“ಅಮೋಘವರ್ಷ” ಇದೊಂದು ಸಂಶೋಧನಾತ್ಮಕ ಐತಿಹಾಸಿಕ ಕಾದಂಬರಿ. ಒಂಭತ್ತನೆಯ ಶತಮಾನದಲ್ಲಿ ಮಾನ್ಯಖೇಟವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ರಾಷ್ಟ್ರಕೂಟ ದೊರೆ ಅಮೋಘವರ್ಷ ಬಿರುದಾಂಕಿತ ನೃಪತುಂಗ, ಮಗಧದ ಸಾಮ್ರಾಟ ಅಶೋಕನಂತೆ ಶಾಂತಿ ಮಾರ್ಗದಲ್ಲಿಯೇ ವಿಸ್ತಾರವಾದ ರಾಜ್ಯವನ್ನು ಆಳಿದವನು. ಅಶೋಕ ಬೌದ್ಧಧರ್ಮವನ್ನು ಅವಲಂಬಿಸಿದರೆ ನೃಪತುಂಗ ಜೈನಧರ್ಮವನ್ನು ಅವಲಂಬಿಸಿದವನು.