#
nil
ಎಚ್.ಎಸ್. ರಾಘವೇಂದ್ರ
ಜೀವ ಕಾರುಣ್ಯದ ಕವಿತೆಗಳನ್ನು ಒಳಗೊಂಡ ಈ ಕೃತಿಯನ್ನು ಓದಲು ಹತ್ತು ಹಲವು ಕಾರಣಗಳಿವೆ. ಬಹುತ್ವದ ಆಶಯವನ್ನು ಕಟ್ಟಿಕೊಡುವ ಸಂಕಲನ ಸಮಕಾಲೀನ ವೈರುಧ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ.
'ಇಲ್ಲಿಂದ ಮುಂದೆಲ್ಲ ಕಥೆ' ಇತ್ತೀಚಿನ ಕೆಲವು ವರ್ಷಗಳಲ್ಲಿ ಕನ್ನಡ ಕಥಾಲೋಕದ ಚಾಚುಗಳ ಅತ್ಯುತ್ತಮ ಮಾದರಿಯಾಗಿದೆ. ಈ ಪ್ರಯತ್ನಕ್ಕೆ ಹುಡುಕಾಟಕ್ಕೆ ಎರಡು ಲಕ್ಷಣಗಳಿವೆ. ಒಂದು, ತಾತ್ವಿಕವಾಗಿ ಮತ್ತು ತಾಂತ್ರಿಕವಾಗಿ ಈ ತನಕದ ಕನ್ನಡ ಕಥಾಪರಂಪರೆಯ ಧಾತುಗಳನ್ನೆಲ್ಲ ಒಳಗೊಳ್ಳುವ ಹಂಬಲ ಮತ್ತೊಂದು, ಮಾನುಷಲೋಕವನ್ನು ಕರಾರುಗಳಿಲ್ಲದೆ ಒಳಗೊಳ್ಳುವ ತವಕ ಕಥೆಗಾರರಾಗಿ ಮೊದಲ ಸಂಕಲನದಿಂದಲೂ ರಘುನಾಥರು ಉಳಿಸಿಕೊಂಡು ಬಂದಿರುವ ಉತ್ಕಟತೆ ಮತ್ತು ತನ್ಮಯತೆ ಅವರನ್ನು ಕನ್ನಡದ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರನ್ನಾಗಿಸಿವೆ. ಪ್ರತಿಭೆಯ ಜೊತೆಗೆ ಬರವಣಿಗೆಯಲ್ಲಿ ಅವಸರ ತೋರಿಸದೇ ಇವರು ಕಾಯ್ದುಕೊಂಡು ಬಂದಿರುವ ಸಂಯಮದ ಪಾತ್ರವೂ ದೊಡ್ಡದು. ರಘುನಾಥರ ಬರವಣಿಗೆಯ ಬಗ್ಗೆ ವ್ಯಕ್ತಿತ್ವದ ಬಗ್ಗೆ ನನಗೆ ಸಕಾರಣವಾದ ಮೆಚ್ಚುಗೆ. ಅವರ ಸಾಹಿತ್ಯಕ ಸಂವೇದನೆ ಮತ್ತು ಸಾಂಸ್ಕೃತಿಕ ಎಚ್ಚರ ಇದಕ್ಕೆ ಮುಖ್ಯ ಕಾರಣ, ಇತ್ತೀಚಿನ ದಿನಗಳಲ್ಲಿ ಸಮಕಾಲೀನ ಬೆಳವಣಿಗೆಗಳನ್ನು ಕುರಿತ ಅವರ ಪ್ರತಿಕ್ರಿಯೆಗಳ ಸ್ಪಷ್ಟತೆ ಮತ್ತು ನಿರ್ಭಯವಾದ ಮಾತುಗಳು ಎರಡೂ ಅವರ ಮೇಲಿನ ಭರವಸೆ ಮತ್ತು ಗೌರವವನ್ನು ಹೆಚ್ಚಿಸುತ್ತಿವೆ.
ವಿವೇಕ್ ಶಾನಭಾಗ್
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ.
ಕನ್ನಡದ ಜನಪ್ರಿಯ ಲೇಖಕರು, ಪತ್ರಕರ್ತರು ಆದ ಜೋಗಿ ಅವರ ‘ಇವರು ಅವರು ದೇವರು’ ಪುಸ್ತಕ ವ್ಯಕ್ತಿಚಿತ್ರಗಳನ್ನು ಕುರಿತ ಆಪ್ತ ಬರಹವಾಗಿದೆ. ಬದುಕಿನಲ್ಲಿ ಒಡನಾಡಿದ ಲೇಖಕರು, ಪತ್ರಕರ್ತರು, ಬಂಧುಗಳ ವ್ಯಕ್ತಿತ್ವವನ್ನು ತಮ್ಮ ಅನುಭವಕ್ಕೆ ದಕ್ಕಿಸಿಕೊಂಡು ನುಡಿಚಿತ್ರಗಳಾಗಿ ಜೋಗಿ ಅವರು ಕಟ್ಟಿಕೊಟ್ಟಿದ್ದಾರೆ. ಇವರ ಬರಹದಲ್ಲಿ ಭಾವುಕತೆ ಇದೆ, ಹಸನುಗೊಳಿಸುವ ಬದುಕಿದೆ, ಜೀವನದಲ್ಲಿ ಏನೇ ಬಂದರೂ ಜಯಿಸಿ ನಿಲ್ಲುವ ಆತ್ಮಸೈರ್ಯದ ಮಾರ್ಗದರ್ಶಿ ನೋಟವಿದೆ. ಈ ಪುಸ್ತಕ ಓದುತ್ತಾ ಹೋದರೆ ನಮ್ಮ ಬದುಕಿನಲ್ಲಿ ಬಂದ ಒಡನಾಡಿಗಳ ನೆನಪು ಮರುಕಳಿಸದೇ ಇರದು. ಹಾಗಾಗಿ ಓದಲು ನಿಮಗೆ ಇದೊಂದು ಉತ್ತಮ ಪುಸ್ತಕ.
ರಾಧಾಕೃಷ್ಣ ಕೆ ವಿ
ಲಂಕೇಶರು ಒಮ್ಮೆ ಅತಿಯಾದ ವೈಚಾರಿಕತೆ ಕೂಡ ಬದುಕನ್ನು ಶುಷ್ಕವಾಗಿ ಮಾಡುತ್ತದೆ' ಎಂದು ಹೇಳಿದ್ದರು. ಆ ಮಾತನ್ನು ರಘುನಾಥ್ ಅವರ ಬರವಣಿಗೆ ನೆನಪಿಸುವಂತಿದೆ. ಭಾರತದ ಮಟ್ಟಿಗೆ ಪತ್ರಿಕೋದ್ಯಮದಲ್ಲಿ ಎರಡು ದೊಡ್ಡ ಮನಸ್ಸುಗಳು ಈ ದೇಶವನ್ನು ಕಟ್ಟುವಲ್ಲಿ ಕೆಲಸ ಮಾಡಿವೆ. ಒಂದು ಗಾಂಧಿ. ಇನ್ನೊಂದು ಬಾಬಾ ಸಾಹೇಬ್ ಅಂಬೇಡ್ಕರ್, ಈ ಎರಡೂ ಮನಸುಗಳ ಕನಸುಗಳ ನೆರಳು ರಘುನಾಥರ ಮನಸ್ಸಿನಲ್ಲಿ ಹಾಯ್ದುಹೋಗಿದೆ ಎಂಬುದನ್ನು ಇಲ್ಲಿನ ಲೇಖನಗಳು ಸಾಕ್ಷೀಕರಿಸುತ್ತವೆ. ಇಳಿಸಲಾಗದ ಶಿಲುಬೆ' ಕೃತಿಯ ಶೀರ್ಷಿಕೆಯೇ ಜಗದ ದುಃಖಗಳನ್ನು ಅರಿಯುವ ಮಾತನ್ನು ಹೇಳುತ್ತಿದೆ. ಈ ಹೊತ್ತಿನ ಮತ್ತು ಯಾವತ್ತಿನ ಈ ದೇಶದಲ್ಲಿ ಜಾತಿ, ಧರ್ಮ, ಕೋಮುವಾದ ಮತ್ತೆ ಮತ್ತೆ ಪೂತ್ಕರಿಸುತ್ತಲೇ ಇವೆ. ಇವುಗಳನ್ನು ಬೇರುಸಹಿತ ಕೀಳಲು ಸಾಧ್ಯವಿಲ್ಲ. ಆದರೆ. ಕೊನೆ ಪಕ್ಷ ಹದಮಾಡಲು ಪ್ರಯತ್ನಿಸಬಹುದು. ಹಾಗೆ ಹದ ಮಾಡುವ ಕೆಲಸವನ್ನು ರಘುನಾಥ್ ಬರೆಯುವ ಮೂಲಕ ಮಾಡುತ್ತಿದ್ದಾರೆ. ಕೆಲವು ಲೇಖನಗಳಲ್ಲಿ ಕೆಲವು ವಿಷಯಗಳ ಬಗ್ಗೆ ಕಠಿಣ ಶಬ್ದಗಳಲ್ಲಿ ಹೇಳಿದ್ದಾರಾದರೂ, ಯಾರ ವಿರುದ್ದ ಹೇಳಿದ್ದಾರೋ ಅವರು ಅದನ್ನು ಒಪ್ಪಿಕೊಳ್ಳುವ ರೀತಿಯಲ್ಲಿ ಅವರ ಬರವಣಿಗೆಯಿದೆ. ಅಕ್ಷರಗಳನ್ನು ವಾಕ್ಯ ಮಾಡುವಾಗ ತುಂಬ ಸೂಕ್ಷ್ಮವಾಗಿ ಬರೆಯುತ್ತಾ, ಆ ವಾಕ್ಯ ಮಲಿನವಾಗದಂತೆ ಎಚ್ಚರವಹಿಸುವುದು ರಘುನಾಥ್
Showing 421 to 450 of 3345 results