nil
ಪವನ್ ಮೌರ್ಯ ಚಕ್ರವರ್ತಿ ಅವರು ಬರೆದಿರುವ ಆನೆಗಳನ್ನು ಕುರಿತ ' ಆರಂಕುಶವಿಟ್ಟೊಡಂ... ' ಎಂಬ 16 ಲೇಖನಗಳ ಪುಸ್ತಕದಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗಿನ ವ್ಯಾಪ್ತಿಯನ್ನು ಇಟ್ಟುಕೊಂಡು ಅಧ್ಯಯನ ನಡೆಸಿದ್ದಾರೆ. ಇದುವರೆವಿಗೆ ಆನೆಗಳ ಬಗ್ಗೆ ಬಂದಿರುವ ಅನೇಕ ಕೃತಿಗಳನ್ನು ಓದಿ ಕ್ಷೇತ್ರ ಕಾರ್ಯ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ. ಇದರೊಂದಿಗೆ ಸಂದರ್ಶನಗಳ ಮೂಲಕ ಪಡೆದ ಮಾಹಿತಿಯನ್ನು ಬಳಸಿ ಹೆಚ್ಚಿನ ವಿವರಗಳನ್ನು ಆನೆಗಳ ಬಗ್ಗೆ ಹಾಗೂ ಆನೆ ಪಳಗಿಸುವವರ ಬಗ್ಗೆ ಬರೆದಿದ್ದಾರೆ. ಚಕ್ರವರ್ತಿ ಅವರು ಈ ಕೃತಿ ರಚನೆಗಾಗಿ ಸಂಸ್ಕೃತ , ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಆನೆಗಳಿಗೆ ಸಂಬಂಧಿಸಿದಂತೆ ಬರೆದಿರು ಬಂದಿರುವ ಹಲವಾರು ಕೃತಿಗಳನ್ನು ಪರಾಮರ್ಶಿಸಿ ಅತ್ಯಅಮೂಲ್ಯ ಸಂಗತಿಗಳನ್ನು ಹೆಕ್ಕಿತೆಗೆದು ಬಳಸಿಕೊಂಡಿದ್ದಾರೆ. ಇವುಗಳಲ್ಲಿ ದೇಶಿಯವಾಗಿ ಆನೆಗಳನ್ನು ಸಾಕುತ್ತಿದ್ದ ವಿಧಾನ ಅವುಗಳಿಗೆ ಕಾಯಿಲೆಯಾದಾಗ ನೀಡುತ್ತಿದ್ದ ಚಿಕಿತ್ಸಾ ಪದ್ಧತಿಯನ್ನು ವಿವರವಾಗಿ ತಿಳಿಸಿದ್ದಾರೆ. ನಾರಾಯಣ ದೀಕ್ಷಿತ್ ಎಂಬುವವರು ಬರೆದಿರುವ ಗಜಗ್ರಹಣ ಕೃತಿ , ಮಲಯಾಳಂ ಭಾಷೆ ಗಜರಕ್ಷಾತಂತ್ರ , ಪಾಲಕಾಪ್ಯಮುನಿ ವಿರಚಿತ ಗಜಶಾಸ್ತ್ರ ಮುಂತಾದ ಕೃತಿಗಳಿಂದ ಪಾರಂಪರಿಕವಾಗಿ ಆನೆಗಳು ವಾಸಿಸುವ ಸ್ಥಳ , ಬದುಕುವ ರೀತಿ , ಆಮೆಗಳನ್ನು ಹಿಡಿಯುವ ಮತ್ತು ಪಳಗಿಸುವ ವಿಧಾನ ಮೊದಲಾದ ವಿವರಗಳನ್ನು ಈ ಕೃತಿಗಳಲ್ಲಿ ತಿಳಿಸಿದ್ದು , ಈ ಎಲ್ಲಾ ಮಾಹಿತಿಗಳನ್ನು ತಮ್ಮ ಕೃತಿಯಲ್ಲಿ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇದಲ್ಲದೆ ಶಾಸನಗಳಲ್ಲಿ ಆನೆಗಳ ಬಗ್ಗೆ ಬಂದಿರುವ ವರ್ಣನೆ , ಯುದ್ಧಗಳಲ್ಲಿ ಅವುಗಳ ವರ್ತನೆಯ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ..... ಆನೆಗಳನ್ನು ಕುರಿತಂತೆ ಕೆಲವು ಡಾಕ್ಯುಮೆಂಟರಿಗಳು ಬಂದಿದ್ದು , ಅವುಗಳ ನಿಗೂಢ ಬದುಕನ್ನು ಜಗತ್ತಿಗೆ ತೆರೆದಿಟ್ಟಿವೆ . ಲೇಖಕರು ಬಹು ಸೂಕ್ಷ್ಮಜೀವಿ ಹಾಗೂ ಸ್ನೇಹಜೀವಿಯಾದ ಆನೆಗಳ ಬಗ್ಗೆ ಅನೇಕ ವಿವರಗಳನ್ನು ಒಂದಡೆ ತಂದು ಈ ಪುಸ್ತಕ ರೂಪದಲ್ಲಿ ನೀಡಿದ್ದಾರೆ. ಇದರೊಂದಿಗೆ ಆನೆಗಳೊಂದಿಗೆ ತಮ್ಮ ಜೀವನವನ್ನು ಕಳೆಯುತ್ತಿರುವ ಬಂಡಿಪುರ , ಮದುಮಲೈ , ನೀಲಗಿರಿಬೆಟ್ಟ ಪ್ರದೇಶ , ಬಿಳಿಗಿರಿರಂಗನ ಬೆಟ್ಟ , ಮಲೈ ಮಹದೇಶ್ವರ ಬೆಟ್ಟ ಮೊದಲಾದ ಕಡೆಗಳಲ್ಲಿ ವಾಸಿಸುವ ಜೇನು ಕುರುಬ , ಬೆಟ್ಟ ಕುರುಬ ಮೊದಲಾದ ಕಾಡಿನ ಮಕ್ಕಳು ಹಾಗೂ ಅವರ ಮತ್ತು ಆನೆಗಳ ನಡುವಿನ ಸಂಬಂಧಗಳ ಬಗ್ಗೆ ಅವರೊಡನೆ ಸಂದರ್ಶನ ಮಾಡಿ ವಿಷಯವನ್ನು ಸಂಗ್ರಹಿಸಿದ್ದಾರೆ. ಹೀಗೆ ಅಪರೂಪದ ವಿಷಯಗಳನ್ನು ತೆಗೆದುಕೊಂಡು ನಾನಾ ಆಯಾಮಗಳಲ್ಲಿ ಆನೆಗಳ ಬಗ್ಗೆ ವಿವರ ನೀಡಿ ಪುಸ್ತಕ ರಚಿಸಿರುವ ಪವನ್ ಮೌರ್ಯ ಚಕ್ರವರ್ತಿ ಅವರು ಅಭಿನಂದನಾರ್ಹರು.
#
ಈ ಸಂಪುಟದಲ್ಲಿ ಬಿ. ಎಂ. ಶ್ರೀಕಂಠಯ್ಯ ನವರಿಂದ ಹಿಡಿದು ಹೊಸ ತಲೆಮಾರಿನ ವರೆಗೂ ಹಲವು ಮಂದಿ ಸಾಹಿತಿಗಳು ಎಲ್.ಎಸ್. ಶೇಷಗಿರಿ ರಾವ್ ಅವರ ಹಲವು ಮುಖಗಳನ್ನು ಪರಿಚಯಿಸಿದ್ದಾರೆ. ಅವರ ಸಾಹಿತ್ಯ ಸೇವೆಯ ಹಲವು ಮಗ್ಗುಲುಗಳ ವಿಮರ್ಶೆಗಳಿವೆ. ಅವರೊಂದಿಗೆ ಒಡನಾಡಿದ ಸಾಹಿತ್ಯಕ ಮತ್ತು ಸಾಹಿತ್ಯೇತರ ವ್ಯಕ್ತಿಗಳ ಆತ್ಮೀಯ ನೆನಪುಗಳಿದೆ. ಅವರು ಸಾಹಿತ್ಯಕವಾಗಿ ಕ್ರಿಯಾಶೀಲರಾಗಿದ್ದ ಅವಧಿಯಲ್ಲಿ ನಡೆಸಲಾಗಿದ್ದ ಹಲವು ಸಂದರ್ಶನಗಳ ಅಮೂಲ್ಯ ಸಂಗ್ರಹವಿದೆ. ಓದುಗರಿಗೆ ವಿವರಗಳನ್ನು, ಸಿದ್ದಿ-ಸಾಧನೆಗಳನ್ನು ಸಮಗ್ರವಾಗಿ ಪರಿಚಯ ಮಾಡಿಕೊಡಬಲ್ಲ ಈ ಸಂಪುಟವು ಸಾಹಿತ್ಯಾಸಕ್ತರಿಗಂತೂ ಸಂಗ್ರಹಯೋಗ್ಯವಾದ ಕೃತಿಯಾಗಿದೆ.
ಸೋಲನ್ನು ಸೋಲಿಸಿ ಗೆಲ್ಲುವವರಿಗಾಗಿ... ಕನ್ನಡದ ಖ್ಯಾತ ಅಂಕಣಕಾರರು ಹಾಗು ಖ್ಯಾತ ವಾಗ್ಮಿಗಳು ಆಗಿರುವ ರಾಜೇಂದ್ರ ಭಟ್ ಕೆ ಅವರು ಬರೆದಿರುವ ಸ್ಫೂರ್ತಿದಾಯಕ ಅಂಕಣ ಬರಹಗಳಲ್ಲಿ ಆಯ್ದ ಕೆಲವು ಲೇಖನಗಳು ಈ ಪುಸ್ತಕದಲ್ಲಿವೆ. ಅವರ ಲೇಖನಗಳಲ್ಲಿ ಹೆಚ್ಚು ಸ್ಫೂರ್ತಿ ಮತ್ತು ಪ್ರೇರಣೆಗಳು ಇರುತ್ತವೆ ಎಂದು ಓದುಗರು ಈಗಾಗಲೇ ತುಂಬು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಐದು ವರ್ಷಗಳಿಂದ ಒಂದು ದಿನವೂ ಬಿಡದೆ ಇಂತಹ ಅಂಕಣಗಳನ್ನು ಬರೆಯುವುದು ಸವಾಲಿನ ಕೆಲಸ. ಏಕತಾನತೆ ಬಾರದ ಹಾಗೆ ನೋಡಿಕೊಳ್ಳುವುದು. ಪ್ರತೀ ನಿತ್ಯವೂ ಹೊಸ ವೈವಿಧ್ಯಗಳಿಗೆ ತೆರೆದುಕೊಳ್ಳುವುದು ಸುಲಭವಲ್ಲ. ಅವರಿಗೆ ಸಾಹಿತ್ಯ, ಸಂಸ್ಕೃತಿ, ಶಿಕ್ಷಣ, ಗಣಿತ, ಸಂಗೀತ, ಕಲೆ, ಕ್ರಿಕೆಟ್, ಕ್ರೀಡೆ, ಸಿನೆಮಾ, ಆಧ್ಯಾತ್ಮ, ಸಂಶೋಧನೆ, ವಿಜ್ಞಾನ, ತಂತ್ರಜ್ಞಾನ ಎಲ್ಲ ವಿಭಾಗಗಳಲ್ಲಿಯೂ ಆಸಕ್ತಿ ಮತ್ತು ಅಧ್ಯಯನಗಳು ಇರುವ ಕಾರಣ ಈ ಸರಣಿ ಬರವಣಿಗೆಯು ಅವರಿಗೆ ಸಾಧ್ಯವಾಗಿದೆ. ಅವರು ಲೇಖನದಲ್ಲಿ ಇರುವ ಭಾವನಾತ್ಮಕ ಮತ್ತು ಸೃಜನಾತ್ಮಕ ಸಾಲುಗಳು ನಿಮ್ಮನ್ನು ಪುಸ್ತಕ ಕೆಳಗಿಡಲು ಬಿಡದೆ ಸರಾಗವಾಗಿ ಓದಿಸಿಕೊಂಡು ಹೋಗುವುದು. ಬಹು ಬೇಡಿಕೆಯ ಭಾಷಣಕಾರರು ಮತ್ತು ವಿಕಸನ ತರಬೇತುದಾರರೂ ಆಗಿರುವ ರಾಜೇಂದ್ರ ಭಟ್ಟರ ದಶಕಗಳ ಓದು ಮತ್ತು ಅನುಭವ ಇಲ್ಲಿ ಹೆಪ್ಪುಗಟ್ಟಿ ಗೆಲುವಿನ 'ರಾಜಪಥ'ವನ್ನೇ ನಿರ್ಮಿಸಿದೆ. ಲೆಜೆಂಡ್ ವ್ಯಕ್ತಿಗಳ ಬದುಕಿನಲ್ಲಿ ನಡೆದ ಸ್ಫೂರ್ತಿದಾಯಕವಾದ ಅಂಶಗಳು, ಅವರ ಬದುಕಲ್ಲಿ ಮೂಡಿದ್ದ ಮಹತ್ವದ ತಿರುವುಗಳು, ಗೆಲುವಿಗೆ ಕಾರಣವಾದ ಅಂಶಗಳು, ಬದುಕಿನಲ್ಲಿ ಸೋಲುಗಳನ್ನು ಅವರು ಗೆದ್ದ ರೀತಿ, ಅವರಿಗೆ ದೊರೆತ ಉಡ್ಡಯನ ವೇದಿಕೆಗಳು, ಸಾಧಕರ ಬದ್ದತೆ... ಇವೆಲ್ಲವೂ ನಮಗೆ ಲೇಖಕರ ಸುಂದರ ಬರವಣಿಗೆಯ ಮೂಲಕ ಕಣ್ಣಿಗೆ ಕಟ್ಟುತ್ತವೆ. ಆಡಂಬರ ಉಪಮೆಗಳ ಗೊಡವೆಯಿಲ್ಲದೆ ಸುಲಭವಾಗಿ ಓದಿಸಿಕೊಂಡು ಹೋಗುವ ಶಕ್ತಿಯು ಈ ಲೇಖನಗಳಿಗಿವೆ. ರಾಜಪಥವು ರಾಜೇಂದ್ರ ಭಟ್ಟರ ಟ್ರೆಂಡ್ ಸೆಟ್ಟಿಂಗ್ ಅಂಕಣ ಲೇಖನಗಳಿಂದ ಸಿಂಗಾರವಾಗಿದೆ. ಎಡೆಬಿಡದೆ ಪ್ರತಿನಿತ್ಯವೂ ಅಂಕಣ ಬರಹಗಳ, ಸ್ಫೂರ್ತಿ ಮಾತುಗಳ ಮೂಲಕ ಗೆಲುವಿನ ರಹದಾರಿಯನ್ನೇ ನಿರ್ಮಿಸಿಕೊಡುವ ಶ್ರೀಯುತರ ಸಾಹಿತ್ಯ ಸೇವೆ ಹೀಗೆ ನಿರಂತರವಾಗಿ ಸಾಗಲಿ....
Showing 1 to 30 of 54 results