| Category: | ಕನ್ನಡ |
| Sub Category: | ಇತಿಹಾಸ |
| Author: | ಸಿರಿ ಮೈಸೂರು | Siri Mysore |
| Publisher: | Sneha Book House |
| Language: | Kannada |
| Number of pages : | 164 |
| Publication Year: | 2026 |
| Weight | 150 |
| ISBN | |
| Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಮೈಸೂರು ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಅರಮನೆ, ಪರಂಪರೆ, ಇತಿಹಾಸ, ದಸರಾ ಹಾಗೂ ಶಾಂತಿಯುತ ಜೀವನ. ಇಲ್ಲಿನ ಒಂದೊಂದು ರಸ್ತೆ, ಕಟ್ಟಡ, ವೃತ್ತಗಳೂ ಒಂದೊಂದು ಕಥೆಗಳನ್ನು ಹೇಳುತ್ತವೆ. ಮೈಸೂರಿನ ಪರಂಪರೆ, ಇತಿಹಾಸವನ್ನು ಕೆದಕುತ್ತಾ ಹೋದರೆ ನಿತ್ಯನೂತನ ಎನಿಸುವ ಸಾಕಷ್ಟು ವಿಷಯಗಳನ್ನು ತಿಳಿದುಕೊಳ್ಳಬಹುದು. ಮೈಸೂರಿನವರೇ ಆದ ಎಷ್ಟೋ ಜನರಿಗೆ ತಾವು ದಿನವೂ ಓಡಾಡುವ ರಸ್ತೆ, ಅದರ ಹೆಸರು ಹಾಗೂ ಅಲ್ಲಿ ನಡೆದಿರಬಹುದಾದ ಐತಿಹಾಸಿಕ ಘಟನೆಗಳ ಅರಿವೇ ಇರುವುದಿಲ್ಲ. ಮೈಸೂರಿನ ಪ್ರಮುಖ ಐತಿಹಾಸಿಕ ಘಟ್ಟಗಳ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದಾದರೂ ಈ ರೀತಿ ಗಲ್ಲಿಗಲ್ಲಿಗಳಲ್ಲಿ ಸಿಗುವ ಆಶ್ಚರ್ಯಕರ ಪರಂಪರೆ, ಇತಿಹಾಸದ ಕುರುಹುಗಳ ಬಗ್ಗೆ ಹೆಚ್ಚು ಮಾಹಿತಿ ಸಿಗುವುದು ಕಷ್ಟಸಾಧ್ಯ. ನೋಡಿದರೆ ಬಹಳವೇ ಸಾಮಾನ್ಯ ಎನಿಸುವ ಕಟ್ಟಡವೊಂದಕ್ಕೆ ಅದೆಷ್ಟೋ ವರ್ಷಗಳ ಇತಿಹಾಸ ಇರುತ್ತದೆ, ಅದರ ಹೆಸರಿನ ಹಿಂದೆ ದೊಡ್ಡದೊಂದು ಕಥೆ ಇರುತ್ತದೆ. ಆ ಕಟ್ಟಡ ಅಲ್ಲೇ ಏಕೆ ನಿರ್ಮಾಣವಾಯಿತು ಎಂಬುದಕ್ಕೆ ವಿಶೇಷ ಕಾರಣವೂ ಇರುತ್ತದೆ. ಇದರೊಂದಿಗೆ ನಗರದ ತುಂಬೆಲ್ಲಾ ಯಾರಿಗೂ ಗೊತ್ತಿರದ ಅದೆಷ್ಟೋ ಐತಿಹಾಸಿಕ ಸ್ಥಳಗಳು ಸಹ ಇವೆ. ಇಂತಹ ಆಸಕ್ತಿದಾಯಕ ಸಂಗತಿಗಳನ್ನೆಲ್ಲಾ ನಿಮ್ಮ ಮುಂದಿಡುವ ಪ್ರಯತ್ನವೇ ಮೈಸೂರಿನ ಪರಂಪರೆಯ ಪುಟಗಳು. ಬನ್ನಿ, ಮೈಸೂರಿನ ಪರಂಪರೆಯ ಪುಟಗಳನ್ನು ಒಂದೊಂದಾಗಿ ತಿರುವೋಣ.
ಸಿರಿ ಮೈಸೂರು | Siri Mysore |
0 average based on 0 reviews.