
ಇದು ಪುರಾಣ ಗ್ರಂಥವಲ್ಲ, ಪ್ರಮಾಣ ಗ್ರಂಥ. ಪ್ರಪಂಚೀಕರಣದ ಪ್ರವಾಹದಲ್ಲಿ ಸಹಜ ಜೀವನದ ಮೌಲ್ಯಗಳೇ ಸಾಮೂಹಿಕವಾಗಿ ಆತಂಕಕ್ಕೆ ಒಳಗಾಗಿರುವ ಇಂದಿನ ಕಳವಳಕಾರಿ ಸನ್ನಿವೇಶದಲ್ಲಿ ಇಂತಹ ಚಿಂತನಶೀಲ ಗ್ರಂಥಗಳು ನಮಗೆ ಸಾಂತ್ವನ ನೀಡುತ್ತವೆ. ಈ ಗ್ರಂಥದ ಲೇಖಕರು ಇದನ್ನು ಬರೆಯುವ ಲೇಖನಿಯಲ್ಲಿ, ಕಾಗದದ ಹಾಳೆಯಲ್ಲಿ ಲಿಂ.ಪೂಜ್ಯಶ್ರೀಗಳನ್ನೇ ಕಂಡಿದ್ದಾರೆ. ತಾವು ಕಂಡ ಆ ಮಹಾದಾರ್ಶನಿಕ ಗುರುವಿನ ದರ್ಶನ ಓದುಗರಿಗೂ ದೊರೆಯುವಂತೆ ಮಾಡಿದ್ದಾರೆ.
Category: | ಕನ್ನಡ |
Sub Category: | ಆತ್ಮಕಥೆ ಜೀವನ ಚರಿತ್ರೆ |
Author: | ಎಚ್ ಎಸ್ ಸಿದ್ಧಗಂಗಪ್ಪ | H S Siddagangappa |
Publisher: | |
Language: | Kannada |
Number of pages : | |
Publication Year: | 2025 |
Weight | 2000 |
ISBN | |
Book type | Paperback |
Delivery between 2-6 Days
No returns accepted. Please refer our full policy
Your payments are 100% secure
ಸಿದ್ದಗಂಗಪ್ಪನವರು ಒಂದು ರೀತಿಯಲ್ಲಿ ಶಬ್ದಲೇಖಕರಲ್ಲ; ನಿಶ್ಯಬ್ದ ಲೇಖಕರು. ಅವರದು ಶಬ್ದ ಸಂಭ್ರಮವಿಲ್ಲದ ಸರಳ ಬರವಣಿಗೆ ಸ್ನಾತಕೋತ್ತರ ಪದವೀಧರರಾದರೂ, ಅವರು ಹೆಚ್ಚು ಪ್ರಭಾವಿತರಾಗಿರುವುದು ಗ್ರಂಥಾಧ್ಯಯನದಷ್ಟೇ ಪೂಜ್ಯಶ್ರೀ ಶಿವಕುಮಾರ ಸ್ವಾಮಿಗಳ ದಿವ್ಯಕೃಪೆಯಿಂದ, ಪೂಜ್ಯರನ್ನು ಕುರಿತ ಅವರ ಬರಹದ ಪ್ರತಿಯೊಂದು ಶಬ್ದದಲ್ಲೂ ಈ ಭಾವ ತುಂಬಿಕೊಂಡಿರುವುದು ಕಂಡುಬರುತ್ತದೆ. ಸಿದ್ದಗಂಗಾ ಕ್ಷೇತ್ರದ ಬಗೆಗೆ ಅವರ ಮಾತೊಂದು ಹೀಗಿದೆ: "ಅನಾಥವಾಗಿ ಬಿದ್ದ ಕಲ್ಲುಗಳನ್ನು ಕಡೆದು, ಕಲಾತ್ಮಕ ಮೂರ್ತಿಗಳನ್ನಾಗಿ ರೂಪಿಸಿ, ಲೋಕಮನ್ನಣೆ ಪಡೆಯುವಂತೆ ಮಾಡುವ ಮಹಾಶಿಲ್ಪಕಲಾ ಕೇಂದ್ರ-ಸಿದ್ಧಗಂಗಾ."
ಸಿದ್ದಗಂಗಪ್ಪನವರಲ್ಲಿ ನಾನು ಕಂಡಿರುವ ಗಮನಾರ್ಹ ಗುಣಗಳೆಂದರೆ, ಸಾಹಿತ್ಯ ಶ್ರೀಮಂತಿಕೆ, ಚಾರಿತ್ರಿಕ ಪರಂಪರೆ ಮತ್ತು ಸಾಂಸ್ಕೃತಿಕ ಸೌಂದರ್ಯಗಳನ್ನು ಜನಮನಕ್ಕೆ ಮುಟ್ಟಿಸುವ ಬಗೆಗೆ ಅವರಿಗಿರುವ ಶ್ರದ್ಧಾಸಕ್ತಿ ಮತ್ತು ಸಮರ್ಪಿತ ದುಡಿಮೆ. ಅವರು ಸಾಹಿತ್ಯದ ಬೆಳಕಿನಲ್ಲಿ ತಮ್ಮ ಬದುಕನ್ನು, ಆ ಬದುಕಿನ ಬೆಳಕಿನಲ್ಲಿ ತಮ್ಮನ್ನು ತಾವೇ ರೂಪಿಸಿಕೊಂಡಿರುವ ಪ್ರಯತ್ನಶೀಲ ವ್ಯಕ್ತಿ. ಸತತ ಚಿಂತನೆ, ಅಧ್ಯಯನ, ಬರಹಗಳ ಹೊರತಾಗಿ ಬೇರಾವ ಕಡೆಗೂ ಮನ ಹರಿಯಬಿಡದ ಆತ್ಮಸಂಯಮಿ ಸಿದ್ದಗಂಗಪ್ಪ ಅವರು.
ಎಚ್ ಎಸ್ ಸಿದ್ಧಗಂಗಪ್ಪ | H S Siddagangappa |
0 average based on 0 reviews.