ತೀರ ಸಾಮಾನ್ಯರನ್ನು ಕುರಿತ ಕತೆಗಳಿವು, ನಿಜ. ಆದರೆ ಈ ಸಾಮಾನ್ಯರ ಕನಸುಗಳು, ನಿರಾಶಾದಾಯಕವಾಗಿದ್ದರೂ ಅವರ ದೈನಿಕದ ಸ್ಥಿತಿಗತಿಗಳನ್ನು ಮರೆಮಾಚುವುದಿಲ್ಲ.
‘ ಪ್ರೀತಿ ‘ ಇದು ಎರಡೇ ಅಕ್ಷರದ ಒಂದು ಚಿಕ್ಕ ಪದವಾದರೂ ಎಲ್ಲಾ ಜೀವ ಚೇತನದಲ್ಲೂ ಸುಪ್ತವಾಗಿರುವ ಒಂದು ಅಪೂರ್ವ ಅನಂತ ಅನುಭೂತಿ. ಅದರಲ್ಲೂ ಮಾನವನಲ್ಲಿ ಹದಿ ಹರೆಯ ಅರಳುವ ಕಾಲಘಟ್ಟದಲ್ಲಿ ಪರಸ್ಪರ ಆಕರ್ಷಣೆಯ ರೆಕ್ಕೆ ಕಟ್ಟಿಕೊಂಡೇ ಹ್ರದಯಕ್ಕೆ ಲಗ್ಗೆ ಇಡುತ್ತದೆ. ಆಗ ಅದುಯಾವ ಪ್ರತಿಬಂಧಕ್ಕೂ ಒಳ ಪಡುವುದು ಕಷ್ಟ.
ತೃತೀಯ ಅಂಗಿಗಳ ಒಳತೋಟಿ, ಹಣ್ಣಿನ ಬೇಗುದಿ, ಎಳೆಮನದ ತೊಳಲಾಟ, ಮನೋವೈದ್ಯಕೀಯ ಒಳನೋಟ…
ಉತ್ತರ ಪರ್ವ”ದಲ್ಲಿ ಆಯ್ಕೆಯಾದ ಅನುವಾದಿತ ಕಥೆಗಳ ಈ ಸಂಕಲನ ಒಂದು ತಾಜಾ ಅನುಭೂತಿಯನ್ನು ಎದುರು ನೋಡುತ್ತಿರುವ ಅಕ್ಷರಮೋಹಿಗಳ ಜೋಳಿಗೆಗೆ ಮುಡಿಪಾಗಿಟ್ಟ ಹೋಳಿಗೆ.
ನಮ್ಮ ಕಾಲದ ತಲ್ಲಣಗಳಿಗೆ ಮತ್ತು ಸ್ಥಿತ್ಯಂತರಗಳಿಗೆ ಮಾತು ಕೊಡಲಿಕ್ಕೆ ಕಥೆ ಹೇಳಿಮಾಡಿಸಿದ ಪ್ರಕಾರ. ಇದರ ಸಾಧ್ಯತೆಗಳನ್ನು ಕಾಲದಿಂದ ಕಾಲಕ್ಕೆ ಎಲ್ಲ ಕಥೆಗಾರರೂ ಹುಡುಕುತ್ತಲೇ ಬಂದಿದ್ದಾರೆ. ಕಥೆ ಬರೆಯುವ ಜರೂರತ್ತು ಏನಿದೆ ಎನ್ನುವುದನ್ನು ಪುನರ್ ಸ್ಥಾಪಿಸುತ್ತಲೂ ಇದ್ದಾರೆ - ಇದು ಬರಿಯ ಒಳಗಿನ ತಳಮಳವಲ್ಲ ಒಂದು ಸಾಮಾಜಿಕ ಜವಾಬ್ದಾರಿ ಎನ್ನುವಂತೆ. ಸಾಮಾಜಿಕ ಜಾಲತಾಣಗಳು ಬರೆಯುವ ತೀವ್ರತೆಯನ್ನು ಹೆಚ್ಚಿಸುತ್ತಿರುವ ಹಾಗೆಯೇ ಬರವಣಿಗೆಯಲ್ಲಿ ಕಾವು ಕೂರುವ ತಾಳ್ಮೆಯನ್ನು ಕಳೆಯುತ್ತಿವೆ. ತಕ್ಷಣದ ಪ್ರತಿಕ್ರಿಯೆಗಳಿಗೆ ಮನಸೋತಾಗ ಆಳಕ್ಕಿಳಿದ, ಸಾಂದ್ರವಾಗುವ ಕಥನಗಳು ಹುಟ್ಟುವುದು ಕಷ್ಟವಾಗುತ್ತದೆ. ಇಂಥದ್ದರ ನಡುವೆ ಕಥೆಗಾರರು ತಮಗೆ ಬೇಕಾದ ಅವಕಾಶವನ್ನು ಅಲ್ಲಲ್ಲಿ ಹುಡುಕುತ್ತಾ ತಮ್ಮದನ್ನಾಗಿಸಿಕೊಳ್ಳುವತ್ತ ತುಡಿಯುತ್ತಲೇ ಇದ್ದಾರೆ.
ಹಗ್ಗದ ಮೇಲೆ ನಡೆಯುವಂತಹ ಏಕಾಗ್ರತೆಯಿಂದ ಗಮ್ಯದತ್ತ ಸಾಗುವ ಇಲ್ಲಿನ ಕಥೆಗಳಲ್ಲಿ ನಗರ ಜೀವನದ ಸಂಕೀರ್ಣತೆಯೂ ಇದೆ: ಹಳ್ಳಿಗಳ ಮುಗ್ಧ ಬದುಕಿನ ಸರಳತೆಯೂ ಇದೆ. ಅಜಿತ್ ಆರಿಸಿಕೊಂಡಿರುವ ಕಥಾವಸ್ತುಗಳು ಯಾವುದೇ ಒಂದು ಪ್ರದೇಶಕ್ಕೆ, ವರ್ಗಕ್ಕೆ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಎಲ್ಲರನ್ನೂ ಒಳಗಿಳಿಸಿಕೊಂಡು ಪಾತ್ರಗಳೊಂದಿಗೆ ಬೆಸೆಯುತ್ತವೆ.
ಕಥಾಸಂಕ್ರಾಂತಿ2024 ಕಥಾಸಂಕಲನದಲ್ಲಿ ಮೂರು ಬಹುಮಾನಿತ ಕಥೆಗಳು ಹಾಗೂ ಏಳು ಮೆಚ್ಚುಗೆ ಪಡೆದ ಕಥೆಗಳು ಇವೆ. ಇಲ್ಲಿನ ಪ್ರತಿ ಕಥೆಯೂ ವಿಶಿಷ್ಟ, ವಿಭಿನ್ನ, ಪ್ರಯೋಗಶೀಲತೆ, ಭಾಷಾ ಬಳಕೆ, ಕಥಾವಸ್ತುವಿನ ಆಯ್ಕೆಯಲ್ಲಿ ತೋರಿರುವ ವೈವಿಧ್ಯತೆ, ಕಥಾವಿನ್ಯಾಸ, ನಿರೂಪಣಾ ಕುಶಲತೆ ಹೀಗೆ ಎಲ್ಲದರಲ್ಲಿಯೂ ಈ ಕಥೆಗಳು ತಟ್ಟನೆ ಗಮನ ಸೆಳೆಯುತ್ತವೆ. ಸಮಕಾಲೀನ ವಿಷಯ, ಗ್ರಾಮೀಣ ಸಮಾಜದ ಬದುಕಿನಲ್ಲಿ ಇಣುಕುವ ಚಲನಶೀಲತೆ, ಮನುಷ್ಯರ ಸಂಕಟಗಳು, ಸಂದಿಗ್ಧತೆಗೆ ಸಿಲುಕಿಸುವ ಪ್ರೇಮ, ಬದುಕಿನ ಹೋರಾಟದಲ್ಲಿ ಗೆಲುವು ಸಾಧಿಸಲು ಕಂಡುಕೊಳ್ಳುವ ಹೊಸ ದಾರಿಗಳು, ಮುಗ್ಧ ಬಾಲಕಿಯರು ಎದುರಿಸಬೇಕಾದ ತಲ್ಲಣಗಳು, ಭಾಷೆಯೊಂದಿಗೆ ಬದುಕುವ ವ್ಯಕ್ತಿ ವ್ಯಕ್ತಿತ್ವವನ್ನು ಕಳೆದುಕೊಳ್ಳುವ ಬಗೆ... ಈ ಕಥೆಗಳಲ್ಲಿ ಅಡಕವಾಗಿವೆ. ಕಥಾಸ್ಪರ್ಧೆಗೆ ಬಂದ ನೂರಾರು ಕಥೆಗಳನ್ನು ಹಲವು ವಿಧದಲ್ಲಿ ಜರಡಿ ಹಿಡಿದು ಅಂತಿಮ ಸುತ್ತಿನಲ್ಲಿ ಆಯ್ದ ಐವತ್ತು ಕಥೆಗಳಲ್ಲಿ ಕೊನೆಗುಳಿದ ಹತ್ತು ಕಥೆಗಳು ಕನ್ನಡದ ಲೇಖಕರು ಕಥಾಪ್ರಕಾರದಲ್ಲಿ ತುಳಿಯುತ್ತಿರುವ ಹೊಸ ದಾರಿಗಳನ್ನು, ಹೊಸ ಲೇಖಕರ ಮನೋಧರ್ಮವನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ.
nil
ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ?
ವೀರಲೋಕದ 63ನೇ ಕೃತಿ ವಿಕ್ರಮ್ ಹತ್ವಾರ್ ಅವರ “ಕಾಗೆ ಮೇಷ್ಟ್ರು”… ಝೀರೋ ಮತ್ತು ಒಂದು’ ಹಾಗು ‘ಹಮಾರಾ ಬಜಾಜ್’ ಎಂಬ ಕಥಾ ಸಂಕಲನದಿಂದ ಓದುಗರನ್ನು ಸೆಳೆದಿರುವ ವಿಕ್ರಮ ಹತ್ವಾರ್, ಕನ್ನಡದ ಅನನ್ಯ ಕತೆಗಾರ ಮತ್ತು ಕವಿ. ಹೊಸ ಭಾಷೆ, ವಿಶಿಷ್ಟ ವಸ್ತು-ನಿರ್ವಹಣೆ, ಮಾಹಿತಿ ತಂತ್ರಜ್ಞಾನ ಯುಗದ ಪಲ್ಲಟಗಳು, ಜಾಗತೀಕರಣ ಸಂದರ್ಭದಲ್ಲಿನ ಮನುಷ್ಯ ಸಂಬಂಧಗಳು, ದ್ವಂದ್ವಗಳು, ಆಧುನಿಕ ಮನುಷ್ಯನ ಸಂಕಟ ತವಕ-ತಾಕಲಾಟ ಹುಡುಕಾಟ, ಬದಲಾಗುತ್ತಿರುವ ಕೌಟುಂಬಿಕ ವ್ಯವಸ್ಥೆ ಮತ್ತು ಮೌಲ್ಯ – ಇವು ವಿಕ್ರಮ ಹತ್ವಾರರ ಕತೆಗಳಲ್ಲಿ ವಿಮರ್ಶಕರು ಗುರುತಿಸಿರುವ ಕೆಲವು ವಿಶೇಷತೆಗಳು. ಪ್ರಸ್ತುತ ‘ಕಾಗೆ ಮೇಷ್ಟ್ರು’ ಎಂಬ ಕಥಾ ಸಂಕಲನದಲ್ಲಿ ಹುಟ್ಟು ಸಾವು ಎನ್ನುವ ಎರಡು ತುರೀಯ ಸತ್ಯಗಳ ನಡುವೆ, ಮನುಷ್ಯನ ನೆಮ್ಮದಿಯ ಹುಡುಕಾಟದಲ್ಲಿ ವೇದ್ಯವಾಗುವ ಅಸಂಖ್ಯ ಅಣು ಸತ್ಯಗಳ ಮೇಳವಿದೆ. ಬದುಕಿನ ಅಸಂಗತ ಕ್ಷಣಗಳ ಆಳದಲ್ಲಿ ಹುದುಗಿರುವ ದರ್ಶನವು ಕತೆಗಾರನ ಕಾವ್ಯ ಕುಸುರಿಯಲ್ಲಿ ಅನಾವರಣಗೊಳ್ಳುವ ಸೋಜಿಗವನ್ನು ಓದಿನ ಮಾಯೆಯಲ್ಲೇ ಅನುಭವಿಸಬೇಕು. ಇಂಥ ಅನುಭವ ಸುಖದ ಸೆಳೆತ ಈ ಕತೆಗಳನ್ನು ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸುತ್ತವೆ. ಓದುವ ನಶೆ ನಿಮಗೇರಲಿ…
ಗ್ರಾಮೀಣ ಪ್ರದೇಶಗಳೂ ಸೇರಿದಂತೆ ಹಲವೆಡೆ ಇರುವ ಶೋಷಣೆ, ಮೂಢನಂಬಿಕೆ ಮತ್ತು ಜಾತೀಯತೆ, ಕೌಟುಂಬಿಕ ಸಂಘರ್ಷಗಳು, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಭ್ರಷ್ಟ ವ್ಯವಸ್ಥೆಯ ಚಿತ್ರಣಗಳ ಕಥೆಗಳು ಪ್ರಸ್ತುತ ಸಂದರ್ಭಗಳಿಗೆ ಹಿಡಿದ ಕೈಗನ್ನಡಿಯಾಗಿವೆ.
ಇಲ್ಲಿರುವ ಕತೆಗಳು ಕೂಡ ಸ್ತ್ರೀ ಸಂವೇದನೆಯ ಸುತ್ತ ಸುತ್ತುವ ಕತೆಗಳಾಗಿದ್ದು, ಸಾಮಾಜಿಕ ಹಾಗು ಕೌಟುಂಬಿಕ ನೆಲೆಯಲ್ಲಿ ಹೆಣ್ಣಿನ ತುಮುಲಗಳು, ಹುಡುಕಾಟ, ಸ್ಥಿತಪ್ರಜ್ಞೆ, ಜವಾಬ್ದಾರಿಗಳು, ಎದುರಿಸಬೇಕಾದ ಅತ್ಯಂತ ಸೂಕ್ಷ್ಮ ಸಂಗತಿಗಳನ್ನು ಪದರು ಪದರುಗಳಾಗಿ ಬಿಡಿಸಿ ಹೇಳಲಾಗಿದೆ.
ಕಥೆ ಅಂದರೆ ಕಟ್ಟು ಕಥೆಯಲ್ಲ, ಒಂದು ಅಳತೆಗೆ ಕಟ್ಟಿದ ಕಥೆ, ಸಹಜವಾಗಿ ಹೆಣೆದಾಗ ಅದು ಕಣ್ಣಿಗೆ ಕಟ್ಟುವಂಥಾ ಕಥೆಯಾಗುತ್ತದೆ. ಕಥೆಗಳ ಸ್ವರೂಪವೇ ಹಾಗಿರಬೇಕು. ಓದುತ್ತಾ ಇದ್ದ ಹಾಗೆ ಕಥೆಯ ಪಾತ್ರಗಳು ಕಣ್ಣು ಮುಂದೆ ಬಂದು ನಿಲ್ಲಬೇಕು. ಪಾತ್ರಗಳು ಆಡುವ ಮಾತುಗಳು ಯಾವುದೂ ನಾಟಕೀಯವಾಗಿರಬಾರದು. ಇಂಥಾ ಸಂದರ್ಭಗಳಲ್ಲಿ ನಾವು ಮಾತಾಡಿದರೂ ಹಾಗೇ ಮಾತಾಡುತ್ತೀವಿ ಎನ್ನುವಂತಿರಬೇಕು. ಇನ್ನು ಕಥೆಯಲ್ಲಿ ಬರುವ ಘಟನೆಗಳೂ ನೈಜತೆಗೆ ದೂರವಾಗಿರಬಾರದು. ಹೌದು ಇದು ಎಲ್ಲರ ಬದುಕಲ್ಲೂ ನಡೆಯುವಂಥದು, ಎಲ್ಲ ಪಾತ್ರಗಳೂ ಹೀಗೇ ನಡೆದುಕೊಳ್ಳುವಂಥವು ಎನಿಸಬೇಕು. ಆಗ ಮಾತ್ರ ಕಥೆ ಬರೆದವನಿಗೂ ಕಥೆ ಓದುವವನಿಗೂ ಒಂದು ಸಹೃದಯ ಸಂಪರ್ಕ ಬರುತ್ತದೆ. ಅಲ್ಲಿಗೆ ಕಥೆಯೂ ಗೆಲ್ಲುತ್ತದೆ, ಕಥೆಗಾರನೂ ಗೆಲ್ಲುತ್ತಾನೆ. ಪ್ರಸ್ತುತ ನಿಮ್ಮ ಕೈಯಲ್ಲಿರುವ ದಡ ಸೇರದ ದೋಣಿಗಳು ಕಥೆಯಲ್ಲಿ ಇರುವ ಎಲ್ಲಾ ಇಪ್ಪತ್ತೈದು ಕಥೆಗಳ ಸ್ವರೂಪವೂ ಹೀಗೇ ಇದೆ. ಈ ಎಲ್ಲಾ ಕಥೆಗಳನ್ನು ಓದುವಾಗ ಲೇಖಕರ ಸುಮಾರು 50 ವರ್ಷಕ್ಕೂ ಹೆಚ್ಚಿನ ಸಾಹಿತ್ಯ ವ್ಯವಸಾಯದ ಅನುಭವದ ಸಾರ ಓದುಗರಿಗೆ ಅರಿವಾಗುತ್ತದೆ. ಪಾತ್ರಗಳು ಯಾವುದೂ ಸೃಷ್ಟಿಯಾಗಿಲ್ಲ, ಬದಲಿಗೆ ಅವುಗಳೇ ಬಂದು ಬೆಸೆದುಕೊಂಡಿವೆ. ಸೃಷ್ಟಿಕರ್ತ ಬ್ರಹ್ಮ ಒಬ್ಬನೇ ಆದರೂ ಅವನು ಸೃಷ್ಟಿಸಿರುವ ಪಾತ್ರಗಳೂ, ಅವುಗಳ ಸ್ವಭಾವಗಳೂ, ಮಾತುಗಳೂ, ನಡವಳಿಕೆಗಳೂ ಹೇಗೆ ಬೇರೆಬೇರೆ ಯಾಗಿರುವುವೋ ಹಾಗೆ ಕಥೆಗಾರ ಒಬ್ಬನೇ ಆದರೂ ಅವನು ತನ್ನ ಕಥೆಯಲ್ಲಿ ಸೃಷ್ಟಿಸಿರುವ ಪಾತ್ರಗಳು ಅವನ ಮೂಗಿನ ನೇರಕ್ಕೆ ನಡೆದುಕೊಂಡರೂ, ಮಾತಾಡಿದರೂ ಎಲ್ಲವೂ ಸಹಜವಾಗಿರುತ್ತವೆ. ಯಾವುದೂ ನಾಟಕೀಯ ಎನಿಸುವುದಿಲ್ಲ, ಬಲವಂತ ಎನಿಸುವುದಿಲ್ಲ. ಒಟ್ಟಿನಲ್ಲಿ ಕಥೆ ಅಂದರೆ ಅದು ಬರೀ ಕಥೆಯಲ್ಲ, ಅದು ನಮ್ಮ ಬದುಕಿನ ಅನೇಕ ಘಟನೆಗಳಿಗೆ ಹಿಡಿದ ಕನ್ನಡಿ ಎನ್ನುವಂತೆ ಈ ಸಂಗ್ರಹದ ಕಥೆಗಳೆಲ್ಲಾ ನಿಮ್ಮನ್ನು ಸೆರೆಹಿಡಿದು ಓದಿಸಿ ಕೊಳ್ಳುವುದರಲ್ಲಿ ಅನುಮಾನವಿಲ್ಲ. ನಿಮಗೆ ಈ ಎಲ್ಲಾ ಕಥೆಗಳ ಓದಿನ ಸುಖ ದೊರೆಯಲಿ. -ಬೇಲೂರು ರಾಮಮೂರ್ತಿ
'ದೂರ ದೇಶದ ದೇವರು' ಕಥಾಸಂಕಲನದ ಪಾತ್ರಗಳಲ್ಲಿ ನೈಜತೆಯಿದ್ದು ಅವು ಬಹು ಆಯಾಮವನ್ನು ಹೊಂದಿವೆ. ಕತೆ ಸಾಗುತ್ತಿದ್ದಂತೆ ಅಲ್ಲೊಂದು ಬೆಳವಣಿಗೆ, ಒಂದು ಬದಲಾವಣೆ ಕಂಡುಬರುತ್ತದೆ. ಅಲ್ಲಿನ ಸಂಬಂಧ-ಸಂಘರ್ಷಗಳು ನೈಜವಾಗಿ ನಡೆಯುವಂತೆ ಕತೆಯನ್ನು ಮುಂದಕ್ಕೆ ಕೊಂಡೊಯ್ಯಲಾಗಿದೆ. ಪ್ರತಿ ಕತೆಯಲ್ಲೂ ಇರುವ ಸಂಘರ್ಷದಲ್ಲಿ ಓದುಗನೂ ಪಾಲುಗೊಳ್ಳುವಂತಾಗುವುದು ಇಲ್ಲಿನ ವಿಶೇಷ. ಕುಣಿಗಲರು ಕತೆ ಹೇಳುವ ರೀತಿಯೂ ಸ್ವಾರಸ್ಯಕರವಾಗಿದ್ದು, ಕತೆಗಳು ಆಸಕ್ತಿಯಿಂದ ಓದಿಸಿಕೊಂಡು ಹೋಗುತ್ತವೆ. ಕತೆಯ ಭಾಷೆ, ನಿರೂಪಣಾ ಶೈಲಿ, ಪದಗಳ ಆಯ್ಕೆಯಲ್ಲಿರುವ ಶಿಸ್ತು ಮತ್ತು ವಿಷಯವನ್ನು ಕೆಲವೇ ಶಬ್ದಗಳಲ್ಲಿ ಹೇಳುವ ಅಚ್ಚುಕಟ್ಟುತನ ಈ ಎಲ್ಲ ಅಂಶಗಳು ಅನಾಯಾಸವಾಗಿ, ಸಹಜವಾಗಿ ಬಂದು, ಅಲ್ಲೊಂದು ಸಮತೋಲನವಿದೆ. ಓದಿ ಮುಗಿದ ನಂತರವೂ ಓದುಗರೊಂದಿಗೆ ಉಳಿಯುವ ಗುಣವಿದೆ. ಮಾನವ ಸ್ವಭಾವದ ಬಗ್ಗೆ ಸೂಕ್ಷ್ಮವಾದ ಒಳನೋಟವನ್ನು ನೀಡುವ ಈ ಸಂಕಲನದ ಕತೆಗಳು ವೈಯುಕ್ತಿಕವಾಗಿದ್ದಂತೆ ಅಲ್ಲೊಂದು ಸಾರ್ವತ್ರಿಕತೆಯೂ ಇದೆ. ಮುಖ್ಯವಾಗಿ, ಕತೆಯ ಓಘವು ಎಲ್ಲವನ್ನೂ ಕಾಗುಣಿತಗೊಳಿಸದೆ ಬದುಕಿನ ವ್ಯಾಖ್ಯಾನಕ್ಕೆ ಅವಕಾಶವನ್ನು ನೀಡುತ್ತವೆ. ಹೊಸ ಆಲೋಚನೆಗಳು ವೈಯಕ್ತಿಕ ಮಟ್ಟದಲ್ಲಿ ಆಳವಾಗಿ ಪ್ರತಿಧ್ವನಿಸುವಂತಿದ್ದು, ಕೆಲವು ಕತೆಗಳು ಓದುಗನ ದೃಷ್ಟಿಕೋನಕ್ಕೆ ಸವಾಲೊಡ್ಡುವಂತಿವೆ. ಮಿತ್ರಾ ವೆಂಕಟ್ರಾಜ | ಹಿರಿಯ ಕಥೆಗಾರ್ತಿ | ಮುಂಬಯಿ
ಫೈಜ್ ಅವರು ಕತೆ ಬರೆಯುವುದಿಲ್ಲ; ಅದನ್ನು ಸುಮ್ಮನೆ ಹ-ರಿಯ ಬಿಡುತ್ತಾರೆ. ನದಿ ತನ್ನ ಚಾಡನ್ನು ತಾನು ಹಿಡಿದು ಹೊರಡುವಂತೆ ಕಥೆ ತನ್ನ ದಾರಿಯನ್ನು ಹಿಡಿದುಕೊಂಡು ಸುಮ್ಮನೆ ಹೊರಡುತ್ತದೆ. ಕಥೆಗಾರ ಫೈಡ್ ಹೊರಗಿನಿಂದ ಅದನ್ನು ನೋಡುತ್ತಾ ನಿಲ್ಲುತ್ತಾರೆ. ಹರಿದ ಆ ನದಿಯಲ್ಲಿ ಮಣ್ಣಿನ ಸೊಗಡಿದೆ. ಬಡವರ ನಾಲ್ಕು ಹನಿ ಕಣ್ಣೀರಿದೆ. ನೋವಿದೆ. ದಡವು ನದಿಯನ್ನು ಸಮಾಧಾನಿಸುವಂತೆ ಕಥೆಗಾರ భృహో జీవించిగ మిడియుత్తార, నూ+విగ మిడియన ಕಥೆಯನ್ನು ಯಾಕಾದರೂ ಬರೆಯಬೇಕು? ಎಂಬುದು ಅವರ ಧೋರಣೆ. ಅವರೆಂದೂ ಬದುಕು ಮತ್ತು ಕಥೆ ಈ ಎರಡನ್ನೂ ಬೇರೆ ಬೇರೆಯಾಗಿ ನೋಡಿಲ್ಲ. ಅದು ನನಗಿಷ್ಟ ಇಲ್ಲಿನ ಕಥೆಗಳು ಮಧ್ಯಾಹ್ನ ಬಿಸಿಲಿನಂತೆ ಶುರುವಾಗುತ್ತವೆ. ಮುಗಿಯುವ ಹೊತ್ತಿಗೆ ನಿಮ್ಮ ಎದೆಯಲ್ಲಿ ಮೋಡ ಕಟ್ಟುತ್ತದೆ. ಕಥೆ ಮುಗಿಸಿ ಎದ್ದು ಹೊರಟ ನಿಮ್ಮೊಳಗೊಂದು ಮಳೆ ಸುರಿಯುತ್ತವೆ. ಕಥೆ ಓದಿದವ ಹದವಾಗುತ್ತಾನೆ. ಹದವಾದ ಎದೆಯಲ್ಲಿ ಒಂದು ಮಾನವೀಯ ಸಸಿ ಗರಿಬಿಚ್ಚಲಿ ಎಂಬ ಕಾಳಜಿ ಈ ಕಥೆಗಾರನದು. ಇವರ ಕಥೆಗಳು ತಣ್ಣನೆಯ ಇಬ್ಬನಿಯ ಬಗ್ಗೆ ವ್ಯರ್ಥವಾಗಿ ಚರ್ಚಿಸುತ್ತಾ ಕೂರುವುದಿಲ್ಲ, ಮಧ್ಯಾಹ್ನದ ಸುಡು ಬಿಸಿಲಿನ ನೋವಿಗೆ ಒಂದು ಹಿಡಿ ನೆರಳಿನಂಥಹ ಮದ್ದಿಗಾಗಿ ತಡಕಾಡುತ್ತವೆ. ಕಥೆಗಳಲ್ಲಿ ಅಗ್ನಿ ಪ್ರಾಮಾಣಿಕತೆ ಕಾಣಿಸುತ್ತದೆ. ಕಣ್ಣಿಗೊಡೆದು ಸುಮ್ಮನೆ ಮೋಡಿ ಮಾಡುವ ತಂತ್ರಗಾರಿಕೆ ಅವರದಲ್ಲ. ಇಲ್ಲಿ ಅಧಿಕ ಪ್ರಸಂಗವಿಲ್ಲ. ಮೊದಲ ಬಾರಿ ನಗರಕ್ಕೆ ಬರುವ ಹಳ್ಳಿಯ ಹೈದನ ಮುಗ್ಧತೆಯಿದೆ. ಇವು ಅಸಲಿ ಜವಾರಿ ಕಥೆಗಳು, ನೆಲದ ಕಥೆಗಳು. ಇಲ್ಲಿನ ಕಥೆಗಳು ಮೋಸಮಾಡುವುದಿಲ್ಲ. -ಸದಾಶಿವ ಸೊರಟೂರು ಕವಿ, ಹೊನ್ನಾಳಿ
ಎರಡು ಗಂಟೆ ಕೆಲಸ ಮಾಡುವ ವೇಳೆಗೆ ಅವನ ಮನಸ್ಸಿಗೆ ಜೋರಾಗಿ ಕಿರುಚ ಬೇಕೆನ್ನಿಸಿತು. ಉಸಿರಾಡಲು ಕಷ್ಟವಾಗಿ ಹೊರಗೆದ್ದುಬಂದ
ಹೆಣ್ಣು ಮತ್ತು ಮಣ್ಣಿಗೆ ಬಿಡಿಸಲಾರದ ಬಂಧ. ಹಾಗಾಗಿಯೇ ಜಗದ ಹೆಣ್ಣುಗಳ ಕಥೆಯನ್ನು ಹೆಣೆದರೆ ಅದು ಈ ನೆಲದ ಕಥೆಯೂ ಆಗಿರುತ್ತದೆ. ಹೆಣ್ಣ ಕಣ್ಣೋಟದಲ್ಲಿ ದಕ್ಕುವ ಸುತ್ತಲ ಜಗತ್ತಿನ ಚಿತ್ರಣವೇ ಬೇರೆ.
ಪ್ರಿಯ ಪ್ರಸಾದ್ ಚತುರ್ಮುಖ ಬಸದಿಯ ಕಲ್ಲ ಮೇಲೆ ಕೂತು ಪುಟ್ಟ ಚೀಲದಿಂದ ಬಿಟು, ಚಕ್ಕುಲಿ, ಬನ್ನುಗಳನ್ನು ಮುಖದ ಬಣ್ಣ, ತುಟಿಯ ಕೆಂಪು ಹಾಳಾಗದಂತೆ ತಿನ್ನುವ ಮರಿ ಮಹಿಷಾಸುರ "ವೇಷದ ಸಂತು". ನಿಗೂಢ ಮಳೆಯ ಕಾಡಿನಲ್ಲಿ ಕಂಬಳಿಕೊಪ್ಪೆ ಹಾಕಿಕೊಂಡು, ಅದೃಷ್ಟಕ್ಕಾಗಿ ಕಾದವನಂತೆ, ಕಲ್ಲಣಬೆಗಾಗಿ ಅಲೆಯುವ ನಿಚ್ಚು, ತನ್ನ ಸಿರಿಕಂಠದ ಭಾಗವತಿಕೆಯ ಯಕ್ಷಬಿಂಬಕೆ ತಾನೇ ಮಾರು ಹೋಗಿ, ತನ್ನನ್ನೇ ಕಳೆದುಕೊಂಡು ಕಂಗಾಲಾದ ಗಿರಿಧರ, ಇಂಥವರ ಕತೆಗಳನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದೀಯ. ಮೇಲ್ನೋಟಕ್ಕೆ ಒಂದು ಬಗೆಯ ವರ್ಣನಾತ್ಮಕ ಗುಣ ಈ ನಿರೂಪಣೆಗಳಲ್ಲಿ ಎದ್ದು ಕಂಡರೂ, ಸೂಕ್ಷ್ಮವಾಗಿ ನೋಡಿದರೆ ಅದು ಆಯಾ ಜೀವಿಗಳ ಖಾಸಗೀ ಜೀವನದ ದಾರುಣತೆಯ ವಿರೋಧಾಭಾಸವನ್ನು ಧ್ವನಿಸುತ್ತದೆ. ಹಬ್ಬದ ನೆಪದಲ್ಲಿ ಪುರಾಣದ ವೇಷಗಳನ್ನು ತೊಟ್ಟುಕೊಂಡು ಮನೆಮನೆಗೆ ಕಾಣಿಕೆಗಾಗಿ ಅಲೆಯುವುದು, ಕಲ್ಲಣಬೆಯ ರುಚಿ ಏನೆಂದೇ ತಿಳಿಯದವ ಅದನ್ನು ಅಲೆದಾಡಿ ಹಕ್ಕಿ ತಂದು ತನಗಾಗಿ ಒಂದನ್ನೂ ಉಳಿಸಿಕೊಳ್ಳದೇ ಪುಡಿಗಾಸಿಗೆ ಮಾರುವುದು, ಸಾರ್ವಜನಿಕರ ಕಣ್ಣಲ್ಲಿ ಏರುತ್ತ ಹೋದ ಕಲಾವಿದ ಅತ್ಮಮೋಹದ ನರಕಕ್ಕೆ ಜಾರುವುದು, ಇಂಥ ವಿರೋಧಾಭಾಸಗಳು ಈ ಕತೆಗಳ ಮುಖ್ಯ ಲಕ್ಷಣಗಳಾಗಿ ನನ್ನನ್ನು ತಟ್ಟಿದವು. ಮೊದಲೇ ಅಸ್ಪಷ್ಟವಾಗಿಯಾದರೂ ಮನಗಂಡಿರುವ ಕತೆಯನ್ನು ಆರಾಮಾಗಿ “ಎಲೆಗೆ ಸುಣ್ಣ ಹಚ್ಚುತ್ತ ಹೇಳುವ ಶೈಲಿ" ನಿನ್ನದು. ಹೀಗಾಗಿ ಚೂರೂ ಹದ ತಪ್ಪಿದರೂ ವಿರೋಧಾಭಾಸದ ಆ ಅಜ್ಞಾತ ನಾಡಿಬಿಂದು ಎಲ್ಲೋ ಹಗುರಾಗಿಬಿಡಬಹುದು, ಅಥವಾ ಮರೆಯಾಗಿಬಿಡಬಹುದು. ನಿನಗೂ ಗೊತ್ತಿರದ ಸಂಗತಿಗಳು ಬಂದು ಸೇರಿಕೊಳ್ಳಲು ನೀನು ಬಾಗಿಲುಗಳನ್ನು ತೆರೆದಿಟ್ಟುಕೊಂಡಾಗ ಮಾತ್ರ ಹೊಸತೊಂದು ಅನಿರೀಕ್ಷಿತ, ಅಸಂಗತ ಅಂಶ ಬಂದು ನಿನ್ನನ್ನು ಚಕಿತಗೊಳಿಸಬಹುದು. ಗಿರಿಧರನಿಗೆ ಅನಿಸುವಂತೆ, ಕಥನವೂ ಸಹ ಕಾಣದ ಕಡಲಿನೆಡೆಗೆ ಚಲಿಸುತ್ತಿರುವ ನದಿಯಂತೆ, ಅದು ತನ್ನ ದಂಡೆಯನ್ನು ತಾನೇ ರೂಪಿಸಿಕೊಳ್ಳುತ್ತದೆ. ನಿನ್ನ ಬರವಣಿಗೆ ನಿನ್ನನ್ನು ಒರೆಗೆ ಹಚ್ಚುತ್ತಲೇ ಇರಲಿ, ಹೊಸ ಹೊಸ ಅಸಂಗತ, ಅನಿರೀಕ್ಷಿತ ತಿರುವುಗಳಿಗೆ ತೆರೆದುಕೊಳ್ಳುತ್ತ ಜೀವಜಾಲದೊಂದಿಗಿನ ನಂಟನ್ನು ಒಳಗೊಳ್ಳುತ್ತ ಪ್ರವಹಿಸಲಿ, ಜಯಂತ ಕಾಯ್ಕಿಣಿ
ವಿಶಿಷ್ಟ ಸಂವೇದನೆಗಳಿಂದ ರೂಪುಗೊಂಡ ಈ ಕಥೆಗಳನ್ನು ಒಂದು ಸೀಮಿತ ಸಾಹಿತ್ಯದ ವಾದದ ಚೌಕಟ್ಟಿಗೆ ತಂದು ಕೂಡಿಸುವದು ಸಾಧ್ಯವಾಗುವದಿಲ್ಲ. ಬಹುತೇಕ ಎಲ್ಲಾ ಕಥೆಗಳು ಭಾರತದ ಸಾಮುದಾಯಿಕ ಪ್ರಜ್ಞೆಯನ್ನು ಎತ್ತಿ ಹಿಡಿದಿವೆ
ಏನನ್ನೂ ಅಪೇಕ್ಷಿಸಿದ, ಯಾರನ್ನೂ ಉಪೇಕ್ಷಿಸದ ಈಕೆ ಅಪ್ಸರೆ. ಅಮರರಿಗೆ ಕಾಲದ ಹಂಗಿಲ್ಲ. ಹಾಗಾಗಿ ಭೂತ ಭವಿಷ್ಯತ್ತಿನ ಎಲ್ಲೆಗಳಿಲ್ಲ, ನಿರಂತರ ವರ್ತಮಾನ. ಕಾದದ್ದು ಊರ ಚೌಡಿಯಂತೆ, ಮುಟ್ಟಿದ್ದೆಲ್ಲಾ ಅಮೃತ, ಬೇಯಿಸಿದ ಅನ್ನ, ಕಾಯಿಸಿದ ಹಾಲು ಎಲ್ಲಾ ಹದ. ಕುದಿಯುತ್ತೆ; ಉಕ್ಕಲ್ಲ, ಕತ್ತಲ ಅಟ್ಟದ ಜಾಡಿಯ ಮಿಡಿ ಉಪ್ಪಿನಕಾಯಿಯೂ ವರ್ಷಗಳಾದರೂ ಕೆಡೊಲ್ಲ. ಉರಿಗಾರದ ಬಾಣಂತಿ ಲೇಹ್ಯ ಕೇವಲ ಅವಶ್ಯಕ ಕಾವನ್ನಷ್ಟೇ ಕೊಡುತ್ತೆ. ಆಷ್ಟ್ಯಾಕೆ ಸುತ್ತಲಿನ ನಿರ್ಲಿಪ್ತ ಗಾಳಿ ಕೂಡಾ ಅ೦ಟಿಕೊ೦ಡವರಿಗೆ ಉಸಿರಾಗುತ್ತೆ. ಓದಿ ಮುಗಿಸಿದೆ, ಮೈ ಮನ ತು೦ಬಿದೆ. ಭಾವೋದ್ವೇಗದಲ್ಲಿ ಅಲ್ಲಲ್ಲಿ ಉಕ್ಕಿದರೂ ಎಲ್ಲೆ ಮೀರಿ ಎಲ್ಲೂ ಚೆಲ್ಲಿಲ್ಲ. ಹಾಲು ಕುದ್ದು ನೀರು ಆವಿಯಾಗಿ ಅನುಭವದ ಸಾರ ಹೆಪ್ಪುಗಟ್ಟಿದಾಗ ಖಾಲಿತನ ಕಾಡಿದ್ದುಂಟು ಹೌದು ಆದರೆ ಅದನ್ನು ಮೀರಿದ ಪರಿಮಳ ಆವರಿಸಿದ್ದು ಸುಳ್ಳಲ್ಲ. -ಸೇತುರಾಂ
"ಹೇ ಇದ್ರೇನ್ ಇಲ್ಲಿ..!?” ಆತನನ್ನು ಅಲ್ಲಿ ನೋಡಿದ ಕೂಡಲೇ, ಆ ಸಾವಿನ ಮನೆಯಲೆಲ್ಲ ಸಂಚಲನದ ಜೊತೆಗೆ ಗುಸುಗುಸು ಹಬ್ಬಿತ್ತು. ಅರವತ್ತು ವರ್ಷಗಳ ತುಂಬು ಜೀವನವನ್ನ ನಡೆಸಿದ್ದ ಅನ್ನಪೂರ್ಣ ಅಂದು ಇಹ ಲೋಕ ತ್ಯಜಿಸಿದ್ದರು. ಅವರ ಪಾರ್ಥಿವ ದೇಹವನ್ನ ದರ್ಶನ ಮಾಡಲು ಬರುತ್ತಿದ್ದವರ ಸಾಲಿನಲ್ಲಿ, ಅನ್ನಪೂರ್ಣರವರಷ್ಟೇ ವಯಸ್ಸಾದ, ಆ ಜಿಲ್ಲೆಯ ಪ್ರಸಿದ್ಧ ವ್ಯಕ್ತಿಯೊಬ್ಬ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ ಗುಸು, ಗುಸು ಅನ್ನಪೂರ್ಣರವರ ತಮ್ಮನ ಕಿವಿಗೂ ತಲುಪಿ, ಯಾರೆಂದು ಬಗ್ಗಿ ನೋಡಿದವನ ಕಣ್ಣಲ್ಲಿ ಅರೆಕ್ಷಣ ಅಚ್ಚರಿಯೊಂದು ಹಾದುಹೋಗಿತ್ತು. ಅನ್ನಪೂರ್ಣ ಮನಸಾರೆ ಪ್ರೀತಿಸಿದ ವ್ಯಕ್ತಿಯವನು. ಅವರಿಬ್ಬರೆದು ಅಮರ ಪ್ರೇಮಕತೆ. ಜೀವಕ್ಕೆ ಜೀವವಾಗಿ ಪ್ರೀತಿಸಿ, ಕೊನೆಗೆ ಅಮ್ಮ ಅಪ್ಪನ ಮಾತಿಗೆ, ಬೆದರಿಕೆಗೆ ಹೆದರಿ ಬೇರೆಯವನನ್ನು ಮದುವೆಯಾಗಿದ್ದರು ಅನ್ನಪೂರ್ಣಮ್ಮ, ಆಮೇಲೆ ಎಂದಿಗೂ ಅವರು ಭೇಟಿಯಾಗಿರಲಿಲ್ಲ. ಒಬ್ಬರಿಗೊಬ್ಬರ ಇರುವುಗಳ ಮಾಹಿತಿಯಿದ್ದರೂ ಮುಖತಃ ಎಂದು ಭೇಟಿಯಾಗಲೇ ಇಲ್ಲ. ಅದಾದ ಮೇಲೆ ಬಹುಷಃ ಇದೇ ಅವರ ಮೊದಲ ಭೇಟಿ. ಗುಸುಗುಸು ಮಾತುಗಳ ಪರಿವೆಯೇ ಇಲ್ಲದ ಆತ, ಕಣ್ಣಲ್ಲಿ ಹರಿಯುತ್ತಿದ್ದ ನೀರನ್ನು ಒರೆಸಿಕೊಳ್ಳುವ ಗೋಜಿಗೆ ಬೀಳದೆ "ಹೇಳಿಲ್ಲ ನಿಂಗೆ, 'ಎಲ್ಲೇ ಇರು, ಯಾರಜೊತೆನಾದ್ರು ಇರು, ಖುಷಿಯಾಗಿರು, ಆದ್ರೆ ನಂಗಿಂತ ಮುಂಚೆ ಈ ಭೂಮಿ ಬಿಟ್ಟೋಗ್ಗೇಡ, ನಿನ್ನ ಭೌತಿಕ ಇರುವಿಲ್ಲದೆ ನಾ ಇರಲ್ಲ ಅಂತ'. ಹೇಳು ಯಾಕ್ ಬಿಟ್ಟೋದೇ 17' ಅನ್ನಪೂರ್ಣರ ಜೀವವಿಲ್ಲದ ದೇಹದೊಡನೆ, ಮನಸ್ಸಲ್ಲೇ ಮಾತನಾಡುತ್ತಿದ್ದನಾತ. #ಕೆಲವೊಂದು ಪ್ರೇಮಕತೆಗಳಿಗೆ ಮೊದಲಷ್ಟೇ ಇರುತ್ತದೆ, ಕೊನೆಯಲ್ಲ. ಒಳಗೆ ಇನ್ನಷ್ಟು ನಮ್ಮ-ನಿಮ್ಮ ಕಥೆಗಳಿವೆ. ಓದಿ ನೋಡಿ. ಹ್ಯಾಪಿ ರೀಡಿಂಗ್... - ಅರ್ಜುನ್ ದೇವಾಲದಕೆರೆ.
ಕನ್ನಡದಲ್ಲಿ ಸಣ್ಣಕಥೆಗ ಆಗೀಗ ದೆಸೆ ತಿರುಗಿ, ಕಥಾಸ್ಪರ್ಧೆಯ ಮೊತ್ತಬೀಗ ಅರ್ಧ ಲಕ್ಷ ಮುಟ್ಟದೆ. ಇದು ಯುವ ಕಥೆಗಾರರಿಗೆ ಇಂಬಾಗುವ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯೆ ಹೌದು, ಐದುನೂರು ರೂಪಾಯಿಯಿಂದ ಐವತ್ತು ಸಾವಿರದವರೆಗೆ ನಮ್ಮ ಹಣ್ಣಕಥೆಗಳನ್ನು ವಿಸ್ತರಿಸುತ್ತಿರುವ ಪತ್ರಿಕೆಗಳು ಮತ್ತು ಪ್ರಾಯೋಜಕರು ಪ್ರಶಂಸಾರ್ಹರು.
ವರದಾ ತೀರದ ಕಥೆಗಳನ್ನು ಓದುತ್ತಾ ಮನಸಾರೆ ನಕ್ಕಿದ್ದೇನೆ. ಅರಿವಿಲ್ಲದೇ ಕಣ್ಣಂಚಿನಲ್ಲಿ ಬಂದ ನೀರನ್ನು ಒರೆಸಿಕೊಂಡಿದ್ದೇನೆ. ಹೀಗಾಗಬಾರದಿತ್ತು ಎಂದು ನೊಂದುಕೊಂಡಿದ್ದೇನೆ. ಬರಹಗಾರನ ಕಥೆಯ ಭಾವಕ್ಕೆ ಓದುಗನ ಭಾವನೆಗಳು ಹೊಂದಿದ್ದೇ ಆದರೆ ಕಥಾಪ್ರಸವ ಅನುಭವಿಸಿದ ಕಥೆಗಾರನಿಗೂ ನೆಮ್ಮದಿಯ ನಿಟ್ಟುಸಿರು. ರವೀಂದ್ರ ಮುದ್ದಿಯವರ ಸಿನಿಮಾ, ಟಿವಿಗಳಲ್ಲಿ ಇನ್ನೂ ಬಳಕೆಯಾಗದ ಜವಾರಿ ಭಾಷೆಯ ಪದ ಪ್ರಯೋಗ ಮಾತ್ರ ಅದ್ಭುತ. ವರದಾ ತೀರದ ಕತೆಗಳನ್ನು ಓದುತ್ತಿದ್ದರೆ ನಮಗೆ ಗೊತ್ತಿಲ್ಲದಂತೆ ನಾವು ಆಡಿ ಬೆಳೆದ ನಮ್ಮೂರು ಚಿತ್ರಣ ಕಣ್ಮುಂದೆ ಮುಂದೆ ಬರುವುದು ಗ್ಯಾರಂಟಿ.