Delivery between 2-8 Days
No returns accepted. Please refer our full policy
Your payments are 100% secure
ಪ್ರಜಾಪ್ರಭುತ್ವ ವ್ಯವಸ್ಥೆಯ ತಾಯಿ ಬೇರಾದ ಪಂಚಾಯತ್ ರಾಜ್ಯ ವ್ಯವಸ್ಥೆಯು ಬಲಗೊಳ್ಳುವುದು ರಾಜ್ಯದ-ದೇಶದ ಪ್ರಮುಖ ರಾಜಕೀಯ ಪಕ್ಷಗಳಿಗೆ ಹಾಗೂ ರಾಜಕಾರಣಿಗಳಿಗೆ ಇಷ್ಟವಿಲ್ಲದ ಸಂಗತಿ. ಹಾಗಂತ ಅದನ್ನು ಕೈ ಬಿಡುವ ಸ್ಥಿತಿಯಲ್ಲಿಯೂ ಇಲ್ಲ. ವಿಕೇಂದ್ರೀಕರಣದ ಆಶಯ ಅದು ಸಾಗುತ್ತಿರುವ ದಾರಿಯನ್ನು ವಿಲ್ಫ್ರೆಡ್ ಅವರು ಈ ಗ್ರಂಥದಲ್ಲಿ ದಾಖಲಿಸಿದ್ದಾರೆ. ಉದ್ಯೋಗ ಖಾತರಿ ಯೋಜನೆ ವೈಫಲ್ಯಕ್ಕೆ ಕಾರಣಗಳನ್ನು ಹುಡುಕುವ ಲೇಖಕರು ಗ್ರಾಮೀಣ ಆಡಳಿತ ವ್ಯವಸ್ಥೆ ದಾರಿ ತಪ್ಪಿದ್ದೆಲ್ಲಿ ಎಂದು ಆತ್ಮಾವಲೋಕನ ಕೂಡ ಮಾಡಿಕೊಳ್ಳುತ್ತಾರೆ. ಸೋಲು-ಗೆಲುವು- ಸಾಧ್ಯತೆಗಳನ್ನು ವಿವರಿಸುವ-ದಾಖಲಿಸುವ- ವಿಶ್ಲೇಷಿಸುವ ವಿಧಾನ ಸೊಗಸಾಗಿದೆ. ಭ್ರಷ್ಟಾಚಾರದ ಸಾಂಸ್ಥೀಕರಣ ಬೆಳವಣಿಗೆಯು ಹುಟ್ಟು ಹಾಕಿರುವ ಆತಂಕವನ್ನು ವ್ಯಕ್ತಪಡಿಸುವ ಲೇಖಕರು ಮಹಿಳಾ ಮೀಸಲಾತಿಯ ವೈಫಲ್ಯವನ್ನೂ ಚರ್ಚಿಸದೇ ಇರಲಾರರು. ರಾಜಕಾರಣವು ಗ್ರಾಮೀಣ ಬದುಕಿನಲ್ಲಿ ಉಂಟು ಮಾಡಿರುವ-ಮಾಡುತ್ತಿರುವ ತಲ್ಲಣಗಳ ಬಗ್ಗೆ ದಾಖಲಿಸುವ-ಚರ್ಚಿಸುವ ಪುಸ್ತಕ. ಮಾಹಿತಿಪೂರ್ಣ ಚರ್ಚೆಯನ್ನು ನೀಡುವ ಕೃತಿಯಿದು.
Wilfred DSouza |
0 average based on 0 reviews.