| Category: | ಕನ್ನಡ |
| Sub Category: | ಕಾದಂಬರಿ |
| Author: | ಗುರುನಾಥ ಅಕ್ಕಣ್ಣ | Gurunatha Akkanna |
| Publisher: | ವೀರಲೋಕ | Veeraloka |
| Language: | Kannada |
| Number of pages : | 264 |
| Publication Year: | 2025 |
| Weight | 300 |
| ISBN | 978-93-48355-14-0 |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ದೂರದಲ್ಲೆಲ್ಲೋ ಆಗುವ ಕೊಲೆಗಳು, ಅತ್ಯಾಚಾರಗಳು, ಅಪಹರಣಗಳು ನಮ್ಮ ದೈನಂದಿನ ಸುದ್ದಿಯ ಭಾಗಗಳಾದರೆ ನಮ್ಮ ನೈತಿಕ ಮೌಲ್ಯವನ್ನು ಕಟ್ಟಿ ಎಲ್ಲಿ ಎಸೆದಿದ್ದೇವೆ ಎಂಬ ಪ್ರಶ್ನೆಯನ್ನು ಕಾದಂಬರಿಕಾರರು ಕೂರಂಬುವಿನಂತೆ ನಮ್ಮತ್ತ ಎಸೆಯುತ್ತಲೇ ಹೋಗುತ್ತಾರೆ. ಮರ್ಯಾದೆಗೇಡು ಹತ್ಯೆಯನ್ನೂ ಸೂಕ್ಷ್ಮವಾಗಿ ಕಥಾ ಹಂದರದಲ್ಲಿ ತರುವ ಜಾಗ್ಗೆ, ವೆಬ್ ಸಿರೀನ್ಗಳಿಂದ ಜನ ಮರುಳಾಗುವ ವೈಚಿತ್ರ ಎಲ್ಲವನ್ನೂ ಒಂದು ಚೌಕಟ್ಟಿನೊಳಗೆ ತರುತ್ತ ಹೋಗುತ್ತಾರೆ. ಕಥೆಯ ಅಂತ್ಯದ ಸುಳಿವು ಎಲ್ಲಿಯೂ ಬಿಟ್ಟುಕೊಡದೇ, ಭೂತದ ಸುಳಿಗಳಲ್ಲಿ ಓದುಗ ಕಳೆದುಹೋಗುವಂತೆ ಮಾಡುತ್ತದೆ.
ಒಂದು ಅತ್ಯಾಚಾರಕ್ಕೆ ವಿದ್ಯಾರ್ಥಿಗಳ ಪ್ರತಿಭಟನೆ, ಅದರ ಲಾಭ ಪಡೆಯುವ ವ್ಯವಸ್ಥೆ, ಮೊಲೀಸ್ ವ್ಯವಸ್ಥೆಯ ಮೈಗಳ್ಳತನ, ಜನರ ಒಳಿತಿಗಾಗಿ ಇರುವ ಮರ ಮಾನ್ಯಗಳು ದೂರ ಸರಿಯುವ ದುರಂತ, ಇವೆಲ್ಲವೂ ಕತೆಯಲ್ಲಿ ಹಣೆಯಲಾಗಿದೆ. ಓಹೋ. ನನಗೀ ಪ್ರಕರಣ ಗೊತ್ತು ಎಂದೆನಿಸುವಾಗಲೇ ಇನ್ನೊಂದು ಪ್ರಕರಣದತ್ತ ಕತೆ ಮಗ್ಗಲು ಹೊರಳಿಸಿರುತ್ತದೆ. ಕಾದಂಬರಿಕಾರರು ಹೇಳಿರುವಂತೆ ಇದು ಕಾಲ್ಪನಿಕ ಕಣೆ ಯಾವ ಪಾತ್ರಗಳನ್ನೂ ಹೋಲುವುದಿಲ್ಲ ಹೋಲಿಕೆ ಇದ್ದರೆ ಅದು ಕಾಕತಾಳಿಯ ಎಂದೆನಿಸಿದರೂ, ಇದು ಇದೇ ಪ್ರಕರಣ ಎಂಬುದು ಪ್ರತಿ ಓದುಗನಿಗೂ ನಿಚ್ಚಳವಾಗುತ್ತ ಹೋಗುತ್ತದೆ.
ಒಂದು ಓದು ಸದಾ ನಮ್ಮಲ್ಲಿ ಭರವಸೆಯನ್ನು ಮೂಡಿಸಬೇಕು. ಬದುಕಿನ ಸಾಕ್ಷಾತ್ಕಾರವಾಗಿಸಬೇಕು. ಏನೂ ಆಗದಿದ್ದರೆ ನಮ್ಮೊಳಗಿನ ಸಮಾಧಾನವನ್ನು ಕಲಕಿ, ಸರಿ ತಪ್ಪಗಳ ನವನೀತ ಬರುವಂಧ ಸಂಘರ್ಷಕ್ಕೆ ದೂಡಬೇಕು. ಇದು ಅಂಥ ಸಂಘರ್ಷಕ್ಕೆ ದೂಡುತ್ತದೆ.
ಸಹ ಸಂಪಾದಕರು, ಸುಧಾ ವಾರ ಪತ್ರಿಕೆ, ಬೆಂಗಳೂರು.
ಶ್ರೀಮತಿ ರಶ್ಮಿ ಎಸ್.
ಗುರುನಾಥ ಅಕ್ಕಣ್ಣ | Gurunatha Akkanna |
0 average based on 0 reviews.