ಬಹಳ ಹಿಂದೆ ಪೂರ್ಣಚಂದ್ರ ತೇಜಸ್ವಿಯವರಿಗೊಂದು ಪ್ರಶ್ನೆ ಕೇಳಿದ್ದೆ. “ನೀವು ಮೊದಮೊದಲು ಕಥೆ, ಕಾದಂಬರಿ, ಕಾವ್ಯ, ನಾಟಕ ಇತ್ಯಾದಿಗಳನ್ನು ಬರೆದವರು. ನಿಧಾನವಾಗಿ ಈಗ ನಿಮ್ಮ ಮನಸ್ಥಿತಿ ಬರೀ ಪರಿಸರಕ್ಕಷ್ಟೇ ಸೀಮಿತವಾದಂತಿದೆ. ಏನು ಕಾರಣ?” ಎಂದು. “ಕಾವ್ಯ, ಕಾದಂಬರಿ, ಕಥೆ ಇವೆಲ್ಲ ಮನುಷ್ಯ ತಲೆ, ಸೃಜನಶೀಲತೆಯ ಕೆನೆಪದರ, ತಲೆ ಉಳಿದಾಗ ಮಾತ್ರ ಇವೆಲ್ಲ ಹುಟ್ಟುತ್ತದೆ.
Category: | E-books |
Sub Category: | |
Author: | Narendra Rai Derla |
Publisher: | ವೀರಲೋಕ |
Language: | Kannada |
Number of pages : | |
Publication Year: | |
Weight | |
ISBN | |
Book type | E-book |
Delivery between 2-8 Days
No returns accepted. Please refer our full policy
Your payments are 100% secure
ಆದರೆ ಈಗ ತಲೆಯೂ ಸೇರಿ ಮನುಷ್ಯ ಜೀವಕ್ಕೇ ಅಪಾಯ ಬಂದಂತಿದೆ. ನಾವು ತಿನ್ನುವ ಅನ್ನ, ಸೇವಿಸುವ ಗಾಳಿ, ಕುಡಿಯುವ ನೀರು ಮಲಿನಗೊಂಡಿವೆ. ಅವೆಲ್ಲವನ್ನು ಸರಿಯಾಗಿ ಇಟ್ಟುಕೊಳ್ಳಿ ಎಂದು ಬುದ್ಧಿ ಹೇಳಬೇಕಾದ ಕಾಲದಲ್ಲಿ ನಾವಿದ್ದೇವೆ” ಎಂದ ತೇಜಸ್ವಿಯವರ ಪ್ರಭಾವವೋ ಅಥವಾ ನೆಲ, ಬೇರು, ಮಣ್ಣನ್ನು ದಾಟಿ ಹೋಗುವಂಥ ಬೌದ್ಧಿಕತೆ ಇಲ್ಲದಿರುವುದೋ ನಾನಂತು ನೆಲದಲ್ಲೇ ಉಳಿದೆ. ಬರೆದೆ. ಜನ ಸ್ವೀಕರಿಸಿದರು. ಅಕಾಡೆಮಿ, ವಿಶ್ವವಿದ್ಯಾನಿಲಯಗಳು ಗುರುತಿಸಿದವು. ಹತ್ತಾರು ಲೇಖನಗಳು ಶಾಲಾ ಕಾಲೇಜಿನ ಪಠ್ಯಕ್ಕೆ ಸೇರಿದವು. ಕೃಷಿಕರಲ್ಲದವರು ಓದಿದರು.ನೆಲಮುಖಿಯಾದರು.
ಈ ಕೃತಿ ಮಾರುಕಟ್ಟೆಗೆ ಬಂದ ಮೇಲೆ ‘ಕೃಷಿಯಲ್ಲಿ ಖಂಡಿತಾ ಸುಖವಿಲ್ಲ. ಅದ್ದೆಗೆ ಖುಶಿ?’ ಎಂಬ ಕುಹಕ, ಪ್ರಶ್ನೆಗಳೆಲ್ಲ ಹುಟ್ಟಿಕೊಳ್ಳಬಹುದು. ಹಣದ ದಾರಿ, ಮಾಪನದಲ್ಲಿ ಅಳತೆ ಮಾಡುವವರ ಅಭಿಪ್ರಾಯದಲ್ಲಿ ಅದು ಸರಿಯೇ. ಆದರೆ ಸುಖ ಹಣದಲ್ಲಿಲ್ಲ. ಅದು ಮನಸ್ಸಿನಲ್ಲಿದೆ, ನಾವು ಬದುಕುವ ಪರಿಸರ, ತಿನ್ನುವ ಅನ್ನ, ಕುಡಿಯುವ ನೀರಿನಲ್ಲಿದೆ ಎನ್ನುವವರು ಈ ಕೃತಿಯ ಆಶಯವನ್ನು ಖಂಡಿತಾ ಒಪ್ಪುತ್ತಾರೆ.
Narendra Rai Derla |
0 average based on 0 reviews.