nil
ಬೇರೆಯವರಿಗೆ ಕತೆ ಹೇಳುವ, ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ. ಕತೆಗಳಿರುವವರೆಗೂ ಮನುಷ್ಯನಿರುತ್ತಾನೆ. ಈಗ ಸ್ಮಾರ್ಟ್ ಯುಗ. ಎಲ್ಲರ ಕೈಯಲ್ಲೊಂದು ಸ್ಮಾರ್ಟ್ ಫೋನು. ಎಲ್ಲರ ಎದೆಯೊಳಗೆ ಕತೆಗಳಿರುವ ಕಾಲ. ಇಂತಹ ಕತೆಗಳನ್ನು ಸಶಕ್ತವಾಗಿ ದಾಟಿಸುವ ಮಾಧ್ಯಮ ದೃಶ್ಯಮಾಧ್ಯಮ. ಬನ್ನಿ ನಿಮ್ಮೊಳಗಿನ ಕತೆಗಳನ್ನು ದೃಶ್ಯಮಾಧ್ಯಮಕ್ಕೆ ತರೋಣ, ಲೆಟ್ಸ್ ಮೇಕ್ ಎ ಶಾರ್ಟ್ ಫಿಲಂ!
ಬೇರೆಯವರಿಗೆ ಕತೆ ಹೇಳುವ,ಬೇರೆಯವರ ಕತೆ ಕೇಳಿಸಿಕೊಳ್ಳುವ ಕಲೆ ಸಿದ್ಧಿದಿಸಿಕೊಂಡಿರುವ ಏಕೈಕ ಪ್ರಾಣಿ ಮನುಷ್ಯ.
#
ಸೋತವರಿಗೆ, ಗೆಲುವನ್ನು ಎದುರು ನೋಡುವವರಿಗೆ, ಸಮಾನ ಮನಸ್ಕರಿಗೆ ಉಡುಗೊರೆಯಾಗಿ ನೀಡಲು ಈ ಕೃತಿ ಬೆಸ್ಟ್ ಆಯ್ಕೆ. ನಮ್ಮ ಬದುಕು ಹುಟ್ಟಿನಿಂದಲೇ ಶುರುವಾಗಬಹುದು. ಆದರೆ ಸೋಲು-ಗೆಲುವುಗಳು ನಿರ್ಧಾರವಾಗುವುದು ನಮ್ಮ ಆಲೋಚನೆಗಳ ಮೇಲೆಯೇ.. ಆಲೋಚನೆಗಳು ಇಲ್ಲದೆ ಬದುಕಿಲ್ಲ! ಬದುಕಿನ 360 ಕೋನದಲ್ಲೂ ಯೋಚಿಸುವಂತಹ ಶಕ್ತಿಯನ್ನು ನಾವು ಗಳಿಸದಿದ್ದರೆ ಖಂಡಿತ ಸ್ಪರ್ಧೆಯ ಸಾಲಿನಿಂದ ತುಂಬಾ ಹಿಂದೆ ಉಳಿದುಬಿಡುತ್ತೇವೆ. ಇವತ್ತು ಯಾರಿಗೂ ಹಿಂದೆ ಉಳಿಯಲು ಇಷ್ಟವಿಲ್ಲವಾದ್ದರಿಂದ ಆಲೋಚನಾಕ್ರಮದ ಬಗ್ಗೆ ಈ ಕೃತಿ ನಿಮಗೆ, ನಿಮ್ಮ ಗೊಂದಲಗಳಿಗೆ ಉತ್ತರಿಸುತ್ತಲೇ ನಿಮ್ಮ ಯಶಸ್ಸಿನ ದಾರಿಗೆ ನೆರವಾಗಬಲ್ಲದು..
ರವೀಂದ್ರ ವೆಂಶಿಯವರ ಲೈಫ್ ಸಖತಾಗಿತ್ತು ಕಣ್ರೀ ಪುಸ್ತಕದಲ್ಲಿನ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯದ ಹಲವಾರು ಘಟನೆಗಳು ನೆನಪಾದದ್ದು ಸತ್ಯ. ಓದುವಾಗ ನನಗೆ ಇದು ಕಥೆಯಾ..? ಆತ್ಮಚರಿತ್ರೆಯಾ..? ಸುಲಲಿತ ಪ್ರಬಂಧವಾ..? ಎನ್ನುವ ಪ್ರಶ್ನೆ ಕಾಡುತ್ತಲೇ ಓದಿಸಿಕೊಂಡಿತು. ಓದಿಯಾದ ಮೇಲೆ ನನಗನ್ನಿಸಿದ್ದು ಇದು ಎಲ್ಲವೂ ಹೌದು ಎಂದು. ಭಾಗ-1ರಲ್ಲಿನ ಬರಹಗಳಲ್ಲಿ ತಿಳಿ ಹಾಸ್ಯದ ಮೂಲಕ ಘಟನೆಗಳನ್ನು ಕಟ್ಟಿಕೊಡುತ್ತಾ ನಿಧಾನಕ್ಕೆ ನಮ್ಮನ್ನು ಬರಹದೊಳಕ್ಕೆ ಸೆಳೆದುಕೊಂಡು ಬಿಡುತ್ತಾರೆ ಲೇಖಕರು. ಇಸ್ತ್ರೀಪೆಟ್ಟಿಗೆಯ ಪ್ರಸಂಗ, ಹೇರ್ ಕಟ್ ಸುತ್ತಲಿನ ವೃತ್ತಾಂತಗಳು, ಸಿನಿಮಾಗಳನ್ನು ಟೆಂಟ್ ನಲ್ಲಿ ನೋಡುವ ಸೊಬಗು - ಇವುಗಳನ್ನು ಲಘುಹಾಸ್ಯಮಯವಾಗಿ ಬರೆಯುತ್ತಾ, ಕಲಿಸಿದ್ದು ಕಲಿತದ್ದು ಲೇಖನದ ಮೂಲಕ ಚಿಂತನೆಗೆ ದೂಡುತ್ತಾರೆ. ಭಾಗ-2 ರಲ್ಲಿ ಕತೆಗಳ ಸ್ವರೂಪದಲ್ಲಿ ಬದುಕನ್ನು ತೆರೆದಿಡುತ್ತಾರೆ. ಒಂದೊಂದು ಕತೆಯೂ ಬೇರೆ ಬೇರೆಯದೇ ಆದ ದ್ರವ್ಯ, ನಿರೂಪಣೆ ಮತ್ತು ಭಾಷೆಯನ್ನು ಹೊಂದಿರುವುದು ರವೀಂದ್ರ ವೆಂಶಿಯವರ ವಿಶೇಷವೆನಿಸುವ ವಸ್ತುಗ್ರಹಿಕೆ ಮತ್ತು ಕತೆಯ ಕಟ್ಟುವಿಕೆಗೆ ಹಿಡಿದ ಕೈಗನ್ನಡಿ ಎನ್ನಬಹುದು. ಸರಳವಾದ, ಅರ್ಥಪೂರ್ಣವಾದ, ನಮ್ಮದೇ ಬದುಕಿನ ಸನ್ನಿವೇಶಗಳು ಎನ್ನುವ ಆತ್ಮೀಯತೆ ಬೆಳೆಸುವ ಬರವಣಿಗೆಯ ಈ ಹೊತ್ತಗೆ ಪ್ರತಿಯೊಬ್ಬರೂ ಓದಲೇಬೇಕಾದದ್ದಾಗಿದೆ.
'ಲೋಕ ರಾವಣ' ಲಂಕಾಧಿಪತಿಯಾದ ದಶಕಂಠ ರಾವಣನನ್ನು ಕುರಿತ ಕಾದಂಬರಿ. ಲೋಕ ಲೋಕಗಳನ್ನು ನಡುಗಿಸಿದ. ಪರಸ್ತ್ರೀ ಅಪಹಾರಕನಾದ ದುಷ್ಟನೆಂದು ರಾಮಾಯಣದಲ್ಲಿ ಚಿತ್ರಣಗೊಂಡಿರುವ ಪಾತ್ರ ಅದು. ಹುಟ್ಟಿನಿಂದ ಮಹಾ ತಪಸ್ವಿಯಾದ ವಿಶ್ರವಸ್ಸಿನ ಮಗ, ವೇದಾದಿಗಳನ್ನು ಓದಿದವನು. ಬ್ರಹ್ಮ, ಪರಮೇಶ್ವರರ ಅನುಗ್ರಹಕ್ಕೆ ಪಾತ್ರನಾದವನು. ಶಿವಭಕ್ತ. ಇಷ್ಟಿದ್ದೂ ರಾವಣನಂತಹ ಮೇಧಾವಿ ಯಾಕೆ ದುಷ್ಟನಾದ? ಲೋಕಪೀಡಕನಾದ ಅದಕ್ಕೆ ಕಾರಣವಾದುದು ಅವನ ಹುಟ್ಟಿ? ಸಂಸ್ಕಾರವೆ? ಅವನಿಗಾದ ಕಹಿ ಅನುಭವಗಳೆ? ಅಥವಾ ಅವನ ವ್ಯಕ್ತಿತ್ವವೇ ಆ ರೀತಿಯೆ? ಅವನ ಅಂತರಂಗವನ್ನು ಪ್ರವೇಶಿಸದೆ ಉತ್ತರ ದೊರೆಯಲಾರದು. ರಾವಣನ ಅಂತರಂಗವನ್ನು ಬಗೆಯುವ ಅಂತಹ ಒಂದು ಪ್ರಯತ್ನವೇ ಈ ಕಾದಂಬರಿ.. 'ಲೋಕ ರಾವಣ'
ಡಾ. ಮಹಾಬಲೇಶ್ವರ ರಾವ್
Showing 4111 to 4140 of 5279 results