| Category: | ಕನ್ನಡ |
| Sub Category: | ಕವನಗಳು |
| Author: | ಸ್ಮಿತಾ ಬಲ್ಲಾಳ್ | Smitha Ballal |
| Publisher: | ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ | Panchami Media Pub. |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸ್ಮಿತಾ ಬಲ್ಲಾಳರಿಗೆ ಕವಿತೆ ಬರೆಯುವ ಲಯ ಸಿದ್ಧಿಸಿದೆ. ಪದಲಾಲಿತ್ಯದ ಸೊಗಸು ಅವರ ಕವಿತೆಗಳನ್ನು ಓದುವಾಗ ಅನುಭವಕ್ಕೆ ಸಿಗುತ್ತದೆ. ನಡೆಯುವ ದಾರಿಯ ನಡುವೆ ಪಕ್ಕನೇ ಎದುರಾಗುವ ಅನಿರೀಕ್ಷಿತ ತಿರುವು ಹೇಗೆ ಪ್ರಯಾಣಕ್ಕೆ ಒಂದು ಸೊಬಗನ್ನು ಕೊಟ್ಟು ಮತ್ತೆ ಮತ್ತೆ ಅಂತಹ ದಾರಿಯಲ್ಲಿ ಸಾಗಲು ನೆಪಗಳನ್ನು ಕೊಡುತ್ತದೆಯೋ ಅಂತಹ ಒಂದು ಅಚ್ಚರಿ ಕವಿತೆಯ ಸಾಲುಗಳ ನಡುವೆ ಧುತ್ತನೇ ಎದುರಾದರೆ ಕಾವ್ಯ ಓದುವ ಸುಖ ನಮಗೂ ದಕ್ಕುತ್ತದೆ. ಅಂತಹ ಒಂದು ಅಚ್ಚರಿ ಒಂದು ಧ್ವನಿ ಕಾವ್ಯದಲ್ಲಿ ತರುವುದು ಹೇಗೆ? ಇದು ನಿರಂತರ ಹುಡುಕಾಟದ ಫಲ. ಕಂಡದ್ದು ಉಂಡದ್ದು ಅನಿಸಿದ್ದು ಕನಸಿದ್ದು ಮೂಡಿ ಮೈಗೂಡಿದ್ದು ಮೊಳಗಿ ತೊಳಗುವ ತನಕ ಕೈಬಾಯ್ದೆ ಬರುವ ತನಕ ಕಾಯಲೇ ಬೇಕು. ಅದು ಅಡಿಗರು ಹೇಳಿದ ಹಾಗೆ ಚಿತ್ತ ಹುತ್ತಗಟ್ಟುವ ಪ್ರಕ್ರಿಯೆ. ನಿರಂತರ ಓದು, ಬದುಕಿನ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಕಾಣುವ ನಿರಂತರವಾದ ಬೆರಗಿನ ಕಣ್ಣು ಮತ್ತು ಮೊಳಕೆಯೊಡೆಯಲು ತಕ್ಕ ಮಣ್ಣಿನ ತೇವಕ್ಕಾಗಿ ಬೀಜ ಕಾಯುವ ಹಾಗೆ ಕಾಯುವ ಸಂಯಮದಿಂದ ಇದು ಸಾಧ್ಯವಾಗುತ್ತದೆ. ಗಂಗಾಧರ ಚಿತ್ತಾಲರು ಹೇಳುವ ಹಾಗೆ, ಬೇಕು ಒಳಹೊರಗ ಕೇಂದ್ರದಲ್ಲಿ ಹಿಡಿಯುವ ಕಣ್ಣು: ಇಡಿಯಾಗಿ ಬದುಕನೀಕ್ಷಿಸುವ ನೋಟ! ಸದಾ ಕಾವ್ಯವನ್ನು ಧ್ಯಾನಿಸುವ ಸ್ಮಿತಾ ಬಲ್ಲಾಳರಿಗೆ ಇದು ಖಂಡಿತವಾಗಿಯೂ ಸಾಧ್ಯವಾಗುವ ಮಾತು. ಅಂತಹ ಕಾವ್ಯದ ಕಸುಬುದಾರಿಕೆ ದಕ್ಕುವ ಮಾರ್ಗದಲ್ಲಿಯೇ ಅವರು ಸಾಗುತ್ತಿದ್ದಾರೆ.
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು
ಸ್ಮಿತಾ ಬಲ್ಲಾಳ್ | Smitha Ballal |
0 average based on 0 reviews.