• ಯಾವುದೇ ಕನ್ನಡ ಪುಸ್ತಕಕ್ಕಾಗಿ ಸಂಪರ್ಕಿಸಿ    
  • Call Us : +91 7022122121 / +91 8861212172
  • Free shipping above ₹499    
back

Publishers

Categories

Sub Categories

Authors

Languages

Book Type

Clear All
Filter
ನಾವು ಮೂರ್ಖ ಮಾನವರಲ್ಲವೇ? | NAAVU MOORKHA MAANAVARALLAVE?

ಆ ಕ್ಷಣದ ಸತ್ಯಗಳಿವು. ಥಟ್ಟನೆ ಹೊಳೆದದ್ದನ್ನು ಹೊಳಪಾಗಿಸಲು ಹೋಗದೇ ಹೊಳೆದಂತೆ ಬರೆದಂಥ ಟಿಪ್ಪಣಿಗಳು. ಇಲ್ಲಿ ದಿನನಿತ್ಯದ ಸಂಭ್ರಮ, ಉಲ್ಲಾಸ, ದುಗುಡ, ಆತಂಕ, ಉಪದೇಶ, ಪ್ರಶ್ನೆ, ಬೆರಗು ಎಲ್ಲವೂ ಇದೆ. ಪಳಗಿದ ಲೇಖಕನ ಕೈಗೆ ಸಿಕ್ಕರೆ ಈ ಟಿಪ್ಪಣಿಗಳು ಕತೆಯೋ ಕವಿತೆಯೋ ಆಗುತ್ತದ್ದಿವು. ಸಾವು, ಬದುಕು, ವೇದಾಂತ, ತಮಾಷೆ, ಏಕಾಂತ, ವಿಷಾದ-ಎಲ್ಲವನ್ನೂ ವಿನಯ್‌ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ದಾಖಲಿಸಿದ್ದಾರೆ. ಬದುಕಿಗೆ ಭಾಷ್ಯ ಬರೆಯುವ ಆಸೆ ನಮ್ಮೆಲ್ಲರಿಗೂ ಇರುತ್ತದೆ. ಬದುಕನ್ನು ಹಿಡಿಯುವುದಕ್ಕೆ ಸುದೀರ್ಘ ಬರಹ ಬೇಕೇ ಅಥವಾ ಪುಟ್ಟ ಪುಟ್ಟ ಪ್ರಸಂಗಗಳಲ್ಲಿ ದಿನನಿತ್ಯದ ತವಕ ತಲ್ಲಣಗಳನ್ನು ಹಿಡಿದಿಡಬಹುದೇ ಎಂಬ ಉತ್ತರವಿಲ್ಲದ ಪ್ರಶ್ನೆಯನ್ನು ಮುಂದಿಟ್ಟುಕೊಂಡೇ ಈ ಬರಹಗಳನ್ನು ಓದಬೇಕು. ನನಗೆ ಇಷ್ಟವಾದದ್ದು ವಿನಯ್‌ ಅವರ ಬರಹದ ವಿಸ್ತಾರ ಮತ್ತು ವಿನಯ. ಅವರದು ಉಪದೇಶದ ಧಾಟಿ ಅಲ್ಲ, ಅರಿತುಕೊಳ್ಳುವ ಹಾದಿ. ತನಗೆ ಅನ್ನಿಸದ್ದಿನ್ನು ಓದುಗರ ಮುಂದಿಟ್ಟು ವಿಧೇಯ ವಿದ್ಯಾರ್ಥಿಯಂತೆ ಕೈ ಕಟ್ಟಿ ನಿಲ್ಲುವ ಅವರ ಸಜ್ಜನಿಕೆ ಮತ್ತು ಸರಳತೆ ಈ ಬರಹಗಳಲ್ಲೂ ಕಾಣಿಸುತ್ತದೆ. ಇವು ನಿಮ್ಮಲ್ಲೂ ಅನೇಕ ನೆನಪುಗಳನ್ನು ಉಕ್ಕಿಸಬಹುದು. ನಿಮ್ಮನ್ನೂ ಆಲೋಚನೆಗೆ ಹಚ್ಚಬಹುದು. ಎಲ್ಲಕ್ಕಿಂತ ಮುಖ್ಯವಾಗಿ ನಮ್ಮ ವಿಚಿತ್ರವಾದ ನಡವಳಿಕೆಗಳನ್ನು ಮತ್ತೊಮ್ಮೆ ನೋಡಿಕೊಂಡು ತಮಾಷೆ ಮಾಡಿಕೊಳ್ಳುವ ಸದ್ಗುಣವನ್ನು ಕರುಣಿಸಬಹುದು. ಅಷ್ಟರ ಮಟ್ಟಿಗೆ ಇವು ಸಾರ್ಥಕ. -ಜೋಗಿ

₹180   ₹160

ನೀರನಡೆ|Neranade

nil

₹130   ₹116

ನೂರಕ್ಕೆ ನೂರು ಕಲಿಕೆ ಮತ್ತು ಅಂಕ ಗಳಿಕೆ | Noorakke nooru Kalike mattu Anka Galike

ಇದೊಂದು ವಿನೂತನವಾದ ಶೈಕ್ಷಣಿಕ ಮನೋವಿಜ್ಞಾನದ ಗ್ರಂಥ. ಇದರ ಪುಟಪುಟಗಳಲ್ಲೂ ವಿದ್ಯಾರ್ಥಿಗಳಿಗೆ ಅವಶ್ಯವಿರುವ ವಿಪುಲ ಮನೋವೈಜ್ಞಾನಿಕ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಈ ಗ್ರಂಥದ ಪರಿವಿಡಿಯ ಮೇಲೆ ಒಮ್ಮೆ ಕಣ್ಣಾಡಿಸಿದರೆ ಸಾಕು, ಅಲ್ಲಿಯ ಶೀರ್ಷಿಕೆಗಳು ವಿದ್ಯಾರ್ಥಿಗಳ ಮನಸ್ಸನ್ನು ಸೆರೆಹಿಡಿಯುತ್ತವೆ. ಶಿಕ್ಷಣದ ಜೀವಾಳವಾಗಿರುವ ವಾಚನ, ವ್ಯಾಸಂಗ, ಮನನ ಮುಂತಾದವುಗಳ ಸ್ವರೂಪದ ಕುರಿತು ಸಂಕ್ಷಿಪ್ತವಾದರೂ ಮನಮುಟ್ಟುವಂತೆ ವಿವರಿಸಿದ್ದಾರೆ. ಒಟ್ಟು ಶಿಕ್ಷಣದ ಪ್ರಕ್ರಿಯೆಗಳಾದ ಕಲಿಕೆಗೆ ಪ್ರೇರಣೆ, ಏಕಾಗ್ರತೆಯ ಸಂವರ್ಧನೆ, ಸಮಯದ ನಿರ್ವಹಣೆ, ಓದಿನ ವೇಗವನ್ನು ಹೆಚ್ಚಿಸಿಕೊಳ್ಳುವುದು, ಸುಂದರವಾಗಿ ಬರೆಯುವುದು, ನೂರಕ್ಕೆ ನೂರು ಅಂಕ ಗಳಿಕೆಯ ಅಭಿಲಾಷೆಯಿಂದ ಮುನ್ನಡೆಯುವುದು, ಪರೀಕ್ಷೆಯ ಬಗೆಗಿನ ಭಯಭೀತಿಗಳನ್ನು ಧೈರ್ಯದಿಂದ ಎದುರುಗೊಂಡು ನಿರ್ವಹಿಸುವುದು- ಹೀಗೆ ವಿದ್ಯಾರ್ಥಿಗಳಿಗೆ ಸೂಕ್ತ ಹಾಗೂ ವಾಸ್ತವಿಕ ಮಾರ್ಗದರ್ಶನ ಮಾಡಬಲ್ಲ ಸಂಗತಿಗಳನ್ನು ಬಹು ಸರಳವಾಗಿ ಮತ್ತು ಸ್ಪಷ್ಟವಾಗಿ ಮಂಡಿಸಿದ್ದಾರೆ.

₹85   ₹76

ನೆಟ್ ನೋಟ/Net Nota

nil

₹160   ₹142

ಪದಸಾಗರ | Padasagara

nil

₹150   ₹134

ಪ್ರಜ್ಞಾ ಸೂರ್ಯ | Pragna Surya

"ನಾನು ಬಡತನದಲ್ಲಿ ಹುಟ್ಟಿ ಬಡತನದಲ್ಲಿ ಬಡವರ ಜತೆ ಬೆಳೆದೆ. ಥಂಡಿ ನೆಲದಲ್ಲಿ ಗೋಣಿ ತಾಟಿನ ಮೇಲೆ ಬಡವರು ಮಲಗುವ ಹಾಗೆ ನಾನೂ ಥಂಡಿ ನೆಲದಲ್ಲಿ ಮಲಗಿದೆ; ಅವರ ದುಃಖದಲ್ಲಿ ಭಾಗಿಯಾದೆ. ನನ್ನ ಸೋದರರ ಬಗೆಗಿನ ಮತ್ತು ಜಗದ ಬಗೆಗಿನ ನನ್ನ ಧೋರಣೆಗಳು ಎಂದಿಗೂ ಬದಲಾಗುವುದಿಲ್ಲ. ನಾನು ಹುಟ್ಟಿ ಬೆಳೆದ ವರ್ಗ ಅನುಭವಿಸಿದ ಅಮಾನವೀಯ ಕ್ರೌರ್ಯ ಮತ್ತು ಅನ್ಯಾಯವನ್ನು ತೊಡೆದುಹಾಕಲು ವಿಫಲನಾದಲ್ಲಿ ಗುಂಡಿಟ್ಟುಕೊಂಡು ಸಾಯುವೆ. ನಾನು ನನ್ನ ಸಮುದಾಯವನ್ನು ಯಾವತ್ತೂ ಬಿಟ್ಟುಕೊಟ್ಟಿಲ್ಲ. ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಿದ್ದೇನೆ. ಇದೇ ನೀವು ನನ್ನ ಬದುಕಿನಿಂದ ಕಲಿಯುವ ಪಾಠ. ನನ್ನ ಬದುಕು ನಿಮಗೆಲ್ಲರಿಗೂ ತೆರೆದ ಪುಸ್ತಕ." ಡಾ. ಬಿ. ಆರ್. ಅಂಬೇಡ್ಕ‌ರ್

₹220   ₹196