಥೆಯಾದರೂ ನಿಮ್ಮ ಸುಂದರ ಕಥನ ಶೈಲಿಯಿಂದಾಗಿ ಕಾದಂಬರಿ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ. ಭಾನುಮತಿಯ ಕುರಿತು ಇದುವರೆಗೆ ಯಾರೂ ಬರೆದಿಲ್ಲವಾದ್ದರಿಂದ ಆಕೆಯ ಬಗ್ಗೆ ಅಧ್ಯಯನ ಮಾಡಿ ಬರೆದೆ ಅಂದಿದ್ದೀರಿ. ಹಾಗೇ ಮಹಾಭಾರತದ ಬಗ್ಗೆ ಇದುವರೆಗೆ ಬಂದಿರುವ ಎಲ್ಲ ಮಹತ್ವದ ಕೃತಿಗಳನ್ನು ಸಾಕಷ್ಟು ಓದಿಕೊಂಡು ನಿಮ್ಮದೇ ಆದ ರಚನಾ ತಂತ್ರ ಹಾಗೂ ಚೌಕಟ್ಟುಗಳನ್ನು ಹಾಕಿ ಇದನ್ನು ಬರೆದಿದ್ದೀರಿ. ಭಾನುಮತಿ ಮಾತ್ರವಲ್ಲದೆ ಕರ್ಣನ ಪತ್ನಿ ವೃಷಾಲಿ, ದುರ್ಯೋಧನ ಮತ್ತು ಶ್ರೀಕೃಷ್ಣರನ್ನೂ ನಿರೂಪಕರಾಗಿ ತೆಗೆದುಕೊಂಡಿದ್ದು ಬಹಳ ಒಳ್ಳೆಯದಾಯಿತು. ಭಾನುಮತಿ ಯ ವ್ಯಕ್ತಿತ್ವವನ್ನು ಆಕೆಯ ಆರ್ದ್ರ ಭಾವನೆಗಳು, ತಲ್ಲಣ-ತಾಕಲಾಟಗಳು, ಹತಾಶೆಗಳು, ಚಿಂತನೆಗಳು, ಮೌನ ಪ್ರತಿಭಟನೆಗಳು, ಆಂತರಿಕ ಸಂಘರ್ಷಗಳ ಮೂಲಕ ಮಾತ್ರವಲ್ಲದೆ ಆಕೆಯನ್ನು ಹತ್ತಿರದಿಂದ ಗಮನಿಸಿದ ಇತರರ ಮೂಲಕವೂ ತೆರೆದಿಟ್ಟಿದ್ದರಿಂದ ಅವಳ ಸಮಗ್ರ ವ್ಯಕ್ತಿತ್ವದ ಮೇಲೆ ಬೆಳಕು ಚೆಲ್ಲಬೇಕೆಂಬ ನಿಮ್ಮ ಉದ್ದೇಶ ಸಫಲವಾಗಿದೆ. ಒಂದು ಒಳ್ಳೆಯ ಕಾದಂಬರಿಯನ್ನು ಕನ್ನಡಕ್ಕೆ ನೀಡಿದ್ದೀರಿ. ಅಭಿನಂದನೆಗಳು.

  3. Subraya Chokkadi

    Subraya ChokkadiRenowned Poet

    ಪ್ರಿಯ ಕುಮಾರಸ್ವಾಮಿಯವರೇ, ನಮಸ್ಕಾರ. ನಿಮ್ಮ ಕಾದಂಬರಿ "#ಭಾನುಮತಿಯ_ಪರಿವಾರ"ವನ್ನು ಇದೀಗ ಓದಿ ಮುಗಿಸಿದೆ. ಭಾನುಮತಿ ಎಂದ ಕೂಡಲೇ ನನಗೆ ನೆನಪಾಗುವುದು ಪಂಪನ ಅಪೂರ್ವ ಪ್ರತಿಭಾ ಸೃಷ್ಟಿಯಾದ ಭಾನುಮತಿಯ ನೆತ್ತ ಪ್ರಕರಣ.ಮೂಲ ಭಾರತದಲ್ಲಿಲ್ಲದ ಈ ಪ್ರಕರಣವನ್ನು ಹೇಳುವ "ನೆತ್ತಮನಾಡಿ ಭಾನುಮತಿ ಸೋಲ್ತೊಡೆ..." ಪದ್ಯ ದಲ್ಲಿನ ಅರ್ಥ ಸಂದಿಗ್ದತೆಯು ನಮ್ಮ ವಿದ್ವತ್ ಲೋಕವನ್ನು ಭಾರೀ ಜಿಜ್ಞಾಸೆಗೊಳಪಡಿಸುವಂತೆ ಮಾಡಿದೆ.ಬಹಳ ಹಿಂದಿನಿಂದ ಇಂದಿನ ವರೆಗೂ ಎನ್ನುವಂತೆ ಅನೇಕ ವಿದ್ವಾಂಸರು ಈ ಪದ್ಯದ ಬಗ್ಗೆ ಚರ್ಚಿಸಿದ್ದಾರೆ.ಪುಸ್ತಕ ,ಲೇಖನಗಳನ್ನು ಪ್ರಕಟಿಸಿದ್ದಾರೆ.ಒಂದು ಪದ್ಯದ ಬಗ್ಗೆ ಇಷ್ಟೊಂದು ಚರ್ಚೆ ನಡೆದ ಸಂದರ್ಭಗಳು ತೀರಾ ಕಡಿಮೆ. ಮಹಾಭಾರತದಲ್ಲಿ ಅಷ್ಟೊಂದು ಮುಖ್ಯವಾಗಿ ಕಾಣಿಸದ ಈ ದುರ್ಯೋಧನನ ಪತ್ನಿ ಭಾನುಮತಿಯನ್ನು ಕೇಂದ್ರವಾಗಿಸಿಕೊಂಡು ನೀವು ಈ ಕಾದಂಬರಿಯನ್ನು ಬರೆದಿದ್ದೀರಿ .ಒಬ್ಬ ವ್ಯಕ್ತಿಯ ವ್ಯಕ್ತಿತ್ವನ್ನು ಪೂರ್ತಿಯಾಗಿ ಹೀಗೆಂದು ಹೇಳಲಾಗದು.ಈ ಅಂಶದ ಹಿನ್ನೆಲೆಯಲ್ಲಿ ಭಾನುಮತಿಯ ಬಗ್ಗೆ ಸ್ವತಃ ಭಾನುಮತಿ, ಕರ್ಣನ ಪತ್ನಿ ವೃಷಾಲಿ, ದುರ್ಯೋಧನ,ಗಾಂಧಾರಿ,ಕೃಷ್ಣ .. ಹೀಗೆ ಬೇರೆ ಬೇರೆ ಪಾತ್ರಗಳ ಮೂಲಕ ಭಾನುಮತಿಯ ವ್ಯಕ್ತಿತ್ವಕ್ಕೊಂದು ಸ್ಪಷ್ಟ ರೂಪವನ್ನುಕೊಡುವ, ಅವಳ ವ್ಯಕ್ತಿತ್ವದ ಅನೇಕ ಮುಖಗಳನ್ನು ಹಿಡಿದಿಡುವ ಪ್ರಯತ್ನವನ್ನು ನೀವು ಈ ಕೃತಿಯಲ್ಲಿ ಮಾಡಿರುವುದು ಗಮನಾರ್ಹ.ಇದು ಈ ತಂತ್ರದ ಶಕ್ತಿ.ಇದು ಈ ಕೃತಿಯ ಶಕ್ತಿಹೇಗೋ ಹಾಗೆ ಮಿತಿಯೂ ಹೌದು.ಮಿತಿ ಏನೆಂದರೆ ಎಷ್ಟೋ ವಿಚಾರಗಳು ಕಥೆಯಿಂದ ಅನಿವಾರ್ಯವಾಗಿ ಹೊರಗೇ ಉಳಿದು ಬಿಡುತ್ತವೆ.ಅದು ಬಿಡಿ,.ಒಂದನ್ನು ಪಡಕೊಳ್ಳಬೇಕಾದರೆ ಇನ್ನೊಂದನ್ನು ಬಿಡಬೇಕಾದ ಸಂದರ್ಭವೇ ಅಧಿಕವಲ್ಲವೇ? ಭಾನುಮತಿಯ ವಿವಾಹದ ಸನ್ನಿವೇಶದಿಂದ ಆರಂಭಿಸಿ, ಅವಳ ಕಥೆಯ ಹಿನ್ನೆಲೆಯಲ್ಲೇ ದೃತರಾಷ್ಟ್ರಾದಿಗಳ ವನಗಮನದ ತನಕದ ಇಡಿಯ ಭಾರತದ ಕಥೆಯನ್ನು ಸಂಗ್ರಹವಾಗಿ ಹೇಳಿರುವ ನಿಮ್ಮ ಪ್ರಯತ್ನ ಇಲ್ಲಿ ಯಶಸ್ವಿಯಾಗಿದೆ ಎಂದೇ ಹೇಳಬಹುದು.ಇಲ್ಲೂ ಭಾನುಮತಿಯ ನೆತ್ತದ ಪ್ರಕರಣವನ್ನು ನೀವು ತಂದಿದ್ದೀರಿ.ಆದರೆ ಪಂಪನ ಪದ್ಯದಂತೆ ಇಲ್ಲಿ ಅರ್ಥ ಸಂಧಿಗ್ಧತೆಯೇನೂ ಇರದೆ ಸ್ಪಷ್ಟವಾಗಿದೆ.ಇದಕ್ಕೆ ಆ ಪ್ರಕರಣವನ್ನು ಆಟದ ಒಂದು ಭಾಗವಾದ ಭಾನು ಮತಿಯೇ ಹೇಳಿರುವುದು ಕಾರಣ. ಇಡಿಯ ಕಾದಂಬರೀಯ ಮುಖ್ಯಭಾಗವೆಂದರೆ ಕೊನೆಯ "ಅಂತಿಮ ಗಮ್ಯವನರಸಿ"ಎಂಬ ಅಧ್ಯಾಯ. ಈ ಭಾಗದಲ್ಲಿ ಬರುವ ಕೃಷ್ಣ ಹಾಗೂ ಭಾನುಮತಿಯ ನಡುವಿನ ಮಾತುಕತೆಯು ಭಾನುಮತಿಯ ಹಾಗೂ ಇತರರ ಅನೇಕ ಸಂಶಯಗಳನ್ನು,ನಡವಳಿಕೆಗಳ ಕಾರಣಗಳನ್ನು ಸ್ಪಷ್ಟ ಪಡಿಸುತ್ತದೆ.ಒಂದು ರೀತಿಯಲ್ಲಿ ಈ ಅಧ್ಯಾಯವು ಒಟ್ಟೂ ಕಥೆಯ ಕ್ರೋಢೀಕೃತ ರೂಪ ಎನ್ನಬಹುದು. ಒಟ್ಟಾಗಿ ಹೇಳುವುದಾದರೆ ಒಂದು ಒಳ್ಳೆಯ ಕೃತಿಯನ್ನು ರಚಿಸಿದ್ದೀರಿ.ಓದುವ ಖುಶಿಯನ್ನು ಕೊಟ್ಟಿದ್ದೀರಿ.ಇಷ್ಟವಾಯಿತು ಅಭಿನಂದನೆಗಳು. ನಿಮ್ಮ, ಸುಬ್ರಾಯ ಚೊಕ್ಕಾಡಿ.

Customer Reviews

Reviews

There are no reviews yet.

Be the first to review “ಭಾನುಮತಿಯ ಪರಿವಾರ”

Your email address will not be published. Required fields are marked *