| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಸ್ಮಿತಾ ಬಲ್ಲಾಳ್ | Smitha Ballal |
| Publisher: | ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್ | Panchami Media Pub. |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಈ ಸಂಕಲನದಲ್ಲಿನ ಹದಿಮೂರು ಕಥೆಗಳ ಸೃಷ್ಟಿಕರ್ತೆ ಸ್ಮಿತಾ ಬಲ್ಲಾಳರ ಕಥೆ ಬರೆಯುವ ಕ್ರಿಯೆಯೂ ಅವರ ಮನದಾಳದ ಭಾವನೆಗಳ ಪ್ರತಿಬಿಂಬವೇ.
ಪ್ರತಿಯೊಂದು ಕಥೆಯೂ ಸ್ಮಿತಾರವರ ಹೃದಯದಿಂದ ಹೊರಹೊಮ್ಮಿದ ನಿಷ್ಠುರ ಅನುಭವಗಳ ಅಕ್ಷಯಪಾತ್ರೆ. ಶಿವರಾಮ ಕಾರಂತರು ಅಭಿಪ್ರಾಯಿಸಿದಂತೆ, ಕಥೆ ಅಂದರೆ ಬದುಕಿನ ಸತ್ಯವನ್ನು ಕಲ್ಪನೆಯ ಕನ್ನಡಿ ಮೂಲಕ ತೋರಿಸುವ ಪ್ರಯತ್ನ : ಸ್ಮಿತಾರವರ ಹದಿಮೂರು ಕಥೆಗಳಲ್ಲಿ -ಒಂದು ಕಿರು ಕಥೆಯನ್ನೂ ಸೇರಿಸಿ, ಅದೇ ತಳಹದಿಯಲ್ಲಿ ಬೆಳೆಯುತ್ತಾ ಓದುಗರಲ್ಲಿ ಕುತೂಹಲವನ್ನು ಕೆರಳಿಸುತ್ತವೆ.
ಪ್ರಥಮ ಕಥಾ ಸಂಕಲನದ ಮೂಲಕ ಸ್ಮಿತಾ ಬಲ್ಲಾಳರು, ತಮ್ಮ ಬದುಕಿನ ಅನೇಕ ಸವಾಲುಗಳ ನಡುವೆ ತಮ್ಮದೇ ಆದ ಒಂದು ಸಂವೇದನಾ ಕೋಣೆ ಕಟ್ಟಿಕೊಂಡು ಬರವಣಿಗೆಯ ಲೋಕವನ್ನು ಸೃಷ್ಟಿಸಿದ್ದಾರೆ. ಅವರ ಹೆಗ್ಗಳಿಕೆ ಅಂದರೆ ಪ್ರತಿಯೊಂದೂ ಕಥೆಯ ಅಂತ್ಯದಲ್ಲಿ ಒಂದು ಅಚ್ಚರಿಯ ತಿರುವನ್ನು ಉಳಿಸಿಕೊಂಡಿರೋದು. ಸ್ಮಿತಾ ಬಲ್ಲಾಳರ ಕಥೆಗಳಲ್ಲಿ ವಿನಾಕಾರಣ 'ಥಾಟ್ ಪ್ರವೋಕಿಂಗ್ ಉಪಾಯಗಳ ಭಾರವಿಲ್ಲ. ಭಾಷೆಯ ಸೌಂದರ್ಯಾತ್ಮಕತೆಯ (ವೈಭವೀಕರಣ) ಭಾರದಿಂದ ಮುಲುಗುವ ಬೃಹತ್ ಗ್ರಂಥಗಳ ಜಾಲವಿಲ್ಲ. ಸರಳ ಮತ್ತು ಸರಳ, ಎಲ್ಲ ಸಾಹಿತ್ಯ ಪ್ರೇಮಿಗಳು ತಪ್ಪದೇ ಓದಬಹುದಾದ ಕಥೆಗಳ ಗುಚ್ಛ ಇಲ್ಲಿದೆ.
ಸ್ಮಿತಾ ಬಲ್ಲಾಳ್ | Smitha Ballal |
0 average based on 0 reviews.