| Category: | ಕನ್ನಡ |
| Sub Category: | ಕಥಾ ಸಂಕಲನ |
| Author: | ಇರ್ಷಾದ್ ಉಪ್ಪಿನಂಗಡಿ | Irshad Uppinangadi |
| Publisher: | Aharnishi Prakashana |
| Language: | Kannada |
| Number of pages : | |
| Publication Year: | 2025 |
| Weight | 300 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಇದು ಪೊಲೀಸರ ಚಾರ್ಜ್ ಶೀಟ್ ಅಲ್ಲ. ಸುದ್ದಿಗಾರಿಕೆಯಂತೂ ಅಲ್ಲವೇ ಅಲ್ಲ. ಪತ್ರಕರ್ತನೊಬ್ಬ ತನ್ನ ಪೆನ್ನಿಗೆ ಸತ್ಯಶೋಧನೆಯ ಮಸೂರ ಹಿಡಿದು ಪೂರ್ವಗ್ರಹಗಳಿಲ್ಲದೆ ಹೊರಟಾಗ ವಾಸ್ತವ ಬದುಕಿನ ಹಲವು ದಾರುಣ ಕಥೆಗಳು ತೆರೆದುಕೊಳ್ಳುತ್ತವೆ. ಹಾಗಾಗಿ ಈ ಪುಸ್ತಕ ಹಿಡಿದು ಓದಲು ಕುಳಿತಾಗ ಇದು ನಮ್ಮೂರಿನಲ್ಲಿಯೇ ನಡೆದಿದ್ದಾ? ಗೊತ್ತೇ ಇರಲಿಲ್ಲವಲ್ಲ ಎಂಬ ವಿಷಾದ ಹುಟ್ಟಿಸಿ 'ವಿವೇಕವೇ ಕೊಲೆಯಾಯಿತೇ ಎಂಬ ಭಾವವನ್ನು ನಮ್ಮ ಮನಸ್ಸಿನಲ್ಲಿ ಮೂಡಿಸುತ್ತದೆ. ಕೊಲೆಗಳು ಇಷ್ಟು ಸುಲಭವಾಗಿರುವ ಹೊತ್ತಿನಲ್ಲೂ ಇದೊಂಥರ ಅಂತರಂಗದಲ್ಲಿ ಪ್ರೀತಿಯ ಮೊಂಬತ್ತಿ ಹೊತ್ತಿಸುವ ಪ್ರಯತ್ನ. ಈ ಕೃತಿ ಯಾವುದೇ ಅಂತಿಮ ತೀರ್ಪು ನೀಡದೆ ಓದುಗರೊಂದಿಗೆ ಆಪ್ತ ಸಂವಾದ ನಡೆಸುತ್ತದೆ. ಕಥೆಯಲ್ಲದ, ಚಿತ್ರ, ಸುದ್ದಿಯೂ ಆಗಲೊಲ್ಲದ ಇಲ್ಲಿನ ಬರಹಕ್ಕೆ ಸತ್ಯ ಹೇಳುವ ಕಳಕಳಿಯಿದೆ. ಇರ್ಷಾದರ ಬರವಣಿಗೆಗೆ ಪ್ರಾಮಾಣಿಕತೆಯ ಚೌಕಟ್ಟಿದೆ. ಸುಧೀರ್ ಕುಮಾರ್ ಮುರೊಳ್ಳಿ ಈ ಕೃತಿ ಕಾಣಿಸುವುದು ಕಳೆದುಕೊಂಡವರ ನೋವನಷ್ಟೇ ಅಲ್ಲ, ಬದುಕಿರುವವರ ಧೈರ್ಯವನ್ನು ಕೂಡಾ. ತಾಯಿ ತನ್ನ ಮಗನ ಕೊನೆಯ ಫೋಟೋ ನೋಡಿಕೊಂಡು ನಗು ಮುಖವಿಲ್ಲದೆ ದಿನ ಕಳೆಯುವ ದೃಶ್ಯ, ತಂದೆಯನ್ನು ಕಳೆದುಕೊಂಡ ಹುಡುಗಿಯರು ಪುಸ್ತಕದ ಪುಟಗಳನ್ನು ತೆರೆದು ಮತ್ತೆ ಮುಚ್ಚುವ ಕ್ಷಣ, ಸ್ನೇಹಿತನನ್ನು ಕಳೆದುಕೊಂಡರೂ ದ್ವೇಷಕ್ಕೆ ಆಶ್ರಯಕೊಡದ ಯುವಕರ ಸಮಾಧಾನ..ಇವೆಲ್ಲವೂ ಈ ನೆಲದ ಮಣ್ಣಲ್ಲಿ ಇಂದಿಗೂ ಬಿತ್ತಿರುವ ಮನುಷ್ಯತ್ವದ ಬೀಜಗಳು. ಇಲ್ಲಿ ದ್ವೇಷಕ್ಕಿಂತ ದೊಡ್ಡದು ಮನುಷ್ಯ ಪ್ರೀತಿ ಮತ್ತು ಕಾಳಜಿ. ಪ್ರತೀಕಾರಕ್ಕಿಂತ ಬಲವಾದುದು ಒಂದು ಹೃದಯದ ನೋವನ್ನು ಇನ್ನೊಂದು ಹೃದಯ ಅರಿಯುವ ಸಾಮರ್ಥ್ಯ. ಈ ಪುಸ್ತಕವು ಕರಾವಳಿಯಲ್ಲಿ ಹರಡುತ್ತಿರುವ ಕತ್ತಲಿಗೆ ಸಣ್ಣದೊಂದು ಬೆಳಕಿನ ಪರಿಹಾರ ಎಂದು ಹೇಳಬಲ್ಲೆ. ಇದಕ್ಕಾಗಿ ಶ್ರಮಿಸುತ್ತಿರುವ ಇರ್ಷಾದ್ ಉಪ್ಪಿನಂಗಡಿ ಅಭಿನಂದನಾರ್ಹರು. ವಿದ್ಯಾ ದಿನಕರ್
ಇರ್ಷಾದ್ ಉಪ್ಪಿನಂಗಡಿ | Irshad Uppinangadi |
0 average based on 0 reviews.