Delivery between 2-8 Days
No returns accepted. Please refer our full policy
Your payments are 100% secure
ಭಾರತೀಯ ಪ್ರಜಾಸತ್ತೆಯ ಸರ್ವಶ್ರೇಷ್ಠ ಇತಿಹಾಸಕಾರ ಎಂದು ‘ಟೈಮ್’ ಸಾಪ್ತಾಹಿಕದ ಪ್ರಶಂಸೆಗೆ ಪಾತ್ರರಾಗಿರುವ ಅಂತರರಾಷ್ಟ್ರೀಯ ಖ್ಯಾತಿಯ ಲೇಖಕ ರಾಮಚಂದ್ರ ಗುಹ ಅವರು ಹತ್ತೊಂಬತ್ತು ಮಂದಿ ನವಭಾರತ ನಿರ್ಮಾಪಕರನ್ನು ಇಲ್ಲಿ ಅನಾವರಣಗೊಳಿಸಿದ್ದಾರೆ. ಇದೊಂದು ವಿಶಿಷ್ಟ ಬಗೆಯ ಗ್ರಂಥ. ಭಾರತ ಗಣರಾಜ್ಯ ರಚನೆ ಮತ್ತು ವಿಕಾಸಕ್ಕೆ ಅನನ್ಯ ಕೊಡುಗೆ ನೀಡಿರುವ ಈ ಮಹನೀಯರನ್ನು ಸ್ಫಟಿಕ ಸದೃಶ ಭಾಷೆಯಲ್ಲಿ ಚಿತ್ರಿಸಿರುವ ಗುಹ ಅವರ ಈ ಲೇಖನಗಳು ಏಕಕಾಲದಲ್ಲಿ ವ್ಯಕ್ತಿ ಚಿತ್ರಗಳೂ ಆಗಿ ದೇಶದ ಸಮಗ್ರ ಚಿತ್ರವೂ ಆಗಿ ನಮ್ಮನ್ನು ಬೆರಗುಗೊಳಿಸುತ್ತವೆ.
ರಾಜಾರಾಮ್ ಮೋಹನ ರಾಯ್, ರವೀಂದ್ರನಾಥ ಠಾಕೂರ್, ಮಹಾತ್ಮ ಗಾಂಧಿ, ರಾಜಾಜಿ, ಅಂಬೇಡ್ಕರ್, ನೆಹರೂರಂತಹ ಅಂತರರಾಷ್ಟ್ರೀಯ ಖ್ಯಾತಿವೇತ್ತರು ತಮ್ಮ ವಿಚಾರಧಾರೆಯ ಸೂರ್ಯೋಜ್ವಲ ಬೆಳಕಿನಲ್ಲಿ ದೇದೀಪ್ಯಮಾನವಾಗಿ ಕಂಗೊಳಿಸಿದ್ದಾರೆ. ಹತ್ತೊಂಬತ್ತನೆಯ ಶತಮಾನದ ಪ್ರಾರಂಭಕ್ಕೇ ಆಧುನಿಕತೆಯನ್ನು ಪರಿಚಯಿಸಿ, ಹಂತಹಂತವಾಗಿ ಸ್ವಾತಂತ್ರ್ಯದ ಗುರಿಮುಟ್ಟಿಸಿದ ಈ ಧೀಮಂತರು ನೀರೆರೆದು ಪೋಷಿಸಿದ ಸ್ವಾತಂತ್ರ್ಯ, ಅಹಿಂಸೆ, ಧಾರ್ಮಿಕ ಸಹಿಷ್ಣುತೆ, ಅಸ್ಪ ಶ್ಯತಾ ನಿರ್ಮೂಲನ, ಸ್ತ್ರೀ ವಿಮೋಚನೆಯಂಥ ಮೌಲ್ಯಗಳು ಪುಟಪುಟದಲ್ಲೂ ಉಜ್ವಲವಾಗಿ ಬೆಳಗುತ್ತ ಜನಮಾನಸದಲ್ಲಿ ವಿಚಾರದ ಕಿಡಿಗಳನ್ನು ಉದ್ದೀಪನ ಗೊಳಿಸುತ್ತವೆ.
ಗುಹ ಅವರು ಬೆಳಗಿಸಿರುವ ಈ ಸಾಲು ದೀಪಗಳಲ್ಲಿ ಚರಿತ್ರೆಯಲ್ಲಿ ಮಸುಕಾಗಿ ಹೋದ ಕೆಲವು ಕುಡಿದೀಪದ ಹಣತೆಗಳೂ ಇವೆ. ಅಂಬೇಡ್ಕರ್ ಪೂರ್ವದ ದಲಿತರ-ರೈತರ ನಾಯಕ ಜ್ಯೋತಿಬಾ ಫುಲೆ, ಈ ದೇಶದ ಪ್ರಪ್ರಥಮ ಸ್ತ್ರೀ ವಿಮೋಚನಾ ಹೋರಾಟಗಾರ್ತಿ ತಾರಾಬಾಯಿ ಶಿಂಧೆ, ಅಪ್ರತಿಮ ಹಿಂದೂ-ಮುಸ್ಲಿಂ ರಾಷ್ಟ್ರಾಭಿಮಾನಿ ಹಮೀದ್ ದಳವಾಯಿ ಅವರುಗಳು ಇಂದು ನಮಗೆ ಅತ್ಯಂತ ಪ್ರಸ್ತುತರಾಗಿ ಗಮನ ಸೆಳೆಯುತ್ತಾರೆ.
G N Ranganathrav |
0 average based on 0 reviews.